ಭಾನುವಾರ, ಅಕ್ಟೋಬರ್ 20, 2019
22 °C
ಇತಿಹಾಸ ಶಿಕ್ಷಕ ಡಾ. ಚಿಕ್ಕಚನ್ನಯ್ಯ ಅಭಿಮತ

ಬುದ್ಧ, ಬಸವೇಶ್ವರ, ಉಪನಿಷತ್‌ನ ರೂಪ ಗಾಂಧಿ

Published:
Updated:
Prajavani

ಚನ್ನಪಟ್ಟಣ: ‘ಗಾಂಧಿ ಹಾಗೂ ಲಾಲ್ ಬಹದ್ದೂರ್‌ ಶಾಸ್ರ್ತಿ ಅವರು ದೇಶದ ಎರಡು ಅಪೂರ್ವ ರತ್ನಗಳು’ ಎಂದು ಸಹಾಯಕ ಪ್ರಾಧ್ಯಾಪಕ ಡಾ.ಅಣ್ಣಯ್ಯ ತೈಲೂರು ಅಭಿಪ್ರಾಯಪಟ್ಟರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವಿಭಾಗದ ವತಿಯಿಂದ ಬುಧವಾರ ನಡೆದ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯಲ್ಲಿ ಅವರು ಮಾತನಾಡಿದರು.

‘ಈ ಇಬ್ಬರು ಮಹನೀಯರ ಆದರ್ಶ, ಪ್ರಾಮಾಣಿಕತೆ, ದೇಶಭಕ್ತಿ ಯುವ ಸಮುದಾಯಕ್ಕೆ ದಾರಿ ದೀಪವಾಗಬೇಕು. ಗಾಂಧೀಜಿ ಸತ್ಯ, ಅಹಿಂಸೆ, ತ್ಯಾಗ ಮನೋಭಾವದ ಮೂಲಕ ಮಾದರಿಯಾದವರು. ಲಾಲ್ ಬಹುದ್ದೂರ್ ಶಾಸ್ತ್ರಿ ಸರಳತೆ, ಪ್ರಾಮಾಣಿಕತೆ ಮೆರೆದವರು. ಯುವಸಮಾಜ ಈ ಇಬ್ಬರ ಆದರ್ಶಗಳನ್ನು ಅಳವಡಿಸಿಕೊಂಡಾಗ ಜಯಂತಿಗೆ ಅರ್ಥ ಬರುತ್ತದೆ’ ಎಂದರು.

ಇತಿಹಾಸ ವಿಭಾಗದ ಡಾ. ಚಿಕ್ಕಚನ್ನಯ್ಯ ಮಾತನಾಡಿ, ‘ಉಪನಿಷತ್ತಿನ ಪ್ರಮುಖ ಸಾರಗಳು, ಗೌತಮ ಬುದ್ಧ, ಬಸವೇಶ್ವರ ಮೊದಲಾದ ಮಹಾನ್ ಚೇತನಗಳ ಒಟ್ಟು ರೂಪವೇ ಮಹಾತ್ಮ ಗಾಂಧಿ. ವಿದ್ಯಾರ್ಥಿಗಳು ಅವರ ಆದರ್ಶ ಪಾಲನೆ ಜೊತೆಗೆ ಸ್ವಚ್ಛತೆ, ಪ್ಲಾಸ್ಟಿಕ್ ಬಳಕೆ ನಿಷೇಧ ಮೊದಲಾದ ವಿಚಾರಗಳನ್ನು ಜಾರಿಗೊಳಿಸಲು ಮುಂದಾಗಬೇಕು’ ಎಂದರು.

ಪ್ರಾಂಶುಪಾಲ ಡಾ.ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಸಸಿ ನೆಡಲಾಯಿತು. ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

Post Comments (+)