ಹಾರೋಹಳ್ಳಿ: ತಾಲ್ಲೂಕಿನ ಅಭಿವೃದ್ಧಿ ಹಾಗೂ ಇಲ್ಲಿನ ಲೋಪದೋಷ ಬಗ್ಗೆ ಹೆಚ್ಚಿನ ಗಮನ ಹರಿಸಿ ಹಂತಹಂತವಾಗಿ ಹೋರಾಟ ನಡೆಸಲಾಗುವುದು ಎಂದು ಎಂದು ಜೆಡಿಎಸ್ ಯುವ ಘಟಕ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ಹಾರೋಹಳ್ಳಿ ಮದ್ದೂರಮ್ಮ ಹಾಗೂ ಪಟ್ಟಾಲದಮ್ಮ ದೇವಾಲಯದ ಜೀರ್ಣೋದ್ಧಾರ ಪ್ರತಿಷ್ಠಾಪನೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾರೋಹಳ್ಳಿ - ಮರಳವಾಡಿ ಎರಡು ಹೋಬಳಿ ಜೆಡಿಎಸ್ ಪಕ್ಷಕ್ಕೆ ಮೊದಲಿನಿಂದಲೂ ಜೀವ ಜಲವಿದ್ದಂತೆ, ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ವೇಳೆ ಹಾರೋಹಳ್ಳಿಯನ್ನು ತಾಲ್ಲೂಕಾಗಿ ರಚಿಸಿದರು. ಇಲ್ಲಿನ ಅಭಿವೃದ್ಧಿಗೆ ಮೊದಲಿನಿಂದಲೂ ಒತ್ತು ನೀಡಲಾಗಿದೆ. ಹೊಸ ತಾಲ್ಲೂಕು ರಚಿಸಿದ ನಂತರ ಹೆಚ್ಚಿನ ಅಭಿವೃದ್ಧಿಗೆ ಕ್ರಮ ಕೈಗೊಳ್ಳಬೇಕು ಎನ್ನುವಷ್ಟರಲ್ಲಿ ನಮ್ಮ ಸರ್ಕಾರ ಇಲ್ಲವಾಯಿತು ಎಂದರು.

‘ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದೆ. ಸರ್ಕಾರ ಏನು ಮಾಡುತ್ತಿದೆ ಎಂದು ಕಾದು ನೋಡುತ್ತಿದ್ದೇವೆ. ಎಲ್ಲ ಲೋಪದೋಷಾಗಳ ವಿರುದ್ಧ ಮುಂದಿನ ದಿನಗಳಲ್ಲಿ ನಮ್ಮ ಹೋರಾಟ ತೀವ್ರವಾಗಿ ನಡೆಯಲಿದೆ’ ಎಂದು ತಿಳಿಸಿದರು.

ರಾಮನಗರ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಬ್ಕೆರೆ ಶಿವಲಿಂಗಯ್ಯ, ಹಾರೋಹಳ್ಳಿ ಅಧ್ಯಕ್ಷ ಕೆ.ಎನ್.ರಾಮು, ಹೋಬಳಿ ಅಧ್ಯಕ್ಷ ಗಬ್ಬಾಡಿ ಮಲ್ಲಯ್ಯ, ಬಿಜೆಪಿ ಮುಖಂಡ ಎಚ್.ಎಸ್.ಮುರುಳಿಧರ್, ಬೆಂಕಿ ಮಾದೇವ, ಎಚ್.ವಿ.ನಂದಕುಮಾರ್, ಕೋಟೆ ಆನಂತಕುಮಾರ್, ಬೇಕರಿ ಸುಧಾಕರ್, ಗೋವಿಂದರಾಜು, ಚಿಕ್ಕಕಲ್ಬಾಳು ಲಕ್ಷ್ಮಣ್, ಕೋಟೆ ರಾಜು, ಶ್ಯಾಮ್ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260425-14-1563721079

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.