ಉಚಿತ ಶಿಲ್ಪಕಲಾ ಶಿಕ್ಷಣ ತರಬೇತಿಗೆ ಆಹ್ವಾನ

ಶುಕ್ರವಾರ, ಏಪ್ರಿಲ್ 26, 2019
24 °C

ಉಚಿತ ಶಿಲ್ಪಕಲಾ ಶಿಕ್ಷಣ ತರಬೇತಿಗೆ ಆಹ್ವಾನ

Published:
Updated:

ರಾಮನಗರ: ಕೆನರಾ ಬ್ಯಾಂಕ್ ಪ್ರಾಯೋಜಿತ ಕೆಪಿಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆಯು ನಿರುದ್ಯೋಗಿ ಯುವಕರಿಗಾಗಿ ವಿವಿಧ ಕರಕುಶಲ ವಿಭಾಗಗಳಲ್ಲಿ ಉಚಿತ ತರಬೇತಿಗಾಗಿ ಅರ್ಜಿ ಆಹ್ವಾನಿಸಿದೆ.

ಮರ ಮತ್ತು ಕಲ್ಲು ಕೆತ್ತನೆ, ಲೋಹ ಶಿಲ್ಪ ವಿಭಾಗದ ತರಬೇತಿ ಅವಧಿಯು 18 ತಿಂಗಳಾಗಿದ್ದು, ಕುಂಭ ಕಲೆಯ (ಟೆರ್ರಾಕೋಟ) ತರಬೇತಿಯ ಅವಧಿಯು 6 ತಿಂಗಳಾಗಿರುತ್ತದೆ. ರಾಮನಗರ ಜಿಲ್ಲೆಯ ಬಿಡದಿ ಕೈಗಾರಿಕಾ ಪ್ರದೇಶದಲ್ಲಿ ಇರುವ ಸಂಸ್ಥೆಯಲ್ಲಿ ತರಬೇತಿ ನೀಡಲಾಗುವುದು.

ತರಬೇತಿಯು ಸಂಪೂರ್ಣ ಉಚಿತವಾಗಿದ್ದು, ಊಟ ಹಾಗೂ ವ್ಯವಸ್ಥೆಯೂ ಇದೆ. ತರಬೇತಿಗೆ ಬೇಕಾದ ಕಚ್ಚಾ ಸಾಮಗ್ರಿ, ತರಬೇತಿ ಪ್ರವಾಸವು ಉಚಿತವಾಗಿ ಸಿಗಲಿದೆ.

ಕನಿಷ್ಠ 7ನೇ ತರಗತಿ ಉತ್ತೀರ್ಣರಾದ , 18 ರಿಂದ 35 ವರ್ಷದ ಒಳಗಿನ ಯುವಕರು ಅರ್ಜಿ ಸಲ್ಲಿಸಬಹುದು.
ತರಬೇತಿ ಪ್ರವೇಶಕ್ಕಾಗಿ ಈ ತಿಂಗಳ 20ರಿಂದ ಮೇ 5ರವರೆಗೆ ನೇರ ಸಂದರ್ಶನವು ನಡೆಯಲಿದೆ.

ಆಸಕ್ತರು ವಿವರಗಳಿಗೆ ಎಂ, ನಾರಾಯಣಪ್ಪ, ನಿರ್ದೇಶಕರು, ಕೆನರಾ ಬ್ಯಾಂಕ್ ಪ್ರಾಯೋಜಿತ ಕೆ ಪಿ ಜೆ ಪ್ರಭು ಕರಕುಶಲ ತರಬೇತಿ ಸಂಸ್ಥೆ, ಜೋಗರದೊಡ್ಡಿ, ಬಿಡದಿ ಕೈಗಾರಿಕಾ ಪ್ರದೇಶ, ರಾಮನಗರ ಜಿಲ್ಲೆ–-562109, ವಿಳಾಸವನ್ನು ಸಂಪರ್ಕಿಸಬಹುದು.

ಮಾಹಿತಿಗೆ ಮೊಬೈಲ್‌ 9481739830, 8971253882, 9164984414 ಅಥವಾ ದೂರವಾಣಿಗೆ 080–-27287127ಗೆ ಕರೆ ಮಾಡಬಹುದು ಎಂದು ಪ್ರಕಟಣೆಯು ತಿಳಿಸಿದೆ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !