ಕನಕಪುರ: ನಗರದ ಮಳಗಾಳಿನಲ್ಲಿ ಮಾದೇಶ್ವರ, ಮರಸನಾಡಮ್ಮ ಮತ್ತು ಹುಣಸನಹಳ್ಳಿ ದೇವಿ ಅಗ್ನಿಕೊಂಡೋತ್ಸವ ಬುಧವಾರ ನಡೆಯಿತು.

ಈ ಗ್ರಾಮದಲ್ಲಿ ಒಂದೇ ಕೊಂಡದಲ್ಲಿ ಮೂರು ದೇವರು ಅಗ್ನಿಕೊಂಡವನ್ನು ಒಬ್ಬರ ನಂತರ ಮತ್ತೊಬ್ಬರು ಹಾಯುವುದು ವಿಶೇಷ. ಗ್ರಾಮದಲ್ಲಿ ಮರಸನಾಡಮ್ಮ ಮತ್ತು ಮಾದೇಶ್ವರ ದೇವಾಲಯವಿದೆ.

ಮರಸನಾಡಮ್ಮ ಮತ್ತು ಮಾದೇಶ್ವರ ಜಾತ್ರೆ ನಾಲ್ಕು ದಿನ ನಡೆಯುತ್ತದೆ.

ಮಂಗಳವಾರ ಎಳವಾರ ಕೊಂಡ ತೆಗೆಯುವ ಕಾರ್ಯಕ್ರಮ ನಡೆಯಿತು. ಸೌದಿ ಬಂಡಿಯ ಎತ್ತುಗಳಿಗೆ ವಿಶೇಷವಾಗಿ ಅಲಂಕಾರ ಮಾಡಿದ್ದು ಪ್ರತಿ ಮನೆಯವರು ಪೂಜೆ ಸಲ್ಲಿಸಿದರು. ರಾತ್ರಿ ಕೊಂಡಕ್ಕೆ ಸೌದೆ ಹಾಕಿ ಅಗ್ನಿಪೂಜೆ ನೆರವೇರಿಸಲಾಯಿತು. ಬುಧವಾರ ಬೆಳಿಗ್ಗೆ ದೇಗುಲ ಮಠಕ್ಕೆ ಹೋಗಿ ಪೂಜೆ ನೆರವೇರಿಸಿ ಅಲ್ಲಿಂದ ಮೆರವಣಿಗೆಯಲ್ಲಿ ದೇವರನ್ನು ಗ್ರಾಮಕ್ಕೆ ಕರೆತರಲಾಯಿತು.

ಮಾದೇಶ್ವರ ದೇವರ ಅರ್ಚಕ ಮರಿದೇವ್ರು ಕೊಂಡ ಪ್ರವೇಶಿಸಿದರು. ಹುಣಸನಹಳ್ಳಿ ಅರ್ಚಕ ಪ್ರಜ್ವಲ್ ಮಡಿ ಬಿಡುವ ಮೂಲಕ ಕೊಂಡ ಹಾಯ್ದರು, ಕೊನೆಯದಾಗಿ ಮರಸನಾಡಮ್ಮ ಅರ್ಚಕ ಸತೀಶ್ ಎಂ.ವಿ. ಕೊಂಡ ಹಾಯ್ದರು.

ಕೊಂಡದ ನಂತರ ರಥೋತ್ಸವ ಜರುಗಿತು. ದೇವಸ್ಥಾನದ ಬೀದಿಯಲ್ಲಿ ಭಕ್ತರು ತೇರು ಎಳೆದರು. ಸಂಜೆ ಗ್ರಾಮದಲ್ಲಿ ಮಾದೇಶ್ವರ ಮತ್ತು ಮರಸನಾಡಮ್ಮ ದೇವರ ಪಲ್ಲಕ್ಕಿ ಉತ್ಸವ ನಡೆಯಿತು.

ಗುರುವಾರ ಪಾನಕ, ನೀರು ಮಜ್ಜಿಗೆ ತಂಬಿಟ್ಟಿನ ಆರತಿ ಕಾರ್ಯಕ್ರಮ ನಡೆಯಲಿದೆ. ನಂತರ ಸಿಡಿ ಉತ್ಸವ ಜರುಗಲಿದೆ. ರಾತ್ರಿ ಗ್ರಾಮದಲ್ಲಿ ಮನೋರಂಜನ ಕಾರ್ಯಕ್ರಮ ನಡೆಯುತ್ತದೆ. ಶುಕ್ರವಾರ ಮರಸನಾಡಮ್ಮ ಮತ್ತು ಮಾದೇಶ್ವರ ದೇವರು ಕನಕಪುರ ಮತ್ತು ಮಳಗಾಳು ಗ್ರಾಮದ ಮನೆ ಮನೆಗಳಿಗೆ ಹೋಗಿ ಪೂಜೆ ಸ್ವೀಕರಿಸಲಿದೆ.

ಮಹಿಳೆಯರು ದೇವರಿಗೆ ಮಡಲಕ್ಕಿ ಕಟ್ಟುವುದು ವಿಶೇಷ. ತವರು ಮನೆಗೆ ಬಂದ ಹೆಣ್ಣು ಮಕ್ಕಳು ದೇವರಿಗೆ ಮಡಲಕ್ಕಿ ಕಟ್ಟುವ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260416-14-1589511015

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.