ಹಾರೋಹಳ್ಳಿ: ‘ಕೇವಲ ಅಂಬೇಡ್ಕರ್ ಅವರನ್ನು ನೆನೆದು ನಂತರ ಮರೆಯುವ ಬದಲು ಸಂವಿಧಾನದ ತತ್ವಗಳನ್ನು ಪಾಲಿಸಲು ಎಲ್ಲರೂ ಮುಂದಾಗಬೇಕು’ ಎಂದು ಅಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಅನ್ನದಾನಪ್ಪ ಹೇಳಿದರು.

ಹಾರೋಹಳ್ಳಿ ತಾಲ್ಲೂಕಿನ ಜಕ್ಕಸಂದ್ರ ಗ್ರಾಮದಲ್ಲಿ ಡಾ. ಬಿ.ಆರ್.ಅಂಬೇಡ್ಕರ್ ಅವರ 135ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ಸಮಾನತೆಯ ಸಮಾಜ ನಿರ್ಮಾಣ ಆಗದ ಹೊರತು ವರ್ಗ ಮತ್ತು ಕೋಮು ಸಂಘರ್ಷಗಳು ಅಂತ್ಯ ಕಾಣುವುದು ಸಾಧ್ಯವಿಲ್ಲ. ಸರ್ವರಿಗೆ ಸಮಬಾಳು- ಸರ್ವರಿಗೂ ಸಮಪಾಲು ಪರಿಕಲ್ಪನೆ ಕೇವಲ ಘೋಷಣೆ ಹಾಗೂ ಪುಸ್ತಕಗಳಿಗೆ ಮಾತ್ರ ಸೀಮಿತವಾಗಿದೆ. ಅದನ್ನು ಕಾರ್ಯಗತ ಮಾಡಲು ನಮ್ಮನ್ನಾಳಿದ ಸರ್ಕಾರಗಳು ವಿಫಲವಾಗಿವೆ. ರಾಜಕೀಯ ಪಕ್ಷಗಳು ಚುನಾವಣೆಗಳಲ್ಲಿ ಜಾತಿಯನ್ನೇ ಬಂಡವಾಳ ಮಾಡಿಕೊಂಡು ಜಾತಿ ಭಾವನೆಯನ್ನು ಮತ್ತಷ್ಟು ಸಾಂದ್ರಗೊಳಿಸುತ್ತಿವೆ’ ಎಂದು ವಿಷಾದಿಸಿದರು.

ಗ್ರಾಮದ ಮುಖಂಡ ರವಿಕುಮಾರ್ ಮಾತನಾಡಿ, ‘ಅಂಬೇಡ್ಕರ್ ಕೊನೆ ಉಸಿರಿನವರೆಗೂ ದೀನ ದಲಿತರ ಏಳಿಗೆಯನ್ನೇ ಜೀವನದ ಗುರಿಯನ್ನಾಗಿಸಿಕೊಂಡಿದ್ದ ಮಹಾ ಮಾನವತಾವಾದಿ. ಅವರ ಹೋರಾಟದ ಬದುಕು ಅನುಸರಣೀಯವಾಗಿದ್ದು ಅಂಬೇಡ್ಕರ್ ರೂಪಿಸಿದ ಸಂವಿಧಾನ ಇಡೀ ವಿಶ್ವಕ್ಕೆ ಮಾದರಿ. ಈ ಮಾದರಿಯನ್ನು ಹಲವು ರಾಷ್ಟ್ರಗಳು ತಮ್ಮ ಸಂವಿಧಾನದಲ್ಲಿ ಅಳವಡಿಸಿಕೊಂಡಿರುವುದು ಹೆಮ್ಮೆಯ ಸಂಗತಿ’ ಎಂದರು.

ಅಂಬೇಡ್ಕರ್ ಭಾವಚಿತ್ರವನ್ನು ಗ್ರಾಮದ ಮುಖ್ಯ ಬೀದಿಯಲ್ಲಿ ಪಲ್ಲಕ್ಕಿ ಮೆರವಣಿಗೆ ಮಾಡಲಾಯಿತು.

ಆಲ್ ಇಂಡಿಯಾ ಬಹುಜನ ಸಮಾಜ ಪಕ್ಷದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ. ನಾಗೇಶ್, ಶ್ರೀನಿವಾಸ್, ಮಾರೇಗೌಡ, ಕೇಬಲ್ ರವಿ, ಸಂತೋಷ್, ಸೋಮಶೇಖರ್, ಕೃಷ್ಣಮೂರ್ತಿ, ತಿಮ್ಮರಾಜು, ಜಗ್ಗಯ್ಯ, ನಿತಿನ್, ದೇವರಾಜು, ಚಂದ್ರ, ವಕೀಲ ಅನಿಲ್, ಸತೀಶ್, ಮಧು, ಅರುಣ್, ಪ್ರಸಾದ್, ಸುನೀಲ್ ಕುಮಾರ್, ದೀಪು, ಅಭಿಲಾಷ್, ಗಿರೀಶ್ ಹಾಜರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-14-982276737

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.