ಹಾರೋಹಳ್ಳಿ: ಹಾರೋಹಳ್ಳಿ ಹೋಬಳಿಯ ಗಬ್ಬಾಡಿ ಕಾವಲ್ ದಾಖ್ಲೆ ಗ್ರಾಮದ ಸರ್ವೆ ನಂ.1ರಿಂದ 39ರ ವರೆಗಿನ ಭೂ ಹಿಡುವಳಿ ಜಮೀನುಗಳಿಗೆ ನಿರಾಪೇಕ್ಷಣಾ ಪತ್ರ ನೀಡುವಂತೆ ಅರಣ್ಯ ಇಲಾಖೆಗೆ ಗಬ್ಬಾಡಿ ಕಾವಲ್ ಭೂ-ಹಿತ ರಕ್ಷಣಾ ಹೋರಾಟ ಸಮಿತಿ ಸದಸ್ಯರು ಮನವಿ ಮಾಡಿದೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗೆ ಮನವಿ ಸಲ್ಲಿಸಿದ ಸಮಿತಿ ಸದಸ್ಯರು, 1957ರಲ್ಲಿ ಆದಿ ಕರ್ನಾಟಕ ಜನಾಂಗ 60ಕ್ಕೂ ಹೆಚ್ಚು ಜನರಿಗೆ ತಲಾ ಎರಡು ಎಕರೆಯಂತೆ ಕಂದಾಯ ಇಲಾಖೆ ಹಂಚಿಕೆ ಮಾಡಿದೆ. ಎಲ್ಲಾ ರೀತಿಯ ದಾಖಲಾತಿಗಳು ಸಹ ರೈತರ ಬಳಿ ಇವೆ. ಹೀಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿದ್ದಾರೆ ಎಂದು ದೂರಿದರು.

ಮೈಸೂರು ಸರ್ಕಾರ ದಲಿತರಿಗೆ, ಜೀತ ಮುಕ್ತರಿಗೆ ಸ್ವತಂತ್ರವಾಗಿ ಬದುಕಲು ಜಮೀನು ಮಂಜೂರು ಸಂಬಂಧ ಖಂಡಿಕೆ ಒಂದರಲ್ಲಿ ಸೂಚಿಸಿರುವ ಬೆಂಗಳೂರು ಜಿಲ್ಲೆಯ ಒಂಬತ್ತು ಮೀಸಲು ಕಾವಲುಗಳಲ್ಲಿ ಗಬ್ಬಾಡಿ ಕಾವಲ್ ಹೊರ ತೆಗೆದು ಅಧಿಸೂಚನೆ ನೀಡಿರುತ್ತದೆ. ಹೀಗಿದ್ದರೂ ಅರಣ್ಯ ಇಲಾಖೆ ಅಧಿಕಾರಿಗಳು ರೈತರನ್ನು ಒಕ್ಕಲೆಬ್ಬಿಸಲು ನೋಡುತ್ತಿದ್ದಾರೆ. ಅಧಿಕಾರಿಗಳ ಕಿರುಕುಳ ತಪ್ಪಿಸಿ ಎಂದು ರಾಜ್ಯ ಸಮತಾ ಸೈನಿಕ ದಳದ ಯುವ ಘಟಕದ ಅಧ್ಯಕ್ಷ ಜಿ.ಗೋವಿಂದಯ್ಯ ಮನವಿ ಮಾಡಿದರು.

ಸಮಿತಿ ಸದಸ್ಯರಾದ ಲಕ್ಕಪ್ಪ, ಕೆಬ್ಬೆದೊಡ್ಡಿ ಗೋವಿಂದು, ವೆಂಕಟರಮಣಪ್ಪ,ಚಳವಳಿ ನಾಗೇಶ್, ಮಾಲಾನಂದ್, ಮಧು, ಕಿರಣ್, ಸಾಗರ್, ಕಮಲಮ್ಮ, ಗ್ರಾಮಸ್ಥರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.