ಭಾನುವಾರ, ಫೆಬ್ರವರಿ 23, 2020
19 °C

ಹನುಮಾಪುರ ಗ್ರಾಮ ದತ್ತು ಸ್ವೀಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ತಾಲ್ಲೂಕಿನ ಹನುಮಾಪುರ ಗ್ರಾಮ ದತ್ತು ಸ್ವೀಕಾರ ಸಮಾರಂಭ ಡಿ.12ರಂದು ಬೆಳಿಗ್ಗೆ 11ಕ್ಕೆ ನಡೆಯಲಿದೆ ಎಂದು ಗ್ರಾಮದ ಮುಖಂಡ ಶಿವಲಿಂಗಯ್ಯ ತಿಳಿಸಿದ್ದಾರೆ. ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಹನುಮಾಪುರದ ರಾಮಯ್ಯ ಎಜುಕೇಷನಲ್‌ ಮತ್ತು ಚಾರಿಟಬಲ್‌ ಟ್ರಸ್ಟ್‌ ಮನವಿಯ ಮೇರೆಗೆ ಕೇಂದ್ರ ಸರ್ಕಾರದ ಭಾರತ್‌ ಅಭಿಯಾನ ಯೋಜನೆಯಡಿ ಇಗ್ನೊ ವತಿಯಿಂದ ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗೆ ಮಂಜುರಾತಿ ನೀಡಿದೆ. ಇಗ್ನೊ ಪ್ರಾದೇಶಿಕ ನಿರ್ದೇಶಕ ಜಿ.ಎಚ್‌.ಇಮ್ರಾಪುರ್‌ ದತ್ತು ಗ್ರಾಮ ಯೋಜನೆ ಉದ್ಘಾಟಿಸಲಿದ್ದಾರೆ.

ಇಗ್ನೊದ ಉಪನಿರ್ದೇಶಕಿ ಡಾ.ಎಸ್‌.ರಾಧಾ, ವಿಜಯನಗರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ನಾಗರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಸಿದ್ದೇಶ್ವರ.ಎಸ್‌, ತಾಲ್ಲೂಕು ಪಂಚಾಯಿತಿ ಸದಸ್ಯ ನಾರಾಯಣಪ್ಪ ಭಾಗವಹಿಸಲಿದ್ದಾರೆ ಎಂದು ಗ್ರಾಮದ ಮುಖಂಡ ಎಚ್‌.ವಿ.ರಾಜು ತಿಳಿಸಿದರು. ಮುಖಂಡರಾದ ಎಚ್‌.ರಾಮಯ್ಯ, ಅರುಂಧತಿ ಚಿಕ್ಕಣ್ಣ, ಉಷಾ.ಬಿ.ಸಿ, ಟ್ರಸ್ಟಿನ ಅಧ್ಯಕ್ಷ ಅಶ್ವತ್ಥಪ್ಪ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)