ಬುಧವಾರ, ನವೆಂಬರ್ 13, 2019
25 °C

ಚಿನ್ನಾಭರಣ, ನಗದು ಕಳವು

Published:
Updated:

ಮರಳವಾಡಿ (ಕನಕಪುರ): ಮನೆಯ ಬೀಗ ಒಡೆದು ನಗದು ಮತ್ತು ಚಿನ್ನಾಭರಣವನ್ನು ದೋಚಿದ ಘಟನೆ ತಾಲ್ಲೂಕಿನ ಮರಳವಾಡಿ ಹೋಬಳಿ ಬಳಗೆರೆ ಗ್ರಾಮದಲ್ಲಿ ನಡೆದಿದೆ.

ಬಳಗೆರೆ ಗ್ರಾಮದ ರೈತ ಭದ್ರಗಿರಿಗೌಡರ ಮಗ ಚೂಡೇಗೌಡ ಎಂಬುವರ ಮನೆಯಲ್ಲಿ 72 ಗ್ರಾಂ ಚಿನ್ನಾಭರಣ, 400 ಗ್ರಾಂ ಬೆಳ್ಳಿ, 37 ಸಾವಿರ ನಗದು ಕಳ್ಳತನವಾಗಿವೆ.

ಮನೆಯ ಮಾಲಿಕ ಚೂಡೇಗೌಡ ಅವರು ತಾವು ಬೆಳೆದಿದ್ದ ರೇಷ್ಮೆಗೂಡನ್ನು ಕನಕಪುರ ಗೂಡಿನ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಹೋಗಿದ್ದರು. ಅವರ ಪತ್ನಿ ಸೌಮ್ಯ ಜಮೀನಿನಲ್ಲಿ ಕೃಷಿ ಕೆಲಸ ಮಾಡಲು ಹೋಗಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.

ಕಳ್ಳತನವಾಗಿರುವ ಸಂಬಂಧ ಹಾರೋಹಳ್ಳಿ ಪೊಲೀಸ್‌ ಠಾಣೆಯಲ್ಲಿ ಚೂಡೇಗೌಡ ದೂರು ನೀಡಿದ್ದಾರೆ.

ಪ್ರತಿಕ್ರಿಯಿಸಿ (+)