ಸರ್ಕಾರಿ ನೌಕರರ ಸಂಘ: ಬೈರಲಿಂಗಯ್ಯ ಮರು ಆಯ್ಕೆ

ಸೋಮವಾರ, ಜೂಲೈ 15, 2019
29 °C

ಸರ್ಕಾರಿ ನೌಕರರ ಸಂಘ: ಬೈರಲಿಂಗಯ್ಯ ಮರು ಆಯ್ಕೆ

Published:
Updated:
Prajavani

ರಾಮನಗರ: ಇಲ್ಲಿನ ಸ್ಪೂರ್ತಿ ಭವನದಲ್ಲಿ ಸರ್ಕಾರಿ ನೌಕರರ ಸಂಘದ ವಿವಿಧ ಸ್ಥಾನಗಳಿಗೆ ಗುರುವಾರ ಚುನಾವಣೆ ನಡೆಯಿತು.

ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದ ಆರ್.ಕೆ. ಬೈರಲಿಂಗಯ್ಯ 42 ಮತಗಳನ್ನು ಪಡೆದು, ಮೂರನೇ ಬಾರಿಗೆ ಅಧ್ಯಕ್ಷರಾಗಿ ಚುನಾಯಿತರಾದರು. ಇವರ ಪ್ರತಿಸ್ಪರ್ಧಿ ಹನುಮಯ್ಯ 23 ಮತಗಳನ್ನು ಪಡೆದರು. ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ಧಿಸಿದ್ದ ಕೆ. ಸತೀಶ್ 44 ಮತಗಳನ್ನು ಪಡೆದರೆ, ಇವರ ಪ್ರತಿಸ್ಪರ್ಧಿ ಯೋಗೇಶ್ 21 ಮತಗಳನ್ನು ಪಡೆದರು.

ಜಿಲ್ಲಾ ಘಟಕದ ಖಜಾಂಚಿ ಸ್ಥಾನಕ್ಕೆ ಸ್ಪರ್ಧಿಸಿದ್ದ ಟಿ. ನರಸಯ್ಯ 46 ಮತಗಳನ್ನು ಪಡೆದರೆ ಇವರ ಪ್ರತಿಸ್ಪರ್ಧಿ ನರಸಿಂಹ 19 ಮತಗಳನ್ನು ಪಡೆದರು. ಚುನಾವಣೆಯಲ್ಲಿ 65 ನಿರ್ದೇಶಕರು ತಮ್ಮ ಹಕ್ಕನ್ನು ಚಲಾಯಿಸಿದರು.

'ಇದು ನಮ್ಮ ಗೆಲುವಲ್ಲ, ಎಲ್ಲಾ ನಿರ್ದೇಶಕರ ಗೆಲುವಾಗಿದೆ. ನನ್ನ ಮೇಲೆ ವಿಶ್ವಾಸವಿರಿಸಿ ಮೂರನೇ ಅವಧಿಗೂ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ ಎಲ್ಲಾ ನಿರ್ದೇಶಕರು ಮತ್ತು ಸರ್ಕಾರಿ ನೌಕರ ಬಂಧುಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ' ಎಂದು ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಕೆ. ಬೈರಲಿಂಗಯ್ಯ ತಿಳಿಸಿದರು.

'ಎನ್‍ಪಿಎಸ್ ರದ್ದದಾಗಬೇಕು, ಒಪಿಎಸ್ ಜಾರಿಯಾಗಬೇಕೆಂಬ ಸರ್ಕಾರಿ ನೌಕರರ ಬೇಡಿಕೆಯನ್ನು ಈಡೇರಿಸಬೇಕು ಎಂಬುದು ಪ್ರಮುಖ ಬೇಡಿಕೆಗಳಾಗಿದೆ. ಅದರ ಜತೆಗೆ ಸಂಘಟನೆಯನ್ನು ಎಲ್ಲಾ ನಿರ್ದೇಶಕರ ಸಹಕಾರದೊಂದಿಗೆ ಕ್ರಿಯಾಶೀಲವಾಗಿಸುತ್ತೇನೆ' ಎಂದರು.

ಅಭಿನಂದನೆ: ನೂತನವಾಗಿ ಆಯ್ಕೆಯಾದ ಪಧಾದಿಕಾರಿಗಳನ್ನು ನಿರ್ದೇಶಕರಾದ ಶಿವಸ್ವಾಮಿ, ಎಂ.ರಾಜೇಗೌಡ, ಪುಟ್ಟಸ್ವಾಮಿಗೌಡ, ಮಂಜುನಾಥ್, ಕಾಂತರಾಜು, ರಾಜಶೇಖರ್, ಪುಟ್ಟಸ್ವಾಮಿಗೌಡ, ಸಂಜೀವೇಗೌಡ, ಮಹೇಶ್, ಬೈರಪ್ಪ, ಯೋಗೇಶ್ ಗೌಡ, ಅನಿತಾ, ಕೃಷ್ಣೇಗೌಡ, ಹೊನ್ನಯ್ಯ, ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸಿ.ರಾಜಶೇಖರ್, ತಾಲ್ಲೂಕು ಘಟಕದ ಅಧ್ಯಕ್ಷ ಎಸ್.ಬಿ. ಬಸವರಾಜಪ್ಪ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅದ್ಯಕ್ಷ ಡಿ.ಕೆ. ನಾರಾಯಣಸ್ವಾಮಿ, ಶಿಕ್ಷಕ ಸತೀಶ್ ಅಭಿನಂದಿಸಿದರು.

ಚುನಾವಣಾಧಿಕಾರಿ ಕೆ. ಕರೀಗೌಡ ಮತ್ತು ಸಹಾಯಕ ಚುನಾವಣಾಧಿಕಾರಿ ವೆಂಕಟಪ್ಪ ಇದ್ದರು.

 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !