ರಾಮನಗರ: ಐದು ದಿನಗಳ ಕಾಲ ನಡೆದ ಗಜಗೌರಿ ಸಾಮೂಹಿಕ ವ್ರತಾಚರಣೆಯು ಉದ್ಯಾಪನ ಹೋಮ , ಗಜಗೌರಿ ಮೂರ್ತಿಗಳ ವಿಸರ್ಜನೆಯೊಂದಿಗೆ ಸಂಪನ್ನವಾಯಿತು.

ನಗರದ ಅಗ್ರಹಾರದ ವ್ಯಾಸರಾಯರ ರಸ್ತೆಯಲ್ಲಿ ಶ್ರೀ ಸೀತಾರಾಮ ಸೇವಾ ಟ್ರಸ್ಟ್ ನೇತೃತ್ವದಲ್ಲಿ ಶ್ರೀ ಬಲಮುರಿ ಗಣಪತಿ ದೇವಸ್ಥಾನ ಟ್ರಸ್ಟ್ ಹಾಗೂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಮಂಡಳಿ ಸಹಯೋಗದಲ್ಲಿ ಫೆ. 4ರಿಂದ 8ರವರೆಗೆ ಹಮ್ಮಿಕೊಂಡಿದ್ದ 5 ದಿನಗಳ ಗಜಗೌರಿ ಸಾಮೂಹಿಕ ವ್ರತಾಚರಣೆ ಭಾನುವಾರ ಸಂಪನ್ನಗೊಂಡಿತು.

ಅಂತಿಮ ದಿನದಂದು ನಗರದ ಪ್ರಮುಖ ರಸ್ತೆಗಳಲ್ಲಿ ನಡೆದ ಆನೆ ಮೇಲೆ ಗಜ ಗೌರಿ ಮೂರ್ತಿಗಳ ಮೆರವಣಿಗೆ ಗಮನ ಸೆಳೆಯಿತು. 4 ಮತ್ತು 5ರಂದು ವಾಸ್ತು ಹೋಮ, ರಕ್ಷೋಗ್ನ ಹೋಮ, ದಿಗ್ಬಲಿ ಪೂಜೆ, ರುದ್ರ ಹೋಮ, ಮೃತ್ಯುಂಜಯ ಹೋಮ ಮತ್ತು ಆಶ್ಲೇಷ ಬಲಿ ಪೂಜೆ, 6ರಂದು ಗಜಗೌರಿ ಸಾಮೂಹಿಕ ವ್ರತಾಚರಣೆಯಲ್ಲಿ 108 ದಂಪತಿಗಳು ಪೂಜಾ ಕಾರ್ಯನೆರೆವೇರಿಸಿದರು.

7ರಂದು ಪೌರ ಕಾರ್ಮಿಕರಿಗೆ ಮಡಲಕ್ಕಿ ತುಂಬಲಾಯಿತು. 10 ಸಾವಿರ ಗಾಯತ್ರಿ ಮಂತ್ರ ಜಪ ಕಾರ್ಯ ನೆರೆವೇರಿತು. ಅಖಂಡ ಭಜನೆ, ದುರ್ಗಾ ದೀಪ ನಮಸ್ಕಾರ ಮುಂತಾದ ಧಾರ್ಮಿಕ ಕಾರ್ಯಳು ಜರುಗಿದವು. 8ರಂದು ಬೆಳಿಗ್ಗೆ ಶಿವಗಂಗೆಯಿಂದ ತರಿಸಿ ಶಿವ-ಪಾರ್ವತಿ ಮೂರ್ತಿಗಳಿಗೆ ಗಿರಿಜಾ ಕಲ್ಯಾಣ ನೆರವೇರಿತು. ತಲಕಾಡಿನ ಬಾಲಕೃಷ್ಣಾನಂದ ಮಹಾಸಂಸ್ಥಾನದ ಗೋವಿಂದಾನಂದ ಸರಸ್ವತಿ ಸ್ವಾಮೀಜಿ ಆಶೀವರ್ಚನ ನೀಡಿದರು.

ಸಂಜೆ ನೊಣವಿನಕೆರೆಯ ಕಾಡಸಿದ್ದೇಶ್ವರ ಮಠದ ಲಕ್ಷ್ಮಿ ಆನೆ ಮೇಲೆ ಗಜಗೌರಿಯ ಮೂರ್ತಿಗಳನ್ನಿರಿಸಿ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಜೊತೆಗೆ ಅಲಂಕೃತ ಬೆಳ್ಳಿ ರಥಗಳಲ್ಲೂ ಮೂರ್ತಿಗಳ ಮೆರವಣಿಗೆ ನಡೆಯಿತು. ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅಧ್ಯಕ್ಷತೆಯಲ್ಲಿ ನಡೆದ ಮೆರವಣಿಗೆಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಚಾಲನೆ ನೀಡಿದರು. ರೇವಣಸಿದ್ದೇಶ್ವರ ಮಠದ ರಾಜಶೇಖರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ವ್ರತಾಚರಣೆ ನಿಮಿತ್ತ ಮಾಗಡಿಯಲ್ಲಿ ಮಣ್ಣಿನಿಂದ ಸಿದ್ದಗೊಂಡು ಸ್ಥಾಪಿಸಲಾಗಿದ್ದ 9 ಗೌರಿಗಳಾದ ಗಜಗೌರಿಯ, ಸ್ವರ್ಣಗೌರಿ, ಸೌಭಾಗ್ಯ ಗೌರಿ, ಸೋಮಾವತಿ ಗೌರಿ, ಹಸ್ತ ಗೌರಿ, ಸಂಪದ ಗೌರಿ, ಸ್ಕಂದಮಾತಾ ಗೌರಿ, ಕನಕ ಗೌರಿ ವಿಜಯ, ಬೃಹದಾ ಗೌರಿ ಮೂರ್ತಿಗಳನ್ನು ನಗರದ ರಂಗರಾಯರದೊಡ್ಡಿ ಕೆರೆಯಲ್ಲಿ ವಿಸರ್ಜಿಸಲಾಯಿತು.

ಸಂಸದ ಡಾ. ಸಿ.ಎನ್. ಮಂಜುನಾಥ್, ಬಿಜೆಪಿ ರಾಜ್ಯ ವಕ್ತಾರ ಮೋಹನ್ ವಿಶ್ವ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ರಾಮನಗರ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎ.ಬಿ. ಚೇತನ್ ಕುಮಾರ್, ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ, ಜೆಡಿಎಸ್ ತಾಲ್ಲೂಕು ಅಧ್ಯಕ್ಷ ಸಬ್ಬಕೆರೆ ಶಿವಲಿಂಗಯ್ಯ, ಸೇರಿದಂತೆ ವಿವಿಧ ಮಠಾಧೀಶರು ಹಾಗೂ ಪ್ರಮುಖರು ವ್ರತಾಚರಣೆ ಸ್ಥಳಕ್ಕೆ ಭೇಟಿ ನೀಡಿದರು. ಕೆ.ವಿ. ಉಮೇಶ್, ಪಿ. ಶಿವಾನಂದ ಹಾಗೂ ಆರ್.ಜೆ. ಕುಮಾರಸ್ವಾಮಿ ನೇತೃತ್ವದಲ್ಲಿ ಯುವಕರು, ವಿವಿಧ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ವ್ರತಾಚರಣೆ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.