ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ 5 ಮತ್ತು 8ನೇ ತರಗತಿಗಳಿಗೆ ಕಡ್ಡಾಯ ಪರೀಕ್ಷೆಗೆ ಸರ್ಕಾರ ಚಿಂತನೆ’

ಜಿಲ್ಲಾ ಮಟ್ಟದ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ
Last Updated 22 ಸೆಪ್ಟೆಂಬರ್ 2022, 5:27 IST
ಅಕ್ಷರ ಗಾತ್ರ

ರಾಮನಗರ: 5 ಮತ್ತು 8ನೇ ತರಗತಿಗಳಿಗೆ ಕಡ್ಡಾಯ ಪರೀಕ್ಷೆ ನಡೆಸಲು ಸರ್ಕಾರ ಚಿಂತಿಸಿದ್ದು, ಈ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಹೊರಬೀಳಲಿದೆ ಎಂದು ಖಾಸಗಿ ಅನುದಾನ ರಹಿತ ಶಾಲೆಗಳ ರಾಜ್ಯ ಸಂಘಟನೆ ಕ್ಯಾಮ್ಸ್‌ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ತಿಳಿಸಿದರು.

ನಗರದ ಆರ್.ವಿ.ಸಿ.ಎಸ್ ಕಲ್ಯಾಣ ಮಂಟಪದಲ್ಲಿ ರಾಮನಗರ ಜಿಲ್ಲೆಯ ಅನುದಾನ ರಹಿತ ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ (ಉಸ್ಮಾರ್ಡ್) ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಖಾಸಗಿ ಶಾಲಾ ಶಿಕ್ಷಕರ ದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು. ಕೋವಿಡ್ ಲಾಕ್ ಡೌನ್ ಸಂದರ್ಭದಲ್ಲಿ ಮಕ್ಕಳಲ್ಲಿ ನಿರಂತರ ಕಲಿಕೆಗೆ ಖಾಸಗಿ ಅನುದಾನಿತ ಶಾಲೆಗಳು ಒತ್ತು ನೀಡಿದ್ದವು.
ಆದರೆ ಸಮಾಜ ಈ ಶಾಲೆಗಳನ್ನು ಅನುಮಾನದ ಕಣ್ಣುಗಳಿಂದಲೇ ನೋಡಿದ್ದವು. ಈಗ ಈ ಮಕ್ಕಳಲ್ಲಿ ಕಲಿಕೆಯ ಅಂತರ ಕಡಿಮೆ ಮಾಡಲು ಶಿಕ್ಷಕರಿಗೆ ಸವಾಲಾಗಿದೆ
ಎಂದರು.

ಸರ್ಕಾರ ಆರ್.ಟಿ.ಇ ಕಾಯ್ದೆಗೆ ಸೂಕ್ತ ತಿದ್ದುಪಡಿ ತರುತ್ತಿದೆ. ಸರ್ಕಾರದ ಈ ಆದೇಶ ಸ್ವಾಗತಾರ್ಹ ಎಂದರು.

₹80 ಲಕ್ಷ ಶಿಕ್ಷಕ ಅಗತ್ಯ: ದೇಶದಲ್ಲಿ ಸುಮಾರು 15 ಲಕ್ಷ ಶಾಲೆಗಳಿವೆ. ಸದ್ಯ ಈ ಶಾಲೆಗಳಿಗೆ 80 ಲಕ್ಷ ಶಿಕ್ಷಕರ ಅಗತ್ಯವಿದೆ ಎಂದು ಶಿಕ್ಷಣ ಕ್ಷೇತ್ರದ ಸವಾಲುಗಳ ಬಗ್ಗೆ ಮಾತನಾಡಿದರು.

ಬೆಂಗಳೂರು ವಿವಿ ಸಿಂಡಿಕೇಟ್ ಸದಸ್ಯ ಡಾ.ಸುಪ್ರೀತ್, ಡಿಡಿಪಿಐ ಕಚೇರಿಯ ಶಿಕ್ಷಣ ಅಧಿಕಾರಿ ಮಂಜುಳಾ, ಬಿಇಒ ಬಿ.ಪಿ ಪಾರ್ವತಮ್ಮ ಮಾತನಾಡಿದರು. ಉಸ್ಮಾರ್ಡ್ ಅಧ್ಯಕ್ಷ ಪಟೇಲ್ ಸಿ ರಾಜು ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕರಿಗಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ಜಿಲ್ಲೆಯ ವಿವಿಧ ಶಾಲೆಗಳ 16 ಮಂದಿ ಶಿಕ್ಷಕರಿಗೆ ಉತ್ತಮ ಶಿಕ್ಷಕ ಪ್ರಶಸ್ತಿ ನೀಡಿ
ಗೌರವಿಸಲಾಯಿತು.

ಉಸ್ಮಾರ್ಡ್ ಗೌರವ ಅಧ್ಯಕ್ಷ ವಿ.ವೆಂಕಟಸುಬ್ಬಯ್ಯ ಚೆಟ್ಟಿ ಸ್ವಾಗತಿಸಿದರು. ಉಸ್ಮಾರ್ಡ್ ಕಾರ್ಯದರ್ಶಿ ಎಸ್.ಬಿ. ಇಶಾಂತ್ (ಸುನಿಲ್), ಪ್ರಮುಖರಾದ ಬಾಲಗಂಗಾಧರ ಮೂರ್ತಿ, ಎಸ್‌. ಪ್ರದೀಪ್, ಕಿರಣ್ ಪ್ರಸಾದ್, ನವೀನ್, ಧನಂಜಯ, ಅಲ್ತಾಫ್ ಅಹಮದ್, ಬೈರಪ್ಪ, ಗಂಗಾಂಬಿಕಾ, ಎಚ್.ಎಸ್.ಗಂಗರಾಜು ಮತ್ತು ಸಲಹಾ ಸಮಿತಿ ಸದಸ್ಯರು
ಹಾಜರಿದ್ದರು.

ಖಾಸಗಿ ಶಾಲೆಗಳಿಗೆ ಅನ್ಯಾಯ

ಕೋವಿಡ್ ಸಂದರ್ಭದಲ್ಲಿ ಖಾಸಗಿ ಶಾಲೆಗಳಿಗೆ ಹೆಚ್ಚು ಅನ್ಯಾಯವಾಗಿದೆ. ಶೇ 60 ರಿಂದ 70 ಪೋಷಕರು ಶುಲ್ಕ ಪಾವತಿಸಲಿಲ್ಲ. ಅನಿವಾರ್ಯವಾಗಿ ನ್ಯಾಯಾಲಯದ ಮೆಟ್ಟಿಲೇರಬೇಕಾಯಿತು. ಈಗ ಸುರಕ್ಷತೆಯ ನಿಯಮಗಳ ಪಾಲನೆಗೆ ಖಾಸಗಿ ಶಿಕ್ಷಣ ಸಂಸ್ಥೆಗಳು ಲಕ್ಷಾಂತರ ರೂಪಾಯಿ ವೆ ಚ್ಚ ಮಾಡಬೇಕಾಗಿದೆ. ಖಾಸಗಿ ಅನುದಾನ ರಹಿತ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ಮಲತಾಯಿ ಧೋರಣೆ ತಾಳಬಾರದು ಎಂದು ಕ್ಯಾಮ್ಸ್‌ನ ಪ್ರಧಾನ ಕಾರ್ಯದರ್ಶಿ ಡಿ. ಶಶಿಕುಮಾರ್ ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT