ಕನಕಪುರ: ‘ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಪ್ರತಿ ವರ್ಷ ₹56 ಸಾವಿರ ಕೋಟಿ ಖರ್ಚು ಮಾಡುತ್ತಿದೆ. ಬಡವರಿಗಾಗಿ ಜಾರಿಗೆ ತಂದಿರುವ ಈ ಯೋಜನೆಗಳು ಅನರ್ಹರಿಗೂ ತಲುಪಿತ್ತಿವೆ. ಅಂತಹವರಿಗೆ ಹೋಗುತ್ತಿರುವ ಹಣವನ್ನು ಕಡಿತಗೊಳಿಸಿ ಸರ್ಕಾರದ ಹೊರೆ ಕಡಿಮೆ ಮಾಡಬೇಕಿದೆ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಾರದ ಹಿಂದೆ ಅರ್ಧಕ್ಕೆ ಮೊಟಕುಗೊಂಡಿದ್ದ ಕೆಡಿಸಿ ಸಭೆಯನ್ನು ಸೋಮವಾರ ಮತ್ತೆ ಮುಂದುವರಿಸಿ, ಕ್ಷೇತ್ರದ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ‘ಹಾಗಾಗಿ, ಒಂದು ಕುಟುಂಬಕ್ಕೆ ಗ್ಯಾರಂಟಿ ಯೋಜನೆಗಳಿಂದ ಸಿಗುತ್ತಿರುವ ಹಣದ ಮಾಹಿತಿಯನ್ನು ಸಂಗ್ರಹಿಸಿ ಜನರ ಮುಂದಿಡಬೇಕಿದೆ’ ಎಂದರು.

‘ಶಕ್ತಿ ಯೋಜನೆಯಡಿ ನಿತ್ಯ ಎಷ್ಟು ಮಹಿಳೆಯರು ಪ್ರಯಾಣಿಸುತ್ತಾರೆ? ಗೃಹಲಕ್ಷ್ಮಿ ಹಣ ತಾಲ್ಲೂಕಿನ ಎಷ್ಟು ಮಹಿಳೆಯರಿಗೆ ಬರುತ್ತಿದೆ? ಎಷ್ಟು ಮಂದಿ ನಿರುದ್ಯೋಗಿ ಪದವೀಧರರು ಯುವನಿಧಿ ಪಡೆಯುತ್ತಿದ್ದಾರೆ? ಗೃಹ ಜ್ಯೋತಿಯಡಿ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಎಷ್ಟು ಹಣ ಸಂದಾಯವಾಗುತ್ತಿದೆ?’ ಎಂದು ಅಧಿಕಾರಿಗಳನ್ನು ಕೇಳಿ ಮಾಹಿತಿ ಪಡೆದರು.

‘ಎಲ್ಲಾ ಜಿಲ್ಲೆಗಳಲ್ಲಿ ಪಂಚ ಗ್ಯಾರಂಟಿಗಳ ಸಮಾವೇಶ ಮಾಡಲಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ಸಮಾವೇಶ ಮಾಡಬೇಕಿದ್ದು, ಫಲಾನುಭವಿಗಳ ಮಾಹಿತಿ ಕಲೆ ಹಾಕಬೇಕು. ಅಲ್ಲದೆ ಸರ್ಕಾರದಿಂದ ವಿವಿಧ ಯೋಜನೆಯಡಿ ಸವಲತ್ತು ಪಡೆಯುತ್ತಿರುವ ಫಲಾನುಭವಿಗಳ ಪಟ್ಟಿಯನ್ನು ಸಿದ್ಧಪಡಿಸಿ ಫೋಟೋ ದಾಖಲೆ ಸಮೇತ ಮಾಹಿತಿಯನ್ನು ಕಲೆ ಹಾಕಬೇಕು’ ಎಂದು ಸೂಚನೆ ನೀಡಿದರು.

