ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೇತಗಾನಹಳ್ಳಿಯಲ್ಲಿ ಭೂಮಿ ಕೊಂಡ ನಂತರ ದೇವೇಗೌಡರು ಸಿಎಂ, ಪಿಎಂ ಆದರು: ಎಚ್‌ಡಿಕೆ

Last Updated 27 ನವೆಂಬರ್ 2021, 4:14 IST
ಅಕ್ಷರ ಗಾತ್ರ

ಬಿಡದಿ: 50 ವರ್ಷಗಳಿಂದ ರಾಜಕೀಯ ಅನುಭವ ಇದ್ದರೂ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವಾಗಿರಲಿಲ್ಲ. ಬಿಡದಿಯಲ್ಲಿ ಜಮೀನು ಖರೀದಿಸಿದ ಬಳಿಕ ಅವರು ರಾಮನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆದರು ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಬಿಡದಿ ಪುರಸಭೆ 7ನೇ ವಾರ್ಡ್ ವ್ಯಾಪ್ತಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದ ಗ್ರಾಮ ದೇವತೆ ದೇವಾಲಯ ಉದ್ಘಾಟನೆ, ಮೂರ್ತಿ ಪ್ರತಿಷ್ಠಾಪನೆ, ಕುಂಭಾಭಿಷೇಕ ಕಾರ್ಯಕ್ರಮದಲ್ಲಿ ಅವರುಮಾತನಾಡಿದರು.

ಕೇತಗಾನಹಳ್ಳಿಯ ತೋಟದ ಮನೆಯ ಪರಿಸರದಲ್ಲಿ ತಂದೆಎಚ್‌.ಡಿ. ದೇವೇಗೌಡ ಹಾಗೂ ತಾಯಿ ಚೆನ್ನಮ್ಮರ ಜೊತೆಗೂಡಿ ಸಸಿ ನೆಟ್ಟಕುಮಾರಸ್ವಾಮಿ
ಕೇತಗಾನಹಳ್ಳಿಯ ತೋಟದ ಮನೆಯ ಪರಿಸರದಲ್ಲಿ ತಂದೆಎಚ್‌.ಡಿ. ದೇವೇಗೌಡ ಹಾಗೂ ತಾಯಿ ಚೆನ್ನಮ್ಮರ ಜೊತೆಗೂಡಿ ಸಸಿ ನೆಟ್ಟಕುಮಾರಸ್ವಾಮಿ

ಬಿಡದಿ ಕೇತಗಾನಹಳ್ಳಿ ಗ್ರಾಮದಲ್ಲಿ ಜಮೀನು ಮತ್ತು ತೋಟದ ಮನೆ ಹೊಂದಿರುವುದರಿಂದ ನಮ್ಮ ಕುಟುಂಬದವರು ಈ ಗ್ರಾಮದವರಾಗಿದ್ದಾರೆ. 50 ವರ್ಷಗಳಿಂದ ರಾಜಕೀಯ ಅನುಭವ ಇದ್ದರೂ ದೇವೇಗೌಡರು ಮುಖ್ಯಮಂತ್ರಿ ಆಗಲು ಸಾಧ್ಯವಿರಲಿಲ್ಲ. ಬಿಡದಿಯಲ್ಲಿ ಜಮೀನು ಖರೀದಿಸಿದ ಬಳಿಕ ಅವರು ರಾಮನಗರ ಕ್ಷೇತ್ರದಿಂದ ಚುನಾವಣೆಯಲ್ಲಿ ಗೆದ್ದು ಮುಖ್ಯಮಂತ್ರಿ ಆದರು. ನಂತರ ಪ್ರಧಾನ ಮಂತ್ರಿಯಾಗುವ ಅವಕಾಶವೂ ದೊರೆಯಿತು. ಹಾಗಾಗಿ ಕೇತಗಾನಹಳ್ಳಿ ನಮ್ಮ ಕುಟುಂಬಕ್ಕೆ ಪುಣ್ಯಭೂಮಿಯ ಎಂದು ಕುಮಾರಸ್ವಾಮಿ ತಿಳಿಸಿದರು.

ಬಿಡದಿಯ ಮಣ್ಣ ತಮ್ಮ ಭವಿಷ್ಯ ಬರೆದಿರುವುದರಿಂದ ಮುಂದಿನ ತಮ್ಮ ಎಲ್ಲ ರಾಜಕೀಯ ಚಟುವಟಿಕೆಗಳು ಬಿಡದಿಯ ತೋಟದ ಮನೆಯಿಂದಲೇ ನಡೆಯಲಿದೆ. ಭವಿಷ್ಯದಲ್ಲಿ ಯಾವ ಸ್ಥಾನಮಾನ ಬಂದರೂ ತೋಟದ ಮನೆಯಲ್ ವಾಸ್ತವ ಹೂಡುವುದಾಗಿ ಘೋಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT