ಕನಕಪುರ: ಶಾಂತಿ ಮತ್ತು ಸಮಾನತೆ ಸಂಕೇತವಾದ ಬುದ್ಧನ ಧಮ್ಮವನ್ನು ವಿವಿಧ ರಾಷ್ಟ್ರಗಳು ಅಳವಡಿಸಿಕೊಂಡಿವೆ. ಆದರೆ, ಬುದ್ಧ ಹುಟ್ಟಿದ ನಾಡಿನಲ್ಲೇ ಅದನ್ನು ಅಳವಡಿಸಿಕೊಳ್ಳದಿರುವುದು ದುರದೃಷ್ಟಕರ ಎಂದು ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ ವಿಷಾದಿಸಿದರು.

ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ಆಯೋಜಿಸಿದ್ದ ಬುದ್ಧ ಜಯಂತಿಯಲ್ಲಿ ಅವರು ಶುಕ್ರವಾರ ಮಾತನಾಡಿದರು.

ಮಹನೀಯರ ಜಯಂತಿ ಕೇವಲ ಆಚರಿಸಿದರೆ ಸಾಲದು. ಅವರ ತತ್ವ, ಆದರ್ಶ ಹಾಗೂ ಆಕಾಂಕ್ಷೆ ಕಾರ್ಯರೂಪಕ್ಕೆ ತಂದಾಗ ಮಾತ್ರ ಜಯಂತಿಗೆ ನಿಜವಾದ ಅರ್ಥ ಬರುತ್ತದೆ. ರಾಷ್ಟ್ರದಲ್ಲೂ ಬುದ್ಧ ಧಮ್ಮ ಆಚರಣೆಗೆ ತರಬೇಕು ಎಂದು ಹೇಳಿದರು.

ಗೌತಮ ಬುದ್ಧ ತಮ್ಮ ಸಂಸಾರ ತೊರೆದು ಪ್ರಪಂಚವನ್ನು ಪರ್ಯಟನೆ ಮಾಡಿದರು. ಆ ಸಂದರ್ಭದಲ್ಲಿ ಅವರ ಪ್ರಶ್ನೆಗಳಿಗೆ ಉತ್ತರ ಸಿಗದೆ ಹೋದಾಗ ಅವರು ಬೋಧಿವೃಕ್ಷದ ಕೆಳಗೆ ಧ್ಯಾನದಲ್ಲಿ ತೊಡಗಿದರು. ವೈಶಾಖ ಹುಣ್ಣಿಮೆ ದಿನ ಅವರಿಗೆ ಜ್ಞಾನೋದಯವಾಯಿತು ಮತ್ತು ಎಲ್ಲ ಪ್ರಶ್ನೆಗಳಿಗೆ ಉತ್ತರಗಳು ದೊರಕಿದವು ಎಂದು ಮಲ್ಲಿಕಾರ್ಜುನ ನೆನಪಿಸಿದರು.

ಬಹುಜನ ಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ನೀಲಿ ರಮೇಶ್ ಮಾತನಾಡಿ, ಭಾರತದಲ್ಲಿ ಹುಟ್ಟಿ ಜ್ಞಾನೋದಯ ಪಡೆದ ಬುದ್ಧನ ಮಾರ್ಗವನ್ನು ಇತರ ರಾಷ್ಟ್ರಗಳು ಒಪ್ಪಿಕೊಂಡು ಅಳವಡಿಸಿಕೊಳ್ಳುತ್ತಿವೆ. ಶಾಂತಿಗಾಗಿ ದೇಶದಲ್ಲಿ ಬುದ್ಧ ಧರ್ಮ ಪಾಲಿಸಬೇಕು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಉಪತಹಶೀಲ್ದಾರ್ ಮನೋಹರ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಮೋಹನ್ ಬಾಬು, ಎಡಿಎಲ್ಆರ್ ನಂದೀಶ್, ಆಹಾರ ಇಲಾಖೆ ಶಿರಸ್ತೇದಾರ್ ಜಯಸಿಂಹ, ಸಾಹಿತಿ ಕೂ.ಗಿ ಗಿರಿಯಪ್ಪ, ಶಿಕ್ಷಕರಾದ ರಾಜೇಶ್, ಗೋವಿಂದಸ್ವಾಮಿ, ಮಂಜುನಾಥ್, ಪೊಲೀಸ್ ಇಲಾಖೆ ಲಿಂಗರಾಜು, ಶಿವಕುಮಾರ್, ರಾಷ್ಟ್ರೀಯ ಭೀಮ ಪಡೆಯ ಭರತ್ ಕುಮಾರ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-14-457096391

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.