ಹಾರೋಹಳ್ಳಿ: ಕ್ರಷರ್ ಲಾರಿಗಳ ಸಂಚಾರದಿಂದ ಗ್ರಾಮಗಳ ರಸ್ತೆಗಳು ಸಂಪೂರ್ಣ ಹಾಳಾಗಿದ್ದು, ಜನರು ದೂಳಿನಿಂದ ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ.

ಹಾರೋಹಳ್ಳಿ ತಾಲ್ಲೂಕಿನ ಬೈರೇಗೌಡನ ವಲಸೆ, ಕುರುಬಹಳ್ಳಿ, ಕೊಳ್ಳಿಗನಹಳ್ಳಿ, ಸೊಂಟೇನಳ್ಳಿ, ಹೊನ್ನಾಲಗನದೊಡ್ಡಿ, ನಾರಾಯಣಪುರ, ಅಣೆದೊಡ್ಡಿ ಹುಳಗೊಂಡನಹಳ್ಳಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಕ್ರಷರ್ ಲಾರಿಗಳು ನಿಯಮ ಮೀರಿ ಓವರ್ ಲೋಡ್ ಮಾಡಿಕೊಂಡು ಬೇಕಾಬಿಟ್ಟಿ ಚಾಲನೆ ಮಾಡಿಕೊಂಡು ಹೋಗುವುದರಿಂದ ರಸ್ತೆಗಳೆಲ್ಲ ಕಿತ್ತು ಹಾಳಾಗಿ ಹೋಗಿವೆ.

ನಿಯಮ ಪಾಲನೆಯಿಲ್ಲ: ಕ್ರಷರ್ ಲಾರಿಗಳು ಹಳ್ಳಿ ರಸ್ತೆಯಲ್ಲಿ ಚಲಿಸಲು ಸಾಕಷ್ಟು ನಿಯಮಗಳಿವೆ. ಆ ನಿಯಮಗಳನ್ನು ಯಾವುದೇ ಲಾರಿ ಮಾಲೀಕರು, ಕ್ವಾರಿ ಮಾಲೀಕರು ಪಾಲಿಸುತ್ತಿಲ್ಲ. ರಸ್ತೆಯಲ್ಲಿ ಬೇಕಾಬಿಟ್ಟಿ ಓಡಾಡುತ್ತಿವೆ. ಅವರಿಗೆ ಇಷ್ಟ ಬಂದಷ್ಟು ಲೋಡ್ ತುಂಬುತ್ತಾರೆ, ಟಾರ್ಪಲ್ ಸಹ ಕಟ್ಟುವುದಿಲ್ಲ ಗ್ರಾಮದ ಮಧ್ಯೆ ಸಂಚಾರ ಮಾಡುವುದರಿಂದ ಪ್ರತಿನಿತ್ಯ ದೂಳಿನ ಮಜ್ಜನವಾಗುತ್ತದೆ ಎನ್ನುವುದು ಗ್ರಾಮಸ್ಥರ ಅಳಲು.

ತಿಳಿವಳಿಕೆಗೂ ಜಗ್ಗಲ್ಲ: ರಸ್ತೆಯಲ್ಲಿ ಓಡಾಡುವ ಮೊದಲು ರಸ್ತೆಗೆ ನೀರು ಹಾಕಿ ಓಡಾಡಬೇಕು. ಟಾರ್ಪಲ್ ಕಟ್ಟಬೇಕು, ಗ್ರಾಮದ ಪರಿಮಿತಿಯಲ್ಲಿ ಸಂಚರಿಸುವ ಸಂದರ್ಭದಲ್ಲಿ ನಿಧಾನ ನಗತಿಯಲ್ಲಿ ಹೋಗಬೇಕು. ನಿಯಮಗಳನ್ನು ಪಾಲಿಸಬೇಕು ಎಂದು ಹಲವು ಬಾರಿ ಹೇಳಿದ್ದರೂ ಯಾರೊಬ್ಬರೂ ತಲೆಕೆಡಿಸಿಕೊಂಡಿಲ್ಲ. ಇನ್ನು ಮುಂದೆ ಲಾರಿಗಳು ಗ್ರಾಮದಲ್ಲಿ ಸಂಚರಿಸಬಾರದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಾಳಾದ ರಸ್ತೆಗಳು: ಗ್ರಾಮಗಳಲ್ಲಿ ಕಳೆದ ಹಲವು ತಿಂಗಳಿನಿಂದ ಕ್ರಷರ್ ಲಾರಿಗಳು ಚಲಿಸುತ್ತಿದ್ದು ಇದರಿಂದ ರಸ್ತೆಗಳು ಹಾಳಾಗುವುದರ ಜೊತೆಗೆ ಸಂಪೂರ್ಣ ಗುಂಡಿಮಯವಾಗಿ ಸಾರ್ವಜನಿಕರು, ವಾಹನ ಸವಾರರು ಪರದಾಡುವಂತಾಗಿದೆ.

ರೋಗ ಹೆಚ್ಚಳ: ಈ ಹಿಂದೆ ಬೇರೆ ಮಾರ್ಗವಾಗಿ ಬಿಡದಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ರಷರ್ ಲಾರಿಗಳು ಸಂಚರಿಸುತ್ತಿದ್ದವು. ಎರಡು ತಿಂಗಳಿನಿಂದ ಲಾರಿಗಳ ಸಂಖ್ಯೆ ಹೆಚ್ಚಿದ್ದು, ಇದರಿಂದ ಮಕ್ಕಳಿಗೆ ಹೃದಯ ಸಂಬಂಧಿ ಖಾಯಿಲೆಗಳು ಹೆಚ್ಚಾಗಿದೆ. ಮಕ್ಕಳನ್ನು ಗ್ರಾಮದಲ್ಲಿ ಆಟವಾಡಲೂ ಬಿಡಲು ಆಗುತ್ತಿಲ್ಲ. ಬಿಡದಿಯಿಂದ ಹಾರೋಹಳ್ಳಿಗೆ ಸಂಚರಿಸುವ ರಸ್ತೆಗಳೆಲ್ಲವೂ ಕ್ರಷರ್ ಲಾರಿಗಳಿಂದ ಹಾಳಾಗಿದೆ. ನಮ್ಮ ಗ್ರಾಮದ ರಸ್ತೆ ಸಹ ಹಾಳಾಗುತ್ತಿದೆ. ಜಿಲ್ಲಾಡಳಿತ ಶೀಘ್ರ ಕ್ರಮವಹಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಗಣಿ ಮತ್ತು ವಿಜ್ಙಾನ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ. ಶಾಲೆ ಪಕ್ಕದಲ್ಲೇ ಈ ರಸ್ತೆ ಇದ್ದು ಮಕ್ಕಳು ಶಾಲೆಗೆ ಬರಲು ಹೆದರುತ್ತಿದ್ದಾರೆ. ಬಿಸಿಯೂಟ ಮಾಡಲೂ ಹೆದರುತ್ತಿದ್ದಾರೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.

ಸ್ಥಳ ಪರಿಶೀಲನೆ

ಕ್ರಷರ್ ಲಾರಿಗಳು ಗ್ರಾಮಗಳಲ್ಲಿ ಸಂಚರಿಸಿ ರಸ್ತೆ ಹಾಳಾಗಿ ಗ್ರಾಮದ ಜನರಿಗೆ ದೂಳಿನಿಂದ ತೊಂದರೆ ಆಗುತ್ತಿರುವ ಬಗ್ಗೆ ಠಾಣೆಗೆ ದೂರು ಬಂದಿದ್ದು, ಸ್ಥಳ ಪರಿಶೀಲಿಸಲಾಗಿದೆ. ತಹಶೀಲ್ದಾರ್ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು.

–ಮಲ್ಲೇಶ್, ಪೊಲೀಸ್ ಇನ್ಸ್ಪೆಕ್ಟರ್

ಆರೋಗ್ಯ ಸಮಸ್ಯೆ

ಕ್ರಷರ್ ಲಾರಿಗಳು ಲೋಡ್ ಮಾಡಿಕೊಂಡು ಗ್ರಾಮದಲ್ಲಿ ಸಂಚಾರ ಮಾಡುತ್ತಿದ್ದು ದೂಳು ಹೆಚ್ಚಾಗಿ ಆರೋಗ್ಯ ಸಮಸ್ಯೆಗಳು ಕಾಡುತ್ತಿವೆ.

–ಜಯಮ್ಮ, ಕುರುಬರಹಳ್ಳಿ

ರಸ್ತೆ ಹಾಳು

ಕ್ರಷರ್ ಲಾರಿಗಳು ಓವರ್ ಲೋಡ್ ಮಾಡಿಕೊಂಡು ವೇಗವಾಗಿ ಹೋಗುವುದರಿಂದ ರಸ್ತೆಗಳು ಕಿತ್ತು ಹಾಳಾಗಿ, ಗುಂಡಿ ಬಿದ್ದು ಸಂಚಾರಕ್ಕೆ ಪರದಾಡುವಂತಾಗಿದೆ.

–ಪ್ರೇಮಮ್ಮ, ಬೈರೇಗೌಡನವಲಸೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.