ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರ ಕಡಿದರೆ ಹೊಸ ಸಸಿ ನೆಡಬೇಕು’

Last Updated 13 ಮಾರ್ಚ್ 2019, 14:02 IST
ಅಕ್ಷರ ಗಾತ್ರ

ಕನಕಪುರ: ಮರಳೆ ಗ್ರಾಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯ ಸಮಾಜ ಕಾರ್ಯ ಅಧ್ಯಯನ ವಿಭಾಗದಿಂದ 2018-19ನೇ ಸಾಲಿನ ಸಮಾಜ ಸೇವಾ ಕಾರ್ಯ 10 ದಿನಗಳು ಗ್ರಾಮದಲ್ಲಿ ನಡೆಯಿತು.

ಗ್ರಾಮದಲ್ಲಿ ರಸ್ತೆ, ಚರಂಡಿ ಸ್ವಚ್ಛತೆಗೊಳಿಸಿ ಜನರಿಗೆ ಜಾಗೃತಿ ಮೂಡಿಸಲಾಯಿತು. ಸಸಿ ನೆಡುವ ಕಾರ್ಯಕ್ರಮವನ್ನು ಲಯನ್ಸ್‌ ಸಂಸ್ಥೆ ಜಿಲ್ಲಾಧ್ಯಕ್ಷ ಮರಸಪ್ಪ ರವಿ ಅವರು ನಡೆಸಿಕೊಟ್ಟರು.

ಗ್ರಾಮಗಳಲ್ಲಿ ನಡೆಯುವ ಕೊಂಡೋತ್ಸವಕ್ಕೆ ಮರಗಳನ್ನು ಕಡಿಯಬಾರದು. ಒಣಗಿ ಬಿದ್ದು ಹೋಗಿರುವ ಮರದ ತುಂಡುಗಳನ್ನು ಬಳಕೆ ಮಾಡಬೇಕು. ಅರಣ್ಯ ಇಲಾಖೆಯಲ್ಲಿ ಒಂದು ಮರ ಕಡಿಯಬೇಕಾದರೆ ಒಂದು ಗಿಡ ನೆಟ್ಟು ಬೆಳಸಬೇಕೆಂಬ ನಿಯಮವಿದೆ. ಅದನ್ನು ಅಧಿಕಾರಿಗಳು ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

ಈ ರೀತಿ ಮಾಡುವುದರಿಂದ ಮರ ಕಡಿಯುವುದು ಕಡಿಮೆಯಾಗುತ್ತದೆ. ಜತೆಗೆ ಅನಿವಾರ್ಯವಾಗಿ ಮರ ಕಡಿದರೆ ಅದರ ಬದಲಾಗಿ ಹೊಸ ಮರ ಬೆಳಸುವ ವ್ಯವಸ್ಥೆಯಾಗುತ್ತದೆ ಎಂದು ತಿಳಿಸಿದರು.

ಡಾ.ಕೋದಂಡರಾಮ, ನಾಗರಾಜ ನಾಯ್ಕ್‌, ಲಯನ್ಸ್‌ ಅಧ್ಯಕ್ಷ ಸತೀಶ್‌, ಲಿಯೋ ಅಧ್ಯಕ್ಷ ದರ್ಶನ್‌, ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಮರಳೆ ಗ್ರಾಮದ ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT