ದನಗಳ ಜಾತ್ರೆಗೆ ಉಚಿತ ಕುಡಿಯುವ ನೀರು

ಶನಿವಾರ, ಏಪ್ರಿಲ್ 20, 2019
32 °C
ಪುಣ್ಯಕೋಟಿಯ ಸಂತತಿ ಉಳಿಸಲು ಮನವಿ

ದನಗಳ ಜಾತ್ರೆಗೆ ಉಚಿತ ಕುಡಿಯುವ ನೀರು

Published:
Updated:
Prajavani

ಮಾಗಡಿ: ಭಾರತದ ಪುರಾಣಗಳಲ್ಲಿ ತಿಳಿಸಿರುವಂತೆ ಗೋವು, ದೇವತೆಗಳು ಮಾನವರಿಗೆ ನೀಡಿದ ವರಗಳಲ್ಲಿ ಒಂದು. ಪುಣ್ಯಕೋಟಿಯ ಸಂತತಿ ಉಳಿದರೆ ಮಾತ್ರ ದೇಶ ಉಳಿಯಲಿದೆ ಎಂದು ಮಾರುತಿ ಮೆಡಿಕಲ್ಸ್‌ ಮಾಲೀಕ ಮಹೇಂದ್ರ ಮುನೋತ್‌ ತಿಳಿಸಿದರು.

ತಿರುವೆಂಗಳನಾಥ ರಂಗನಾಥಸ್ವಾಮಿ ದನಗಳ ಜಾತ್ರೆಯಲ್ಲಿ ಉಚಿತವಾಗಿ ಕುಡಿಯುವ ನೀರು ಸರಬರಾಜಿಗೆ ಚಾಲನೆ ನೀಡಿ ಅವರು ಮಾತನಾಡಿದರು.

ಗೋವಿಗೂ, ಗೋಪಾಲಕ ಕೃಷ್ಣಪರಮಾತ್ಮನಿಗೂ ಅವಿನಾಭಾವ ಸಂಭಂದವಿದೆ. ಗೋವು ಸಮಸ್ತಲೋಕದ ತಾಯಿಯಿದ್ದಂತೆ. ಗೋವುಗಳನ್ನು ಕಟುಕರಿಗೆ ಮಾರಾಟ ಮಾಡಬೇಡಿ. ಗೋವಿನ ಸ್ಮರಣೆಯಲ್ಲಿ ಹಲವು ಹಬ್ಬಗಳು ಜಾತ್ರೆಗಳು ನಡೆಯುತ್ತಿವೆ. ಗೋವು ಭೂಮಿಯ ರಕ್ಷಕ,ಪ್ರಕೃತಿಯ ಪೋಷಕವಾಗಿದೆ. ಗೋವಿನ ಹಾಲು ಮತ್ತು ತುಪ್ಪವನ್ನು ಅಮೃತ ಸಮಾನವೆಂದು ಪರಿಗಣಿಸಲಾಗಿದೆ ಎಂದರು.

ಗೋವು ನಿಸ್ವಾರ್ಥ ಹಾಗೂ ತ್ಯಾಗದ ಸಂಕೇತ. ಗೋವಿನ ಸೆಗಣಿ ವಿಶ್ವದ ಅತ್ಯಂತ ಸರ್ವಶ್ರೇಷ್ಠ ಹಾಗೂ ಹಾನಿರಹಿತ ಗೊಬ್ಬರವಾಗಿದೆ. ಗೋವಿನ ಅಳಿವು ಕೃಷಿಯ ಅಳಿವಾದರೆ, ಕೃಷಿಯ ಅಳಿವು ಭಾರತದ ಅಳಿವೇ ಆಗಿದೆ. ಜೈನ ಆಗಮಗಳು ಕಾಮಧೇನು ಸ್ವರ್ಗದ ಹಸು ಎಂದು ಹೇಳುತ್ತ ಗೋವಧೆ ಮಹಾಪಾಪ ಎಂದು ತಿಳಿಸಿವೆ. ಗೋವಿನ ಮಹಿಮೆ ಅಪಾರ ಹಣಕ್ಕಾಗಿ ಮಾಡದಿರಿ, ಅದರೆ ಸಂಹಾರ, ಗೋವಧೆಗೆ ಕಡಿವಾಣ ಇರಲಿ ಎಂದರು.

ಏಪ್ರಿಲ್‌ 18 ಮತ್ತು 23 ರಂದು ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಕಡ್ಡಾಯವಾಗಿ ಗೋವಿನ ಸಂತತಿ ಉಳಿಸುವವರಿಗೆ ಮತದಾನ ಮಾಡಿ ಎಂದು ಮನವಿ ಮಾಡಿದರು.

ದನಗಳ ಜಾತ್ರೆಯಲ್ಲಿ ಬೆಲೆಬಾಳುವ ರಾಸುಗಳನ್ನು ಕಟ್ಟಿರುವ ಪಣಕನಕಲ್ಲು ಗ್ರಾಮದ ಶ್ರೀನಿವಾಸಯ್ಯ, ಗಂಗಣ್ಣ, ಕಾಳಿಯಪ್ಪ, ಮಾಳಗಾಳದ ಸೀತಾರಾಮೇಗೌಡ, ಸಂಪತ್‌, ಎಸ್‌.ಬ್ಯಾಡರಹಳ್ಳಿ ಸಿದ್ದಲಿಂಗಯ್ಯ, ಶಿವರುದ್ರಯ್ಯ ದನಗಳ ಜಾತ್ರೆಯ ಸಮಸ್ಯೆಗಳ ಬಗ್ಗೆ ವಿವರಿಸಿದರು.

ಭಾಗವಹಿಸಿದ್ದ ನೂರಾರು ರೈತರಿಗೆ ಮಹೇಂದ್ರ ಮುನೋತ್‌ ಕಾಮಧೇನು ಪುಸ್ತಕ ಮತ್ತು ಗೋವಿನ ಚಿತ್ರಪಟಗಳನ್ನು ಉಚಿತವಾಗಿ ವಿತರಿಸಿದರು. 4 ದಿನಗಳಿಂದಲೂ 5 ಟ್ಯಾಂಕರ್‌ಗಳ ಮೂಲಕ ಜಾತ್ರೆಯಲ್ಲಿ ಸೇರಿರುವ ರಾಸುಗಳಿಗೆ ಉಚಿತ ಕುಡಿಯುವ ನೀರು ಸರಬರಾಜು ಮಾಡುತ್ತಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !