ರಾಮನಗರ: ವರ್ಕ್ ಫ್ರಂ ಹೋಂ ಕೆಲಸ ಕೊಡಿಸುವ ನೆಪದಲ್ಲಿ ಕಾಲೇಜು ಯುವತಿಯನ್ನು ಪರಿಚಯಿಸಿಕೊಂಡು ಆಕೆಯ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಯುವತಿ ಮತ್ತು ಆಕೆಯ ಕುಟುಂಬದವರಿಗೆ ಕಳಿಸಿ ತೊಂದರೆ ಕೊಡುತ್ತಿದ್ದ ಆರೋಪಿಯನ್ನು ಕಗ್ಗಲೀಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರಿನ ಮಲ್ಲೇಶ್ವರದಲ್ಲಿ ವಾಸವಾಗಿರುವ ಬಳ್ಳಾರಿ ಜಿಲ್ಲೆಯ ಯಲ್ಲಾಪುರ ಗ್ರಾಮದ ಶಿವಶಂಕರ್ (35) ಬಂಧಿತ ವ್ಯಕ್ತಿ. ಆರೋಪಿಯಿಂದ ಮೊಬೈಲ್ ಫೋನ್ ಜಪ್ತಿ ಮಾಡಿರುವ ಪೊಲೀಸರು ಆತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಕೊರಿಯರ್ ಕೆಲಸದ ಜೊತೆಗೆ ಓಲಾ ಬೈಕ್ ಚಾಲನೆ ಕೆಲಸ ಮಾಡುತ್ತಿದ್ದ ಶಿವಶಂಕರ್ ಫ್ರೆಂಡ್ ಆ್ಯಪ್ ಮೂಲಕ ಹೆಣ್ಣು ಮಕ್ಕಳನ್ನು ಸಂಪರ್ಕಿಸುತ್ತಿದ್ದ. ಮನೆಯಿಂದಲೇ ಮಾಡುವ ಕೆಲಸ ಕೊಡಿಸುವುದಾಗಿ ನಂಬಿಸಿ ಅವರ ಫೋಟೊ ಹಾಗೂ ವಿದ್ಯಾರ್ಹತೆಯ ದಾಲಾತಿಗಳನ್ನು ಪಡೆದುಕೊಳ್ಳುತ್ತಿದ್ದ. ನಂತರ ಹೆಣ್ಣು ಮಕ್ಕಳ ಫೋಟೊಗಳನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಅವರಿಗೆ ಮತ್ತು ಕುಟುಂಬದವರಿಗೆ ಕಳಿಸಿ ವಿಕೃತಿ ಮೆರೆಯುತ್ತಿದ್ದ.

ಅದರಂತೆ ಠಾಣೆ ವ್ಯಾಪ್ತಿಯ ಕಾಲೇಜು ಯುವತಿಗೂ ಉದ್ಯೋಗದ ಆಸೆ ತೋರಿಸಿ ₹500 ಮೊತ್ತದ ಜೊತೆಗೆ ಫೋಟೊ ಹಾಗೂ ದಾಖಲಾತಿ ಪಡೆದುಕೊಂಡಿದ್ದ. ಬಳಿಕ ಆಕೆಯ ಫೋಟೊವನ್ನು ಅಶ್ಲೀಲವಾಗಿ ಎಡಿಟ್ ಮಾಡಿ ಯುವತಿಯ ತಂದೆ ಹಾಗೂ ಇತರರಿಗೆ ಸಾಮಾಜಿಕ ಜಾಲತಾಣದಲ್ಲಿ ಕಳಿಸಿದ್ದ. ಯುವತಿ ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.