ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪೌರಕಾರ್ಮಿಕರ ಆರೋಗ್ಯದ ನಿರ್ಲಕ್ಷ್ಯ ಸಲ್ಲದು’

ಜೆಸಿಐ ಸಂಸ್ಥೆ, ಮಾನಸ ಆಸ್ಪತ್ರೆ, ಪುರಸಭೆ ಸಹಯೋಗದಲ್ಲಿ ಪೌರಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ
Last Updated 9 ಸೆಪ್ಟೆಂಬರ್ 2019, 13:32 IST
ಅಕ್ಷರ ಗಾತ್ರ

ದೇವನಹಳ್ಳಿ: ಇಡೀ ನಗರವನ್ನು ಸ್ವಚ್ಛಗೊಳಸಿ ಸಾರ್ವಜನಿಕರ ಆರೋಗ್ಯ ಸುಧಾರಣೆಗೆ ಶ್ರಮಿಸುತ್ತಿರುವ ಪೌರ ಕಾರ್ಮಿಕರು ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಸಲ್ಲದು ಎಂದು ಜೆಸಿಐ ವಲಯ ಅಧ್ಯಕ್ಷ ಜಫಿನ್ ಜಾಯ್ ಹೇಳಿದರು.

ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಜೆಸಿಐ ಸಂಸ್ಥೆ, ಮಾನಸ ಆಸ್ಪತ್ರೆ ಮತ್ತು ಪುರಸಭೆ ಸಹಯೋಗದಲ್ಲಿ ನಡೆದ ಪೌರ ಕಾರ್ಮಿಕರಿಗೆ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಪ್ರತಿಯೊಬ್ಬರಿಗೂ ಸ್ವಚ್ಛಗಾಳಿ, ಶುದ್ಧ ಕುಡಿಯುವ ನೀರು, ಪೂರಕ ಪೌಷ್ಠಿಕಾಂಶಯುಕ್ತ ಆಹಾರ ಅವಶ್ಯ. ಉತ್ತಮ ಪರಿಸರ ಕಾಯ್ದುಕೊಳ್ಳಲು ಶ್ರಮಿಸುತ್ತಿರುವ ಪೌರಕಾರ್ಮಿಕರು ದಿನನಿತ್ಯ ಕೊಳಕು ತ್ಯಾಜ್ಯ, ಗಲೀಜು ತುಂಬಿದ ಚರಂಡಿಗಳಲ್ಲಿ ಇಳಿದು ಸ್ವಚ್ಛ ಮಾಡುತ್ತಾರೆ. ರಸ್ತೆ ಬದಿಯಲ್ಲಿನ ಮಣ್ಣು, ಬೆಳೆದ ಗಿಡಿಗಂಟಿ ತೆರೆವುಗೊಳಿಸುತ್ತಾರೆ. ಮನೆಮನೆಗೆ ತೆರಳಿ ಒಣ ಮತ್ತು ಘನ ತ್ಯಾಜ್ಯ ಸಂಗ್ರಹಿಸಿ ಸಾಗಾಣಿಕೆ ಮಾಡುತ್ತಾರೆ. ಅಂತಹ ಕಾರ್ಮಿಕರನ್ನು ಮಾನವೀಯತೆಯೊಂದಿಗೆ ಆರೋಗ್ಯವಾಗಿರಲು ಜಾಗೃತಿ ಮೂಡಿಸಬೇಕು ಎಂದು ಹೇಳಿದರು.

ಪುರಸಭೆ ಸದಸ್ಯ ಜಿ.ಎ.ರವೀಂದ್ರ ಮತ್ತು ಪುರಸಭೆ ಮುಖ್ಯಾಧಿಕಾರಿ ಹನುಮಂತೇಗೌಡ ಮಾತನಾಡಿ, ‘ಪೌರಕಾರ್ಮಿಕರ ಸಂಕಷ್ಟ ಎಂತಹದ್ದು ಎಂಬುದು ಗೊತ್ತು. ಮಕ್ಕಳನ್ನು ನಿಮ್ಮಂತೆ ಪೌರಕಾರ್ಮಿಕರನ್ನಾಗಿ ಮಾಡದೆ ಉತ್ತಮ ರೀತಿಯ ಶಿಕ್ಷಣವನ್ನು ಕೊಡಿಸಿ. ಪ್ರತಿನಿತ್ಯ ಮದ್ಯ ಸೇವಿಸುವ ಬದಲು ಉತ್ತಮ ಪೌಷ್ಟಿಕಾಂಶಯುಕ್ತ ಆಹಾರ ಸೇವನೆಗೆ ಒತ್ತು ನೀಡಿ. ಸರ್ಕಾರದಿಂದ ಸಿಗುವ ಪ್ರತಿಯೊಂದು ಸವಲತ್ತು ಇಲಾಖೆ ನೀಡುತ್ತಿದೆ ಸದುಪಯೋಗ ಪಡಿಸಿಕೊಳ್ಳಿ. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ತಪಾಸಣೆ ಮಾಡಿಸಿ ವೈದ್ಯರಿಂದ ಅಗತ್ಯ ಸಲಹೆ ಪಡೆದುಕೊಂಡು ಆರೋಗ್ಯಯುತ ಸಮಾಜಕ್ಕೆ ಸಹಕರಿಸಿ’ ಎಂದು ಹೇಳಿದರು.

ಜೆಸಿಐ ಸಂಸ್ಥೆಯ ಅಧ್ಯಕ್ಷ ಹರ್ಷ, ಪೂರ್ವಾಧ್ಯಕ್ಷರಾದ ಎಂ.ಆನಂದ್, ಪ್ರಭುದೇವ್, ಎಸ್.ವಿ.ಮಂಜುನಾಥ್, ಜೆಸಿಐ ಯೋಜನಾ ನಿರ್ದೇಶಕ ಮುನಿಕೃಷ್ಣ, ಸದಸ್ಯ ಬಿ.ಕೆ.ಶಿವಪ್ಪ, ಪುರಸಭೆ ಹಿರಿಯ ಆರೋಗ್ಯಾಧಿಕಾರಿ ಬಿಜಾಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT