ಬುಧವಾರ, ಸೆಪ್ಟೆಂಬರ್ 18, 2019
28 °C

‘ಅರ್ಹ ಕಲಾವಿದರಿಗೆ ಅನುದಾನ ಸಿಗಲಿ’

Published:
Updated:
Prajavani

ಕನಕಪುರ: ‘ಸರ್ಕಾರದಿಂದ ಕಲಾವಿದರ ಹೆಸರಿನಲ್ಲಿ ಬರುತ್ತಿರುವ ಅನುದಾನ ಅರ್ಹ ಫಲಾನುಭವಿಗಳಿಗೆ ತಲುಪುತ್ತಿಲ್ಲ, ಅಸಂಖ್ಯಾತ ಕಲಾವಿದರು ಸಂಕಷ್ಟದಲ್ಲಿ ಇದ್ದಾರೆ’ ಎಂದು ಕನ್ನಡ ಜಾನಪದ ಪರಿಷತ್‌ನ ರಾಜ್ಯ ಘಟಕದ ಅಧ್ಯಕ್ಷ ಎಸ್‌.ಬಾಲಾಜಿ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ‘ವಿಶ್ವ ಜಾನಪದ ದಿನಾಚರಣೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ನಿಜವಾದ ಕಲಾವಿದರನ್ನು ಗುರುತಿಸುವಲ್ಲಿ ಸರ್ಕಾರ ಎಡವುತ್ತಿದೆ. ಅರ್ಹರನ್ನು ಗುರುತಿಸಿ ನೇರವಾಗಿ ಸವಲತ್ತು ತಲುಪಿಸುವ ಕೆಲಸವಾಗಬೇಕು’ ಎಂದು ಆಗ್ರಹಿಸಿದರು.

ಕಾಲೇಜಿನ ಪ್ರಾಂಶುಪಾಲ ನಾಗರಾಜು ಮಾತನಾಡಿ, ‘ಶಾಲಾ ಕಾಲೇಜುಗಳ ಹಂತದಲ್ಲಿ ವಿದ್ಯಾರ್ಥಿಗಳಿಗೆ ಪ್ರದರ್ಶನ ಕಲೆಗಳ ತರಬೇತಿ ನೀಡಬೇಕು. ಇದರಿಂದ ಶೈಕ್ಷಣಿಕವಾಗಿ ಅಭಿವೃದ್ಧಿಯಾಗಲು ಸಹಕಾರಿಯಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

ತಾಲ್ಲೂಕು ಪಂಚಾಯತಿ ಅಧ್ಯಕ್ಷ ಕೆ.ಎಸ್‌.ಧನಂಜಯ, ವಕೀಲ ಕಾಮೇಶ್‌ ಮಾತನಾಡಿದರು. ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್ಲೇಗೌಡ ಬೆಸಗರಹಳ್ಳಿ, ಸೋಬಾನೆ ಕಲಾವಿದೆ ನಳಿನಾಕ್ಷಿ, ಜನಪದ ಗಾಯಕ ಏರಂಗೆರೆ ಶಿವರಾಮ್‌ ಅವರನ್ನು ಸನ್ಮಾನಿಸಲಾಯಿತು.

ಕನ್ನಡ ಜಾನಪದ ಪರಿಷತ್‌ ರಾಜ್ಯ ಸಂಚಾಲಕಿ ಕನಕತಾರ, ಜಿಲ್ಲಾ ಕಾರ್ಯಾಧ್ಯಕ್ಷ ಎಂ.ಚಂದ್ರ, ಜಿಲ್ಲಾ ಲೇಖಕರ ವೇದಿಕೆ ಅಧ್ಯಕ್ಷ ಕೂ.ಗಿ.ಗಿರಿಯಪ್ಪ ಇದ್ದರು.

ಹಾಸ್ಯ ಕಲಾವಿದ ಚಂದ್ರಾಜ್‌, ಗಾಯಕರಾದ ವಿ.ವಿಜಯ್‌, ಮಧು, ಎಂ.ನಾಗೇಶ್ ಜಾನಪದ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

Post Comments (+)