ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗೀತಾ ಗಂಗರಂಗಯ್ಯ ಮಾಗಡಿ ತಾ.ಪಂ.ಅಧ್ಯಕ್ಷೆ

Last Updated 4 ಸೆಪ್ಟೆಂಬರ್ 2019, 13:38 IST
ಅಕ್ಷರ ಗಾತ್ರ

ಮಾಗಡಿ: ತಾಲ್ಲೂಕು ಪಂಚಾಯಿತಿ ಅಧ್ಯಕ್ಷರಾಗಿ ಜೆಡಿಎಸ್‌ನ ಗೀತಾ ಗಂಗರಂಗಯ್ಯ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಚುನಾವಣಾಧಿಕಾರಿ ಕೃಷ್ಣಮೂರ್ತಿ ಅವರು ಸುದ್ದಿಗಾರರಿಗೆ ಈ ವಿಷಯ ತಿಳಿಸಿದರು. ನಾಮಪತ್ರ ಸಲ್ಲಿಸಿದ್ದ ಜೆಡಿಎಸ್‌ ಪಕ್ಷದ ಹನುಮೇಗೌಡ ಅವರು ಪಕ್ಷದ ಮುಖಂಡರ ಮನವಿಯಂತೆ ವಾಪಸ್‌ ಪಡೆದರು. ತಾ.ಪಂ. ಇಒ ಪ್ರದೀಪ್‌, ತಹಶೀಲ್ದಾರ್‌ ಎನ್‌.ರಮೇಶ್‌ ಇದ್ದರು.

ತಾ.ಪಂ.ಅಧ್ಯಕ್ಷರಾಗಿದ್ದ ಕೆ.ಎಚ್‌.ಶಿವರಾಜು ಅವರ ಅವಧಿ ಪೂರೈಸಿದ ಹಿನ್ನೆಲೆಯಲ್ಲಿ ಬುಧವಾರ ಚುನಾವಣೆ ನಡೆಯಿತು.

ನೂತನ ಅಧ್ಯಕ್ಷೆ ಗೀತಾ ಗಂಗರಂಗಯ್ಯ ಮಾತನಾಡಿ, ‘ತಾಲ್ಲೂಕಿನ ಅಂಗನವಾಡಿಗಳಿಗೆ ಭೇಟಿ ನೀಡಿ ಸ್ಥಿತಿಗತಿ ಪರಿಶೀಲಿಸುತ್ತೇನೆ. ಅಲ್ಲಿನ ಶೌಚಾಲಯ ದುರಸ್ತಿ ಪಡಿಸಲು ಕ್ರಮ ಕೈಗೊಳ್ಳುತ್ತೇನೆ. ಅಂಗನವಾಡಿ ಮಕ್ಕಳಿಗೆ ಪೌಷ್ಟಿಕ ಆಹಾರ ದೊರೆಯುವಂತೆ ನೋಡಿಕೊಳ್ಳುತ್ತೇನೆ’ ಎಂದರು.

‘ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿರುವ ಸದಸ್ಯರು, ಶಾಸಕ ಎ.ಮಂಜುನಾಥ, ಕಾಂಗ್ರೆಸ್‌ ಮುಖಂಡ ಎಚ್‌.ಸಿ.ಬಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ, ಪಕ್ಷಭೇದವಿಲ್ಲದೆ 32 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನರೇಗಾ ಯೋಜನೆಯಡಿ ನಡೆದಿರುವ ಕಾಮಗಾರಿಗಳನ್ನು ಪರಿಶೀಲಿಸಿ, ಲೋಪದೋಷಗಳಾಗಿದ್ದರೆ ಸರಿಪಡಿಸುತ್ತೇನೆ’ ಎಂದು ತಿಳಿಸಿದರು.

ಕೆ.ಎಚ್‌.ಶಿವರಾಜು, ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧನಂಜಯ ನಾಯ್ಕ್‌, ಉಪಾಧ್ಯಕ್ಷೆ ಅಂಬಿಕಾ ನರಸಿಂಹಮೂರ್ತಿ ನಾಯಕ, ಸದಸ್ಯರಾದ ಹನುಮಂತರಾಯಪ್ಪ, ಎಂ.ಜಿ. ನರಸಿಂಹಮೂರ್ತಿ, ಸುಗುಣ ಕಾಮರಾಜ್‌, ಶಿವಮ್ಮ, ದಿವ್ಯರಾಣಿ, ಸುಧಾ, ವೆಂಕಟೇಶ್‌, ಎಂ.ಜಿ.ಸುರೇಶ್‌, ರತ್ನಮ್ಮ, ಸುಮಾ ರಮೇಶ್‌, ನಾರಾಯಣಪ್ಪ. ಗಂಗಮ್ಮ, ಹನುಮೇಗೌಡ, ಜೆಡಿಎಸ್‌ ಮುಖಂಡರಾದ ಕೆ.ಕೃಷ್ಣಮೂರ್ತಿ, ಟಿ.ಜಿ.ವೆಂಕಟೇಶ್‌, ಎಂ.ರಾಮಣ್ಣ, ಜವಾಹರ್ ಖಾನ್‌, ಲಕ್ಕೇನಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಚೆನ್ನಗಂಗಯ್ಯ, ಉಡುಕುಂಟೆ ಪ್ರಕಾಶ್‌, ವೀರಾಪುರದ ಗೊಲ್ಲರಹಟ್ಟಿ ನಾಗರಾಜ್‌, ಬಗಿನಗೆರೆ ರಾಮಣ್ಣ ನೂತನ ಅಧ್ಯಕ್ಷರನ್ನು ಅಭಿನಂದಿಸಿದರು. ಪಟಾಕಿ ಸಿಡಿಸಿ, ಸಿಹಿ ವಿತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT