ಬಿಡದಿ: ಹೆಗ್ಗಡಗೆರೆ ಗ್ರಾಮದಲ್ಲಿ 38 ವರ್ಷಗಳ ನಂತರ ಊರಹಬ್ಬದ ಸಂಭ್ರಮ ಮನೆಮಾಡಿದೆ. ಗ್ರಾಮದ ಮಾರಮ್ಮ ಹಾಗೂ ಮಾಸ್ತಮ್ಮ ಅಗ್ನಿಕೊಂಡ ಮಹೋತ್ಸವಕ್ಕೆ ಗ್ರಾಮ ಸಜ್ಜಾಗಿದೆ. ಗ್ರಾಮದ ಪ್ರತಿ ಬೀದಿಗಳೂ ವಿದ್ಯುತ್ ದೀಪಗಳಿಂದ ಶೃಂಗಾರಗೊಂಡಿದ್ದು ಹಬ್ಬದ ಸಂಭ್ರಮವನ್ನು ಹೆಚ್ಚಿಸಿವೆ.

ಅಗ್ನಿಕೊಂಡ ಮಹೋತ್ಸವದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಮೇ 8ರಿಂದ ಆರಂಭವಾಗಿದ್ದು, ಮೇ 15ರವರೆಗೆ ಎಂಟು ದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ.

ಮೇ 11ರಂದು ಮಾಸ್ತಮ್ಮನಿಗೆ ಎಳವಾರ ಪೂಜೆ ಹಾಗೂ ದೇವತೆಗಳ ಭವ್ಯ ಮೆರವಣಿಗೆ ನಡೆಯಲಿದೆ.12 ರಂದು ಆರತಿಯೊಂದಿಗೆ ಮಾಸ್ತಮ್ಮ ಅಗ್ನಿಕೊಂಡ ಪ್ರವೇಶ ನಡೆಯಲಿದೆ. ಸಂಜೆ ಮಾರಮ್ಮ ಎಳವಾರ ತುಂಬುವ ಕಾರ್ಯಕ್ರಮ ಇದೆ.

13 ರಂದು ಹೂವಿನ ಆರತಿಯೊಂದಿಗೆ ಮಾರಮ್ಮ ಅಗ್ನಿಕೊಂಡ ಪ್ರವೇಶ, 14ಕ್ಕೆ ಕುರುಚ್ಚು ಮೆರವಣಿಗೆ, 15ರಂದು ಗ್ರಾಮದ ಎಲ್ಲಾ ದೇವತೆಗಳ ಪಲ್ಲಕ್ಕಿ ಉತ್ಸವ ಮತ್ತು ಸಮಾರೋಪ ಮೆರವಣಿಗೆ ನಡೆಯಲಿದೆ. ಗೊಂಬೆ ಆಟ ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿದೆ.

ಗ್ರಾಮದಲ್ಲಿ ಕೊನೆಯದಾಗಿ 1988ರಲ್ಲಿ ಊರಹಬ್ಬ ನಡೆದಿತ್ತು. ನಂತರ ವಿವಿಧ ಕಾರಣಗ ಹಾಗೂ ಸಣ್ಣಪುಟ್ಟ ಮನಸ್ತಾಪಗಳಿಂದಾಗಿ ಹಬ್ಬ ಆಚರಿಸಲು ಆಗಿರಲಿಲ್ಲ. ಇದೀಗ ಊರಿನ ಎಲ್ಲರೂ ವೈಮನಸ್ಸು ಮರೆತು, ಒಗ್ಗಟ್ಟಿನಿಂದ ಊರಹಬ್ಬ ಮಾಡುತ್ತಿದ್ದಾರೆ.

ದಶಕಗಳ ನಂತರ ನಡೆಯುತ್ತಿರುವ ಜಾತ್ರೆಗೆ ರಾಜ್ಯದ ನಾನಾ ಕಡೆ ನೆಲೆಸಿರುವ ಗ್ರಾಮದ ಮೂಲದವರು ಬಂದಿದ್ದಾರೆ. ಮಕ್ಕಳು ಮತ್ತು ಯುವಕರಿಗಾಗಿ ವಿವಿಧ ಬಗೆಯ ಆಟಿಕೆ, ಮನರಂಜನಾ ಪ್ರದರ್ಶನ ಕಲೆಗಳು ತಲೆ ಎತ್ತಿವೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260511-14-668287733

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.