ಕನಕಪುರ: ‘ಪೇಪರ್ ರಹಿತ ಆಸ್ತಿ ನೊಂದಣಿ ಮಾಡುವುದರಿಂದ ಸಾರ್ವಜನಿಕವಾಗಿ ತೊಂದರೆ ಆಗುತ್ತದೆ. ಈ ಕೂಡಲೇ ಪೇಪರ್ ರಹಿತ ಡಿಜಿಟಲ್ ನೋಂದಣಿಯನ್ನು ಕೈಬಿಡಬೇಕು’ ಎಂದು ವೃತ್ತಿಪರ ದಸ್ತಾವೇಜು ಬರಹಗಾರರ ಅಸೋಸಿಯೇಷನ್ ಅಧ್ಯಕ್ಷ ಮುರಳೀಧರ್ ಒತ್ತಾಯಿಸಿದರು.

ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಆಸ್ತಿಗಳ ನೊಂದಣಿ ಮಾಡುವ ಕ್ರಯ ಪತ್ರಗಳೊಂದಿಗೆ ಜನತೆಗೆ ಪೂರ್ವ ಕಾಲದಿಂದಲೂ ಭಾವನಾತ್ಮಕ ಸಂಬಂಧವಿದೆ. ಮುಂದಿನ ತಲೆಮಾರಿನವರಿಗೆ ಕ್ರಯ ಪತ್ರಗಳನ್ನು ಕೊಡುಗೆಯಾಗಿ ಕೊಡುತ್ತಾರೆ. ಕಷ್ಟದ ಸಮಯದಲ್ಲಿ ಅಡಮಾನವಿಟ್ಟು ಸಾಲ ಸೌಲಭ್ಯ ಪಡೆಯುತ್ತಾರೆ. ಪೇಪರ್ ರಹಿತ ಕ್ರಯ ಮಾಡುವುದರಿಂದ ಇಂತಹ ವ್ಯವಹಾರಗಳಿಗೆ ಅವಕಾಶ ಇರುವುದಿಲ್ಲ’ ಎಂದು ದೂರಿದರು.

‘ಗ್ರಾಮೀಣ ಭಾಗದ ಜನತೆ ಅನಕ್ಷರಸ್ಥರು ಮತ್ತು ಡಿಜಿಟಲ್ ವ್ಯವಸ್ಥೆಯ ಬಗ್ಗೆ ಅರಿವು ಇರುವುದಿಲ್ಲ. ಡಿಜಿಟಲ್ ವ್ಯವಸ್ಥೆ ಜಾರಿಗೆ ತರುವುದರಿಂದ ತಾವು ಕ್ರಯ ಮಾಡಿಕೊಳ್ಳುವ ಬಗ್ಗೆ ಅವರಿಗೆ ಅರಿವಿಲ್ಲದಾಗುತ್ತದೆ. ಒಟಿಪಿ ಪಡೆಯುವುದು ಕಷ್ಟವಾಗುತ್ತದೆ’ ಎಂದರು.

‘ಕ್ರಯ ಮಾಡಿಕೊಳ್ಳುವ ಸಂದರ್ಭದಲ್ಲಿ ಮಾರಾಟಗಾರರು ಮತ್ತು ಖರೀದಿದಾರರ ನಡುವೆ ವ್ಯತ್ಯಾಸವಾಗಿ ನೊಂದಣಿ ರದ್ದಾದರೆ, ನೊಂದಣಿ ಶುಲ್ಕ ವಾಪಸ್ ಆಗುವುದಿಲ್ಲ. ಮತ್ತೆ ಸಮಸ್ಯೆ ಪರಿಹರಿಸಿಕೊಂಡು ಮುಂದೆ ವ್ಯವಹರಿಸಲು ಕಷ್ಟವಾಗುತ್ತದೆ. ಇದರಿಂದ ನೋಂದಣಿ ಗೊಂದಲವಾಗುತ್ತದೆ’ ಎಂದರು.

‘ಆಸ್ತಿಗಳ ವಿಲ್ ಮಾಡುವ ಸಂದರ್ಭದಲ್ಲಿ ತಮ್ಮ ವಿಲ್ಲನ್ನು ಗೌಪ್ಯವಾಗಿಟ್ಟು ಮರಣ ನಂತರ ವಿಲ್ ಪಡೆದವರಿಗೆ ಅದರ ಹಕ್ಕು ಜಾರಿ ಆಗಬೇಕು. ಆದರೆ ಪೇಪರ್ ರಹಿತ ನೋಂದಣಿಯಿಂದ ವಿಲ್ ಪ್ರಕ್ರಿಯೆಗೆ ತೊಂದರೆ ಆಗುತ್ತದೆ. ಇದರಲ್ಲಿ ಗೌಪ್ಯತೆ ಇರುವುದಿಲ್ಲ, ದಾಖಲಾತಿಗೂ ಅವಕಾಶ ಇರುವುದಿಲ್ಲ’ ಎಂದು ಹೇಳಿದರು.

‘ನೊಂದಣಿ ಪ್ರಕ್ರಿಯೆ ದಾಖಲಾತಿ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಮೂರು ಬಾರಿ ಒಟಿಪಿ ಕೊಡಬೇಕಿರುವುದರಿಂದ ಸಾರ್ವಜನಿಕವಾಗಿ ತೊಂದರೆ ಆಗುತ್ತದೆ. ಒಟಿಪಿ ಪಡೆದು ವಂಚಿಸುವ ಪ್ರಕರಣ ಹೆಚ್ಚಾಗುತ್ತಿವೆ’ ಎಂದು ಹೇಳಿದರು.

‘ಪತ್ರ ಬರಹಗಾರರು ಸರ್ಕಾರದಿಂದ ಪರವಾನಗಿ ಪಡೆದು ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ ಹೊಸ ವ್ಯವಸ್ಥೆಯಲ್ಲಿ ಪತ್ರ ಬರಹಗಾರರ ಅವಶ್ಯಕತೆಯೇ ಇಲ್ಲದಂತೆ ಮಾಡಿರುವುದರಿಂದ ಪತ್ರ ಬರಹಗಾರರಿಗೂ ತೊಂದರೆ ಆಗುತ್ತದೆ. ಅದನ್ನೇ ನಂಬಿರುವ ಸಾವಿರಾರು ಪತ್ರ ಬರಹಗಾರರು ನಿರುದ್ಯೋಗಿಗಳಾಗುತ್ತಾರೆ’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಸಂಚಾಲಕ ಮಂಜುನಾಥ್, ತಾಲ್ಲೂಕು ಘಟಕದ ಗೌರವ ಅಧ್ಯಕ್ಷ ಮಹದೇವ ಪ್ರಸಾದ್, ಕಾರ್ಯದರ್ಶಿ ಕೆ.ಎನ್.ಕಾಂತರಾಜು, ಖಜಾಂಚಿ ಪ್ರೇಮಚಂದ್ರಗುರು, ನಿರ್ದೇಶಕ ಮೋಹನ್ ಕುಮಾರ್, ಕೆ.ಪಿ.ವೆಂಕಟೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-14-728252661

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.