ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರ್ಚ್ 7ರಂದು ಜಿಎಸ್‌ಟಿ ಕಾರ್ಯಾಗಾರ

Last Updated 4 ಮಾರ್ಚ್ 2020, 14:23 IST
ಅಕ್ಷರ ಗಾತ್ರ

ಕನಕಪುರ: ‘ತೆರಿಗೆದಾರರಿಗೆ ಜಿಎಸ್‌ಟಿ ಬಗ್ಗೆ ಜಾಗೃತಿ ಮೂಡಿಸಲು ಮಾರ್ಚ್‌ 7ರಂದು ಬೆಳಿಗ್ಗೆ 10.30ಕ್ಕೆ ರೋಟರಿ ಭವನದಲ್ಲಿ ಸಾರ್ವಜನಿಕವಾಗಿ ಜಿಎಸ್‌ಟಿ ಕಾರ್ಯಾಗಾರವನ್ನು ನಡೆಸಲಾಗುತ್ತಿದೆ’ ಎಂದು ವರ್ತಕರ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಸಿ.ಕೈಲಾಸ್‌ ಶಂಕರ್‌ ತಿಳಿಸಿದರು.

ಇಲ್ಲಿನ ವರ್ತಕರ ಭವನದಲ್ಲಿ ಕಾರ್ಯಾಗಾರ ಕುರಿತು ಮಾತನಾಡಿ, ಅಖಿಲ ಭಾರತ ತೆರಿಗೆ ಸಲಹೆಗಾರರ ಒಕ್ಕೂಟ, ಕರ್ನಾಟಕ ರಾಜ್ಯ ತೆರಿಗೆ ಸಲಹೆಗಾರರ ಸಂಘ, ರಾಮನಗರ ಜಿಲ್ಲೆ ತೆರಿಗೆ ಸಲಹೆಗಾರರ ಸಂಘ, ಸರಕು ಮತ್ತು ಸೇವಾ ತೆರಿಗೆ ಇಲಾಖೆ, ವರ್ತಕರ ಸಂಘ ಕನಕಪುರ ತಾಲ್ಲೂಕು ಘಟಕದ ವತಿಯಿಂದ ಈ ಕಾರ್ಯಾಗಾರ ಆಯೋಜಿಸಿರುವುದಾಗಿ ಹೇಳಿದರು.

ಸೇವಾ ತೆರಿಗೆ ಸಂಬಂಧಪಟ್ಟ ಅಧಿಕಾರಿಗಳಿಂದ ಮಾಹಿತಿಯನ್ನು ಹಾಗೂ ಉಪನ್ಯಾಸ ಕೊಡಿಸಲಾಗುವುದು. ವರ್ತಕರಿಗೆ ಮತ್ತು ತೆರಿಗೆ ಕಟ್ಟುವವರಿಗೆ ಅನುಕೂಲವಾಗುವಂತೆ ನಡೆಸುತ್ತಿರುವ ಕಾರ್ಯಾಗಾರದಲ್ಲಿ ಸಾರ್ವಜನಿಕವಾಗಿ ಎಲ್ಲರೂ ಪಾಲ್ಗೊಳ್ಳಬಹುದು ಎಂದು ತಿಳಿಸಿದರು.

ಆಡಿಟರ್‌ ಮತ್ತು ತೆರಿಗೆ ಸಲಹೆಗಾರ, ರಾಮನಗರ ಜಿಲ್ಲಾ ತೆರಿಗೆ ಸಲಹೆಗಾರರ ಸಂಘದ ಸಂಯೋಜಕ ಕೆ.ಎಸ್‌. ಪ್ರಶಾಂತ ಮಾತನಾಡಿ, ‘ಜಿಎಸ್‌ಟಿಯು ಇತ್ತೀಚಿನ ದಿನಗಳಲ್ಲಿ ಜಾರಿಗೆ ಬಂದಿರುವುದರಿಂದ ಸಾರ್ವಜನಿಕವಾಗಿ ಎಲ್ಲರಿಗೂ ಗೊಂದಲವಿದೆ. ಅದನ್ನು ಪರಿಹರಿಸಲು, ಜನ ಜಾಗೃತಿ ಮೂಡಿಸಲು ಕಾರ್ಯಾಗಾರ ನಡೆಸಲಾಗುತ್ತಿದೆ. ತಾಲ್ಲೂಕಿನ ಎಲ್ಲಾ ವರ್ತಕರು ಕಾರ್ಯಾಗಾರದಲ್ಲಿ ಪಾಲ್ಗೊಂಡು ಇದರ ಲಾಭ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.

ಸಂಘದ ಉಪಾಧ್ಯಕ್ಷ ಶ್ರೀನಿವಾಸಮೂರ್ತಿ, ಕಾರ್ಯದರ್ಶಿ ಶಿವಶಂಕರ್‌, ನಿರ್ದೇಶಕರಾದ ಜಗದೀಶ್‌ಕುಮಾರ್‌, ಪುಟ್ಟಸ್ವಾಮಿ, ನಾರಾಯಣಗೌಡ, ರಂಗನಾಥ್‌, ಮಹದೇವಪ್ಪ, ಪ್ರಕಾಶ್‌, ಡಿ.ಪಿ.ನಾಗೇಶ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT