ಹಲಗೂರು: ಸಮೀಪದ ಚಿಲ್ಲಾಪುರ ಗ್ರಾಮದ ಶ್ರೀ ಸಿದ್ದಪ್ಪಾಜಿ ದೇವಸ್ಥಾನದ ಮೊದಲ ವಾರ್ಷಿಕೋತ್ಸವ ಮತ್ತು ದೊಡ್ಡಮ್ಮ ತಾಯಿ ಗದ್ದುಗೆಗೆ ರಜತ ಕಲಶ, ಮುಖವಾಡ ಸ್ಥಾಪನೆ ಕಾರ್ಯಕ್ರಮ 27ರಂದು ನಡೆಯಲಿದೆ.

ಅಂದು ಬೆಳಿಗ್ಗೆ 9ರಿಂದ ವೇದ ಪಾರಾಯಣ, ಮಹಾ ಸಂಕಲ್ಪ, ಪುಣ್ಯಾಹ ವಾಚನ, ಮಾತೃಕಾ ಪೂಜೆ, ನವಗ್ರಹಾರಾಧನೆ, ಕಲಶಾರ್ಚನೆ, ಅಗ್ನಿಮುಖ, ಮಹಾ ಗಣಪತಿ ಹೋಮ, ನವಗ್ರಹಾಧಿ ಹೋಮ, ವಾಸ್ತು ಶಾಂತಿ, ಪರಿವಾರ, ದೇವತಾ ಹೋಮ ನಡೆಯಲಿದೆ.

ಸಿದ್ದಪ್ಪಾಜಿ ದೇವರ ಹೋಮ, ವಿಶ್ವಕರ್ಮ ಹೋಮ, ಎಲ್ಲಾ ದೇವರಿಗೆ ಅಭಿಷೇಕ ಅಲಂಕಾರ, ಜಯಾದಿ, ಪೂರ್ಣಾಹುತಿ, ಕಲಾಶಾಭಿಷೇಕ ಆಲಂಕಾರ, ಮಹಾ ಮಂಗಳಾರತಿ, ಮಂತ್ರ ಪುಷ್ಪ, ಅಷ್ಟಾವಧಾನ, ಶ್ರೀರಾಮ ನವಮಿ ಆಚರಣೆ ನಡೆಯಲಿದೆ. ಮಧ್ಯಾಹ್ನ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮತ್ತು ಅನ್ನ ಸಂತರ್ಪಣೆ ನಡೆಯಲಿದೆ.

ಹಲಗೂರು, ಚಿಲ್ಲಾಪುರ, ಒದುಬಸಪ್ಪನದೊಡ್ಡಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಎಚ್.ಕೆ.ಮೂರ್ತಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-40-979196949

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.