ಶನಿವಾರ, 12 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುದೂರು: ಗೌರಿ ಗಣೇಶ ಹಬ್ಬದ ಸಂಭ್ರಮ

Published : 8 ಸೆಪ್ಟೆಂಬರ್ 2024, 14:35 IST
Last Updated : 8 ಸೆಪ್ಟೆಂಬರ್ 2024, 14:35 IST
ಫಾಲೋ ಮಾಡಿ
Comments

ಕುದೂರು: ಗ್ರಾಮೀಣ ಪ್ರದೇಶಗಳಲ್ಲಿ ಜನರು ಗೌರಿ–ಗಣೇಶ ಹಬ್ಬವನ್ನು ಸಡಗರದಿಂದ ಆಚರಿಸಿದರು.ಯುವಕರು, ಮಕ್ಕಳು ಹಾಗೂ ಗಣಪತಿ ಯುವಕ ಸಂಘಗಳ ಕಾರ್ಯಕರ್ತರು ತಾತ್ಕಾಲಿಕವಾಗಿ ಸಿದ್ಧಪಡಿಸಿದ್ದ ಮಂಟಪಗಳಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡಿ ಸಂಭ್ರಮಿಸಿದರು.

ವಿದ್ಯುತ್ ದೀಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಮಂಟಪಗಳಲ್ಲಿ ಶನಿವಾರ ಬೆಳಿಗ್ಗೆ ಗಣಪತಿ ಪ್ರತಿಷ್ಠಾಪನೆ ಮಾಡಲಾಯಿತು. ಕಡುಬು, ಹೋಳಿಗೆ, ಲಾಡು, ಕರ್ಜೂರ ಸೇರಿದಂತೆ ವಿವಿಧ ಬಗೆ ಹಣ್ಣುಗಳನ್ನು ಇಟ್ಟು ಭಕ್ತಿ ಭಾವದಿಂದ ಪೂಜಿಸಲಾಯಿತು.

ಯುವತಿಯರು ರಂಗೋಲಿ ಬಿಡಿಸಿ ಸಂಭ್ರಮಿಸಿದರು.‌ ಯುವಕರು ಬಣ್ಣ ಬಣ್ಣದ ಕಾಗದಗಳಿಂದ ಮಂಟಪ ಮುಂಭಾಗದಲ್ಲಿ ಚಪ್ಪರ ಅಲಂಕಾರ ಮಾಡಿದ್ದರು.

ನಾಗರಕಲ್ಲುಗಳಿಗೆ ಪೂಜೆ: ಹಳ್ಳಿಗಳಲ್ಲಿ ಮಹಿಳೆಯರು ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸಿದರು. ಕೆಲವರು ತಮ್ಮ ಪೂರ್ವಿಕರ ಸಮಾಧಿಗೆ ತೆರಳಿ ಪೂಜೆ ಸಲ್ಲಿಸಿದರು.

ದೇವಸ್ಥಾನಗಳಲ್ಲಿ ಪೂಜೆ: ದೇವಸ್ಥಾನಗಳಲ್ಲಿ ಶನಿವಾರ ಬೆಳಿಗ್ಗೆಯೇ ಗಣೇಶ್ ಚತುರ್ಥಿ ಅಂಗವಾಗಿ ವಿಶೇಷ ಪೂಜೆ ನಡೆಯಿತು. ಶಿವ ಹಾಗೂ ಗಣೇಶನ ದೇವಸ್ಥಾನಗಳಲ್ಲಿ ವಿಘ್ನೇಶ್ವರನಿಗೆ ಬಗೆ ಬಗೆ ಅಲಂಕಾರ, ಅಭಿಷೇಕ ಮಾಡಿ ಪೂಜಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT