ಕನಕಪುರ: ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ವತಿಯಿಂದ ನಗರಸಭೆ ಮುಂಭಾಗದ ಸರ್ವಿಸ್ ರಸ್ತೆಯಲ್ಲಿ ಗೌತಮ ಬುದ್ಧ ಜಯಂತಿ ಮತ್ತು ಕಾರ್ಮಿಕ ದಿನಾಚರಣೆ ಶುಕ್ರವಾರ ರಾತ್ರಿ ನಡೆಯಿತು.

ದೇಗುಲ ಮಠದ ಚನ್ನಬಸವ ಸ್ವಾಮೀಜಿ ಮಾತನಾಡಿ, ಗೌತಮ ಬುದ್ಧನ ವೈಚಾರಿಕ ಚಿಂತನೆಗಳು ಮತ್ತು ತತ್ವ ಆದರ್ಶಗಳು ಜಗತ್ತಿನ ಮಾರ್ಗದರ್ಶನಗಳಾಗಿವೆ ಎಂದು ತಿಳಿಸಿದರು.

ಬುದ್ಧನ ಬೌದ್ಧ ಮಂದಿರಗಳು ಮನುಷ್ಯ ಜೀವನವನ್ನು ಉತ್ತಮಗೊಳಿಸುವ ಪರಿವರ್ತಿಸಿ, ಶಾಂತಗೊಳಿಸುವ ಸುಂದರ ಪ್ರಾಕೃತಿಕ ತಾಣಗಳಂತಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೆಂಗಳೂರಿನ ಫೋರ್ಟಿಸ್ ಆಸ್ಪತ್ರೆಯ ಹೃದಯ ರೋಗ ತಜ್ಞ ಡಾ.ಬಿ.ಸಿ ಬೊಮ್ಮಯ್ಯ ಮಾತನಾಡಿ, ಭಾರತದಲ್ಲಿ ಜನಿಸಿದ ಗೌತಮ ಬುದ್ಧರನ್ನು ಜಗತ್ತು ನಿಸಂದೇಹವಾಗಿ ಒಪ್ಪಿ ಮುನ್ನಡೆಯುತ್ತಿರುವುದರಿಂದ ಆ ರಾಷ್ಟ್ರಗಳು ಪ್ರಗತಿಯ ನಾಗಾಲೋಟದಲ್ಲಿ ಮುನ್ನಡೆಯುತ್ತಿವೆ ಎಂದರು.

ಗೌತಮ ಬುದ್ಧನನ್ನು ತಿರಸ್ಕರಿಸಲ್ಪಟ್ಟಿರುವುದರಿಂದ ಆತನ ಆಚಾರ ವಿಚಾರಗಳನ್ನು ಭಾರತೀಯ ಮೂಲದ ಜನರು ಪಾಲಿಸದಿರುವುದರಿಂದ ಭಾರತದಲ್ಲಿ ಬೌದ್ಧಿಕ ದಿವಾಳಿತನ ಮನೆ ಮಾಡಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಸಮತಾ ಸೈನಿಕ ದಳದ ಡಾ.ಜಿ.ಗೋವಿಂದಯ್ಯ ಮಾತನಾಡಿ, ಬುದ್ಧ ಮತ್ತು ಆತನ ಧಮ್ಮವು ಸಮಾನತೆ ಸಾರುವುದಲ್ಲದೆ ಲಿಂಗ ಭೇದವಿಲ್ಲದೆ ಜನಸಾಮಾನ್ಯರಿಗೆ ಸದಾ ದಾರಿ ದೀಪವಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಹಾರೋಹಳ್ಳಿ ಶುಭೋದಯ ಆಸ್ಪತ್ರೆ ಡಾ.ವಿ.ಎಸ್.ತೇಜಾವತಿ ಮಾತನಾಡಿ, ಬುದ್ಧ ಧಮ್ಮ ಸಂಘ ಭಾರತದಲ್ಲಿ ಪುನಶ್ಚೇತನಗೊಳ್ಳಬೇಕು. ಬಿಕ್ಕು ಸಂಘದಲ್ಲಿರುವ ಬಿಕ್ಕುಗಳು ಸಮಾಜದಲ್ಲಿ ಹಾದಿ ತಪ್ಪಿರುವ ಯುವಕ ಯುವತಿಯರನ್ನು ಸರಿದಾರಿಗೆ ತರುವ ಕಾರ್ಯ ಮಾಡಬೇಕೆಂದು ಹೇಳಿದರು.

ಧಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಮಲ್ಲಿಕಾರ್ಜುನ್ ಮಾತನಾಡಿ, ದೇಶದಲ್ಲಿರುವ ಎಂಎಲ್ಎ, ಎಂಪಿಗಳಿಗೆ ಮತ್ತು ರಾಜ್ಯಸಭಾ ಸದಸ್ಯರಿಗೆ ಒಟ್ಟಾರೆಯಾಗಿ ರಾಜಕಾರಣಿಗಳಿಗೆ ಸಾಮ್ರಾಟ್ ಅಶೋಕ ಮಾದರಿಯಾಗಬೇಕು. ಅವರ ಆಡಳಿತದಲ್ಲಿ ನಿರ್ಮಾಣಗೊಂಡ ಬೌದ್ಧ ವಿಹಾರ, ಬೌದ್ಧ ಸ್ತೂಪಗಳನ್ನು ತಮ್ಮ ಕ್ಷೇತ್ರಗಳಲ್ಲಿ ನಿರ್ಮಿಸಬೇಕು ಎಂದರು.

ಕಾರ್ಮಿಕ ದಿನಾಚರಣೆ ಮಾಡಿ ಕಾರ್ಮಿಕರನ್ನು ಗೌರವಿಸಲಾಯಿತು. ಶಾಲಾ ಶಿಕ್ಷಣ ಇಲಾಖೆಯ ರಾಜೇಶ್, ಗೋವಿಂದ ಸ್ವಾಮಿ, ರೇಣುಕಾಸ್ವಾಮಿ, ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಪ್ಪಾಜಿ, ಪೈಲ್ವಾನ್ ಮುತ್ತುರಾಜು, ಡಿ.ಕೆ.ಭರತ್ ಕುಮಾರ್, ಲಕ್ಷ್ಮಣ್ ಕಲ್ಲಬಾಳು, ಟಿ.ಹೊಸಳ್ಳಿ ವೆಂಕಟೇಶ್, ದಮ್ಮ ದೀವಿಗೆ ಚಾರಿಟಬಲ್ ಟ್ರಸ್ಟ್ ಪದಾಧಿಕಾರಿ ಶಿವಮಾದು, ಬಸವರಾಜು, ಲಿಂಗರಾಜು ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-14-1371948969

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.