ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಸೂರೆಗೊಂಡ ಜಾನಪದ ನೃತ್ಯ ಪ್ರದರ್ಶನ

Last Updated 22 ಆಗಸ್ಟ್ 2019, 12:49 IST
ಅಕ್ಷರ ಗಾತ್ರ

ರಾಮನಗರ: ಇಲ್ಲಿನ ಜಾನಪದ ಲೋಕದ ಅಂಗಳದಲ್ಲಿ ಗುರುವಾರ ಉತ್ತರ–ದಕ್ಷಿಣ, ಈಶಾನ್ಯ ರಾಜ್ಯಗಳ ಸಂಸ್ಕೃತಿಯ ಸಮಾಗಮವಾಗಿತ್ತು. ವಿವಿಧ ರಾಜ್ಯಗಳ ಕಲಾವಿದರು ನಡೆಸಿಕೊಟ್ಟ ಜಾನಪದ ನೃತ್ಯ ಪ್ರದರ್ಶನವು ನೋಡುಗರನ್ನು ರೋಮಾಂಚನಗೊಳಿಸಿತು.

ವಿಶ್ವ ಜಾನಪದ ದಿನಾಚರಣೆ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಎರಡು ಗಂಟೆಗೂ ಹೆಚ್ಚು ಕಾಲ ಹತ್ತಕ್ಕೂ ಹೆಚ್ಚು ಕಲಾ ತಂಡಗಳು ಜಾನಪದ ನೃತ್ಯ ಪ್ರದರ್ಶಿಸಿದವು. ಈಶಾನ್ಯ ರಾಜ್ಯಗಳಲ್ಲಿನ ಅಪರೂಪದ ಬುಡಕಟ್ಟು ಸಮುದಾಯಗಳ ನೃತ್ಯಗಳು ವೇದಿಕೆಯಲ್ಲಿ ಮೂಡಿಬಂದವು. ಜೊತೆಗೆ ನಮ್ಮದೇ ಆದ ಡೊಳ್ಳು, ವೀರಗಾಸೆ. ಪಟ ಕುಣಿತಗಳೂ ಪ್ರದರ್ಶನಗೊಂಡವು.

ಅರುಣಾಚಲ ಪ್ರದೇಶ –ಬ್ರೊ-ಜಾಯಿ, ಮೇಘಾಲಯ-ದ ಶಾದ್ ಸ್ನಗೈ, ಅಸ್ಸಾಂನ ಧಮಾಯಿ ಕಿಕನ್, ಮಣಿಪುರದ ಲೈಹಾರೊಬ ಟಾಂಗ್ಟ್, ತ್ರಿಪುರದ ಹೊಜಾಗಿರಿ, ನಾಗಾಲ್ಯಾಂಡ್ – ಯುದ್ಧ ವೀರಕುಣಿತ, ಮಿಜೊರಾಂ - ಸರ್ಲಾಮ್ಕೈ ನೃತ್ಯ ಪ್ರಕಾರಗಳನ್ನು ಕಲಾವಿದರು ಪ್ರದರ್ಶಿಸಿದರು.

ಸ್ಥಳೀಯ ಕಲಾವಿದರಿಗೂ ಕಾರ್ಯಕ್ರಮದ ವೇದಿಕೆಯಲ್ಲಿ ಅವಕಾಶ ದೊರೆತಿತ್ತು. ಶಿವಣ್ಣ ನೇತೃತ್ವದ ತಂಡವು ಪೂಜಾ ಕುಣಿತ ಪ್ರದರ್ಶನ ನೀಡಿತು. ಪಾರ್ಥ ನೇತೃತ್ವದಲ್ಲಿ ಬೈರಾಪಟ್ಟಣ ಶಾಲೆಯ ವಿದ್ಯಾರ್ಥಿಗಳು ಪಟ ಕುಣಿತ ಪ್ರದರ್ಶಿಸಿದರು. ಜೊತೆಗೆ ಡೊಳ್ಳು ಕುಣಿತ, ವೀರಗಾಸೆ, ನಗಾರಿ ವಾದ್ಯ ಮೊದಲಾದ ಕಲಾವಿದರೂ ನೋಡುಗರನ್ನು ರಂಜಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT