ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಬಿಜ್ಜಳ್ಳಿ ಗ್ರಾಮದಲ್ಲಿ ಸುಗ್ಗಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಸಂಸ್ಥೆ ವತಿಯಿಂದ ಮುಂಗಾರು ಉತ್ಸವ ಸೋಮವಾರ ನಡೆಯಿತು.

ಕಾರ್ಯಕ್ರಮ ಉದ್ಘಾಟಿಸಿದ ಜಾನಪದ ಕಲಾವಿದ ಚಿಕ್ಕಮರೀಗೌಡ, ‘ಗ್ರಾಮೀಣ ಭಾಗದ ರೈತರು, ರೈತ ಮಹಿಳೆಯರು ನಾಟಿ ಮಾಡುವಾಗ, ಬಿತ್ತನೆ, ಕಟಾವು, ಒಕ್ಕಣೆ ಮಾಡುವಾಗ, ರಾಗಿ ಬೀಸುವಾಗ ಗೀತೆಗಳನ್ನು ಹಾಡಿ ಜನಪದ ಬೆಳೆಸಿದ್ದಾರೆ’ ಎಂದು ಸ್ಮರಿಸಿದರು.

ದಿವ್ಯ ಫೌಂಡೇಶನ್ನ ಸುರೇಶ್, ‘ಜನಪದ ಸಾಹಿತ್ಯವು ಹಳ್ಳಿಗಾಡಿನ ಮುಗ್ಧ ಜನರಿಂದ, ಮಹಿಳೆಯರಿಂದ ಹುಟ್ಟಿ, ಬೆಳೆದು ಬಂದಿದೆ. ಇಂತಹ ಸಂಸ್ಕೃತಿಯನ್ನು ಉಳಿಸಿ ಮುಂದಿನ ತಲೆಮಾರಿಗೆ ಕೊಂಡೊಯ್ಯುವ ಜವಾಬ್ದಾರಿ ನಮ್ಮ ಮೇಲಿದೆ’ ಎಂದರು.

ಪ್ರಮುಖರಾದ ದಿಲೀಪ್, ವೀರಭದ್ರೇಗೌಡ, ಕೆಂಪಲಿಂಗಯ್ಯ, ನಾಗರಾಜು, ರಾಜಣ್ಣ ಮಾತನಾಡಿ, ‘ಗ್ರಾಮೀಣ ಸಂಸ್ಕೃತಿ, ಆಚರಣೆಗಳು ಕಣ್ಮರೆಯಾಗುತ್ತಿವೆ. ಇಂತಹ ಆಚರಣೆ, ಉತ್ಸವಗಳು ಗ್ರಾಮೀಣ ಸಂಸ್ಕೃತಿ ನೆನಪಿಸುತ್ತವೆ’ ಎಂದು ಹೇಳಿದರು.

ಸಾಂಸ್ಕೃತಿಕ ಕಾರ್ಯಕ್ರಮದ ಸಂಯೋಜಕ ಕೆ.ಕಾಳಯ್ಯ, ಗಾಯಕರಾದ ಕೆ.ಶಿವರಾಂ, ಮುನಿರಾಜು, ರಮೇಶ್.ಎ.ಆರ್, ಶ್ರೀನಿವಾಸ್, ಚೆನ್ನಮ್ಮರಯ್ಯ, ರೇಖಾ, ವೈರಮುಡಿ, ಶಿವಕುಮಾರ್ ಉಪಸ್ಥಿತರಿದ್ದರು.

ಪೂಜಾ ಕುಣಿತ, ಡೊಳ್ಳು ಕುಣಿತ, ಚಿಲಿಪಿಲಿ ಗೊಂಬೆ, ತಮಟೆ ವಾದನ ಹಾಗೂ ಇತರ ಕಲಾತಂಡಗಳ ಪ್ರದರ್ಶನ ಗಮನ ಸೆಳೆಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-14-237054818

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.