ಫಲಿತಾಂಶಕ್ಕೆ ಮೆಚ್ಚುಗೆ: ‘ಈ ವರ್ಷದ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಾಲೂಕು ಮತ್ತು ಜಿಲ್ಲೆಗೆ ಎಷ್ಟು ಫಲಿತಾಂಶ ಬಂದಿದೆ?’ ಎಂದು ಡಿಸಿಎಂ ಕೇಳಿದ ಪ್ರಶ್ನೆಗೆ ಡಿಡಿಪಿಐ ಸ್ವಾಮಿ ಅವರು, ‘ಜಿಲ್ಲೆಗೆ ಶೇಕಡ 93ರಷ್ಟು ಫಲಿತಾಂಶ ಬಂದಿದೆ. ಕಳೆದ ವರ್ಷಕ್ಕಿಂತ ಫಲಿತಾಂಶದಲ್ಲಿ ಸುಧಾರಿಸಿದೆ’ ಎಂದರು. ಅದಕ್ಕೆ ಶಿವಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದರು.

ಸಿಎಸ್ಆರ್ ಹಣದಲ್ಲಿ ನಿರ್ಮಾಣವಾಗುತ್ತಿರುವ ಪಂಚಾಯಿತಿಗೊಂದು ಶಾಲಾ ಕಟ್ಟಡದ ಪ್ರಗತಿ ಬಗ್ಗೆ ವಿಚಾರಿಸಿದರು. ಟೊಯೋಟಾ ಕಂಪನಿಯಿಂದ ನಿರ್ಮಾಣವಾಗುತ್ತಿರುವ ಕಟ್ಟಡಗಳು ಪೂರ್ಣಗೊಂಡಿವೆ. ಪ್ರೆಸ್ಟೀಜ್ ಗ್ರೂಪ್ ನಿರ್ಮಾಣ ಮಾಡುತ್ತಿರುವ ಹೊಸದುರ್ಗ ಶಾಲಾ ಕಟ್ಟಡವು ನಿಧಾನವಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದಾಗ, ‘ಅವರನ್ನು ಭೇಟಿ ಮಾಡಿ ತ್ವರಿತವಾಗಿ ನಿರ್ಮಾಣ ಮಾಡುವಂತೆ ಹೇಳಬೇಕು’ ಎಂದು ಗೆ ಸೂಚನೆ ನೀಡಿದರು.

ಕೆಲವು ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸದೆ ಅವುಗಳನ್ನು ಪ್ರತ್ಯೇಕವಾಗಿ ನಡೆಸುವುದಾಗಿ ತಿಳಿಸಿದ ಡಿಸಿಎಂ ಅವರು ಸಭೆಯಲ್ಲಿ ಕೆ ಡಿ ಪಿ ಸದಸ್ಯರಿಗೆ ಸಮಸ್ಯೆಗಳ ಬಗ್ಗೆ ಮಾತನಾಡಲು ಅವಕಾಶ ಕಲ್ಪಿಸಿದ್ದರು.

9-11 ಇ–ಖಾತೆ ವಿಳಂಬ: ಕೆಡಿಪಿ ಸದಸ್ಯ ನಾಜೀರ್ ಮಾತನಾಡಿ, ‘ಗ್ರಾಮ ಪಂಚಾಯಿತಿಗಳಲ್ಲಿ ನಿವೇಶನ ಮತ್ತು ಮನೆಗಳಿಗೆ ಸಂಬಂಧಿಸಿದಂತೆ 10 ತಿಂಗಳಿಂದ 9-11 ಇ-ಖಾತೆಯನ್ನು ನೀಡುತ್ತಿಲ್ಲ. ಇದರಿಂದ ತುಂಬಾ ಸಮಸ್ಯೆಯಾಗುತ್ತಿದೆ. ಹಳೆ ಸ್ವತ್ತುಗಳಿಗೆ ಕ್ರಯಪತ್ರ ನೀಡುವಂತೆ ಕೇಳುತ್ತಿದ್ದಾರೆ. ಹಳೆ ಸ್ವತ್ತುಗಳಿಗೆ ಯಾವುದೇ ಕ್ರಯಪತ್ರಗಳಿರುವುದಿಲ್ಲ. ಈ ಸಮಸ್ಯೆ ಪರಿಹರಿಸಬೇಕು’ ಎಂದು ಮನವಿ ಮಾಡಿದರು.

ಅದಕ್ಕೆ ಡಿಸಿಎಂ, ಈ ಸಮಸ್ಯೆ ಬಗೆಹರಿಸುವುದು ಹೇಗೆ? ಇದು ಕೇವಲ ಒಂದು ತಾಲ್ಲೂಕಿನ ಸಮಸ್ಯೆಯಲ್ಲ. ಇಡೀ ರಾಜ್ಯದ ಸಮಸ್ಯೆಯಾಗಿದೆ. ಅದಕ್ಕೆ ಸೂಕ್ತ ಪರಿಹಾರ ದೊರಕಿಸಬೇಕು’ ಎಂದು ವೇದಿಕೆಯಲ್ಲಿದ್ದ ಜಿಲ್ಲಾಧಿಕಾರಿ ಯಶವಂತ್ ವಿ. ಗುರುಕರ್ ಮತ್ತು ಜಿ.ಪಂ. ಸಿಇಒ ಅನ್ಮೋಲ್ ಜೈನ್ ಅವರನ್ನು ಕೇಳಿದರು.

ಆಗ ಡಿಡಿಎಲ್ಆರ್ ಹನುಮೇಗೌಡ, ‘ಗ್ರಾಮ ಠಾಣದೊಳಗಿನ ಸ್ವತ್ತುಗಳಿಗೆ ಯಾವುದೇ ಕ್ರಯಪತ್ರಗಳಿರುವುದಿಲ್ಲ. ಅವು ವಂಶ ಪಾರಂಪರ್ಯವಾಗಿ ಅನುಭವಿಸಿಕೊಂಡು ಬರುವಂತಹ ಸ್ವತ್ತುಗಳಾಗಿವೆ. ಅವುಗಳ ಖಾತೆ ಮಾಡುವಾಗ ಕ್ರಯಪತ್ರ ಬೇಕಿಲ್ಲ’ ಎಂದರು. ಅದಕ್ಕೆ ಡಿಸಿಎಂ, ‘ಪಂಚಾಯತ್ ರಾಜ್ ಇಲಾಖೆಯಲ್ಲಿ ಅದರ ಬಗ್ಗೆ ಚರ್ಚೆ ನಡೆಸಿ, ಹಳೆ ಸ್ವತ್ತುಗಳ ಖಾತೆ ಮಾಡುವಾಗ ಕ್ರಯಪತ್ರ ಇಲ್ಲದೆ ಉಳಿದ ದಾಖಲಾತಿಗಳನ್ನು ಪಡೆದು ಖಾತೆ ಮಾಡುವಂತೆ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಲಾಗುವುದು’ ಎಂದು ಭರವಸೆ ನೀಡಿದರು.

‘ಕಂದಾಯ ಜಮೀನಿನಲ್ಲಿ ಬರುವಂತಹ ಎ ಖರಾಬ್ ಜಾಗವನ್ನು ಪಹಣಿದಾರರಿಗೆ ಪರಿವರ್ತನೆ ಮಾಡಿಕೊಡಲು ಜಿಲ್ಲಾ ಕಮಿಟಿಯಲ್ಲಿ ಅವಕಾಶ ಮಾಡಿಕೊಡಬೇಕು. ಇಲ್ಲವಾದಲ್ಲಿ ಇದರಿಂದ ಲಕ್ಷಾಂತರ ರೈತರಿಗೆ ತೊಂದರೆಯಾಗುತ್ತಿದೆ’ ಎಂದು ಡಿಡಿಎಲ್ಆರ್ ಗಮನಕ್ಕೆ ತಂದರು. ಅದಕ್ಕೆ ಡಿಸಿಎಂ, ‘ರಾಜ್ಯದಲ್ಲಿ ಎಷ್ಟು ರೈತರಿದ್ದಾರೆ? ಎಷ್ಟು ಜಮೀನಿದೆ? ಎಷ್ಟು ಖರಾಬು ಜಮೀನು ಅದರಲ್ಲಿ ಸೇರಿದೆ ಎಂಬುದರ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದು ಸಚಿವ ಸಂಪುಟದಲ್ಲಿ ಇದರ ಬಗ್ಗೆ ಚರ್ಚೆ ನಡೆಸುವೆ’ ಎಂದು ತಿಳಿಸಿದರು.

ಕೆರೆಗಳ ಹರಾಜು: ಕೆರೆಗಳಲ್ಲಿ ಮೀನು ಸಾಕಾಣಿಕೆ ಮಾಡಲು ಸರ್ಕಾರದಿಂದ ಹರಾಜು ಮಾಡಲಾಗಿದೆ ಎಂದು ಪ್ರಶ್ನೆ ಮಾಡಿದ ಡಿಸಿಎಂ ಅವರು, ‘ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಅದಕ್ಕೆ ಸಿಕ್ಕಾಪಟ್ಟೆ ವಿದ್ಯುತ್ ಬಿಲ್ ಬರುತ್ತಿದ್ದು, ಅದನ್ನು ಸರಿದೂಗಿಸಲು ಮೀನುಗಳ ಸಾಕಾಣಿಕೆ ಮಾಡಲು ಕೆರೆಗಳ ಹರಾಜು ಮಾಡಬೇಕಿದೆ. ಅದನ್ನು ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು’ ಎಂದು ಡಿ.ಸಿ.ಗೆ ಸೂಚನೆ ನೀಡಿದರು.

ಕನಕಪುರ ತಾಲ್ಲೂಕಿನಲ್ಲಿ 80 ವರ್ಷಗಳಷ್ಟು ಹಳೆಯದಾದ ಪಿಎಲ್ಡಿ ಬ್ಯಾಂಕ್ ಇದ್ದು, ₹8 ಕೋಟಿಯಷ್ಟು ಕೇಂದ್ರ ಬ್ಯಾಂಕಿನಿಂದ ಬಾಕಿ ಉಳಿದುಕೊಂಡಿದೆ. ಪ್ರತಿ ವರ್ಷ ಬರುವಂತಹ ಲಾಭಾಂಶವನ್ನು ₹8 ಕೋಟಿಯ ಬಡ್ಡಿಗೆ ಜಮಾ ಮಾಡಿಕೊಳ್ಳುತ್ತಿರುವುದು ಬ್ಯಾಂಕಿನ ಆರ್ಥಿಕ ಸಂಕಷ್ಟಕ್ಕೆ ಕಾರಣವಾಗಿದೆ. ಬಾಕಿ ಹಣವನ್ನು ಮನ್ನಾ ಮಾಡಿಕೊಡುವಂತೆ ಬ್ಯಾಂಕ್ ಅಧ್ಯಕ್ಷ ಹರೀಶ್ ಮನವಿ ಮಾಡಿದರು. ಅದಕ್ಕೆ ಡಿಸಿಎಂ, ಅದನ್ನು ಯಾವ ರೀತಿ ಮಾಡಬಹುದು ಎಂಬುದಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿ.ಪಂ. ಸಿಇಒ ಅನ್ಮೋಲ್ ಜೈನ್, ಗ್ಯಾರಂಟಿ ಸಮಿತಿ ಜಿಲ್ಲಾಧ್ಯಕ್ಷ ಕೆ. ರಾಜು, ಜಿಲ್ಲಾ ಮತ್ತು ತಾಲೂಕು ಕೆಡಿಪಿ ಸದಸ್ಯರು ಹಾಗೂ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷರು, ಸದಸ್ಯರು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

ಏಪ್ರಿಲ್ 28ರಂದು ನಡೆದಿದ್ದ ಕೆಡಿಪಿ ಸಭೆಯನ್ನು ತುರ್ತು ಕಾರಣದಿಂದ ಡಿಸಿಎಂ ಅರ್ಧಕ್ಕೆ ಮೊಟಕುಗೊಳಿಸಿ ಮುಂದೂಡಿದ್ದರು. ಮೊಟಕುಗೊಂಡಿದ್ದ ಸಭೆ ಸೋಮವಾರ ನಡೆಯಿತು. ಚುನಾವಣಾ ಫಲಿತಾಂಶದ ಹಿನ್ನೆಲೆಯಲ್ಲಿ ಸಭೆ 2 ಗಂಟೆ ಬದಲು 4 ಗಂಟೆಗೆ ಪ್ರಾರಂಭವಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-14-293937335

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.