ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಗಡಿ: ತಾಲ್ಲೂಕು ಕಚೇರಿಯಲ್ಲಿ ಗೋಕುಲಾಷ್ಟಮಿ

ಕೃಷ್ಣನ ಲೋಕ ಜ್ಞಾನ ಜಗತ್ತಿಗೆ ಅನಿವಾರ್ಯ: ಮುಖಂಡರ ಅಭಿಮತ
Last Updated 20 ಆಗಸ್ಟ್ 2022, 4:41 IST
ಅಕ್ಷರ ಗಾತ್ರ

ಮಾಗಡಿ:ನಾಡಹಬ್ಬಗಳ ಆಚರಣಾ ಸಮಿತಿ ಹಾಗೂ ಗೊಲ್ಲ ಯಾದವರ ಸಂಘದ ವತಿಯಿಂದ ಶುಕ್ರವಾರ ತಹಶೀಲ್ದಾರ್‌ ಕಚೇರಿಯಲ್ಲಿ ಕೃಷ್ಣ ಜಯಂತಿ ಕಾರ್ಯಕ್ರಮನಡೆಯಿತು.

ಈ ವೇಳೆ ಶಿರಸ್ತೇದಾರ್ ಶಿವಮೂರ್ತಿ ಮಾತನಾಡಿ,ಬದುಕಿನಲ್ಲಿ ಜ್ಞಾನದ ಹಲವಾರು ಮಜಲುಗಳನ್ನು ದಾಟಿದ ನಂತರವಷ್ಟೇ ಮೋಕ್ಷ ಪಡೆಯಲು ಸಾಧ್ಯವಿದೆ. ದುಷ್ಟ ಶಿಕ್ಷಣ ಶಿಷ್ಟ ರಕ್ಷಣೆಯೇ ಧರ್ಮದ ತಿರುಳು ಎಂಬುದನ್ನುಬೋಧಿಸಿದ ಲೋಕನಾಯಕ ಶ್ರೀಕೃಷ್ಣನ ಬಾಲಲೀಲೆಗಳನ್ನು ಮಕ್ಕಳಿಗೆ ಕಲಿಸುವ ಅಗತ್ಯವಿದೆ ಎಂದರು.

ವಿಜ್ಞಾನ ನಮ್ಮ ಜ್ಞಾನವನ್ನು ವೃದ್ಧಿಸಿದರೆ, ಧರ್ಮ ನಮ್ಮಲ್ಲಿ ಸಂಸ್ಕೃತಿಯನ್ನು ವೃದ್ಧಿಸುತ್ತದೆ. ಇವೆರಡು ನಮಗೆ ಬದುಕಲು ಕಲಿಸುತ್ತವೆ. ಕೃಷ್ಣನ ಲೋಕಜ್ಞಾನದ ಅರಿವು ಆಧುನಿಕ ಜಗತ್ತಿಗೆ ಅಗತ್ಯವಾಗಿದೆ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಸಿ.ಜಯರಾಮ್‌ ಮಾತನಾಡಿ, ಕೃಷ್ಣನ ಜೀವನಗಾಥೆಯಲ್ಲಿ ಎಲ್ಲ ಕಾಲಕ್ಕೂ ಸಲ್ಲುವ ಹಲವು ಪಾಠಗಳು ಮತ್ತು ಸಂದೇಶಗಳಿವೆ. ಅನ್ಯಾಯ ಮಾಡುತ್ತಿರುವವರ ಆತಿಥ್ಯ ಬೇಡ ಎಂಬುದಕ್ಕೆ ಸಾಕಿಯಾಗಿ ಸಂಧಾನಕ್ಕಾಗಿ ಹಸ್ತಿನಾವತಿಗೆ ಬಂದು ಕೃಷ್ಣ ದುರ್ಯೋಧನನ ಮನೆಗೆ ಹೋಗದೆ ಬಡವ ವಿದುರನ ಮನೆಗೆ ಹೋಗಿದ್ದು ಮಾನವೀಯತೆಗೆ ಹಿಡಿದ ಕನ್ನಡಿಯಂತಿದೆ ಎಂದರು.

ಹೋರಾಟಗಾರ ಕಲ್ಕೆರೆ ಶಿವಣ್ಣ ಮಾತನಾಡಿ, ಕೃಷ್ಣ ಶಾಂತಿ ಪ್ರಿಯನಾಗಿದ್ದು, ಭಿನ್ನಬೇಧ ಎಣಿಸದೆ ಸಮಾನತೆಯ ಸಾಕಾರ ಮೂರ್ತಿಯಾಗಿದ್ದಾನೆ ಎಂದರು.

ಕೃಷ್ಣ ವಿದುರನ ಗೆಳೆತನ ಬಡವರ ಪರ ಎಂಬುದನ್ನು ತೋರಿಸಿದರೆ,ದ್ರೌಪದಿಯ ಮಾನ ಕಾಪಾಡಿದ ಮಹಾನುಭಾವ. ತಳವರ್ಗದಲ್ಲಿ ಜನಿಸಿದ ಕೃಷ್ಣ ಬೇಧ ಭಾವ ಮಾಡಲಿಲ್ಲ. ಕೃಷ್ಣನ ದಿವ್ಯ ಸಂದೇಶವನ್ನು ನಾವೆಲ್ಲರೂ ಮನನಮಾಡಿಕೊಳ್ಳಬೇಕು ಎಂದುಹೋರಾಟಗಾರ ದೊಡ್ಡಿ ಲಕ್ಷ್ಮಣ್‌ ಹೇಳಿದರು.

ತಾ.ಪಂ.ಮಾಜಿ ಸದಸ್ಯ ಹನುಮಂತಪ್ಪ, ಪುಟ್ಟರಾಜ್‌ ಯಾದವ್‌ ಕೃಷ್ಣನ ದಿವ್ಯ ಸಂದೇಶಗಳ ಕುರಿತು ಮಾತನಾಡಿದರು.

ಯಕ್ಷಗಾನ ಕಲಾವಿದರ ಸಂಘಧ ಅಧ್ಯಕ್ಷ ಎ.ಎಂ.ನಾಗರಾಜು, ಬಾಳೇಗೌಡ, ಮಾರುತಿ ಯಾದವ್‌, ರಾಮಕೃಷ್ಣ, ಕೆಂಚಪ್ಪ, ಕರಿಯಪ್ಪ, ಮಹಾಲಕ್ಷ್ಮಮ್ಮ, ಮರಲಗೊಂಡಲದ ವೆಂಕಟೇಶ್‌, ಧನಂಜಯ ಯಾದವ್‌, ನಿವೃತ್ತ ಶಿಕ್ಷಕ ಎನ್‌.ನಾರಾಯಣ, ತ್ಯಾಗದರೆ ಪಾಳ್ಯದ ರಂಗಸ್ವಾಮಯ್ಯ ಹಾಗೂ ಗೊಲ್ಲಯಾದವ ಸಂಘದ ಪದಾಧಿಕಾರಿಗಳು ಇದ್ದರು. ಜುಂಜಪ್ಪಸ್ವಾಮಿ ದೇವಾಲಯದ ಪೂಜಾರಿ ಮಹಲಿಂಗಪ್ಪ ಪೂಜೆ ಸಲ್ಲಿಸಿದರು. ತಹಶೀಲ್ದಾರ್‌ ಕಚೇರಿ ಸಿಬ್ಬಂದಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT