ಬುಧವಾರ, ಜನವರಿ 22, 2020
21 °C

ಅಕ್ರಮ ಜೂಜಾಟ– ಇಬ್ಬರ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಿಡದಿ: ತೊರೆದೊಡ್ಡಿ ವ್ಯಾಪ್ತಿಯ ಚೆನ್ನಪ್ಪ ಅವರ ಮಾವಿನ ತೋಟದಲ್ಲಿ ಅಕ್ರಮವಾಗಿ ಜೂಜಾಡುತ್ತಿದ್ದವರ ಮೇಲೆ ಸಬ್ ಇನ್‌ಸ್ಪೆಕ್ಟರ್‌ ಹರೀಶ್ ಮತ್ತು ಸಿಬ್ಬಂದಿ ಭಾನುವಾರ ದಾಳಿ ನಡೆಸಿದರು. ಇಬ್ಬರನ್ನು ಬಂಧಿಸಲಾಯಿತು ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಆರೋಪಿಗಳಾದ ಚಂದ್ರು ಮತ್ತು ಶಿವರಾಜು ಅವರನ್ನು ವಶಕ್ಕೆ ಪಡೆಯಲಾಯಿತು. ಆರೋಪಿಗಳಾದ ಆನಂದ್, ರವಿ, ಶರತ್, ಮಹದೇವಯ್ಯ, ಶ್ರೀರಾಮ, ಗಂಗಾಧರ, ರಾಮು, ತಲೆಮರೆಸಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ.

ಜೂಜಾಟದ ಪಣಕ್ಕೆ ಇಡಲಾಗಿದ್ದ ₹5,700 ಮತ್ತು ಒಂದು ನೀಲಿ ಬಣ್ಣದ ಟಾರ್ಪಲ್ ಹಾಗೂ 52 ಇಸ್ವೀಟ್ ಎಲೆಗಳನ್ನು ವಶಕ್ಕೆ ಪಡೆದಿರುವುದಾಗಿ ತಿಳಿಸಿವೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು