ಕನಕಪುರ: ನಮ್ಮ ತಾಲ್ಲೂಕಿನವರು ಸಿ.ಎಂ ಆಗಬೇಕೆಂಬ ಕನಸು ಇತ್ತು. ಇವತ್ ಶಿವಕುಮಾರ್ ಮುಖ್ಯಮಂತ್ರಿಯಾಗುವ ಮೂಲಕ ಆ ಕನಸು ಈಡೇರಿದೆ. ಇನ್ಮುಂದೆ ಒಳ್ಳೆಯ ರಾಜ್ಯಭಾರ ಮಾಡಿಕೊಂಡು ಹೋಗಲಿ... ತಾಲ್ಲೂಕಿಗೆ ಕೀರ್ತಿ ತರಲಿ...

–ಇದು ಡಿ.ಕೆ.ಶಿವಕುಮಾರ್ ಅವರು ರಾಜ್ಯದ 25ನೇ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದನ್ನು ಎಲ್ಇಡಿ ಪರದೆಯಲ್ಲಿ ನೋಡುತ್ತಿದ್ದ ತಾಲ್ಲೂಕಿನ ಜನರ ಬಾಯಲ್ಲಿ ಬಂದ ಆನಂದದ ಮಾತುಗಳಿವು.

ಡಿ.ಕೆ.ಶಿವಕುಮಾರ್ ಪ್ರಮಾಣ ವಚನ ಸ್ವೀಕರಿಸುವುದನ್ನು ಬುಧವಾರ ತಾಲ್ಲೂಕಿನ ವಿವಿಧೆಡೆ ಎಲ್ಇಡಿ ದೊಡ್ಡ ಪರದೆಯಲ್ಲಿ ನೇರ ಪ್ರಸಾರ ವ್ಯವಸ್ಥೆ ಮಾಡಲಾಗಿತ್ತು. ತಾಲ್ಲೂಕು ಹೆಮ್ಮೆಪಡುವ ಕ್ಷಣವನ್ನು ತಾಲ್ಲೂಕಿನ ಜನತೆ ಕಣ್ತುಂಬಿಕೊಂಡರು. ತಮ್ಮ ನೆಚ್ಚಿನ ನಾಯಕ ಮುಖ್ಯಮಂತ್ರಿಯಾಗುವುದನ್ನು ಕನಕಪುರದಲ್ಲೇ ವೀಕ್ಷಿಸಿ ಆನಂದಿಸಿದರು.

ನಗರದ ಚನ್ನಬಸಪ್ಪ ವೃತ್ತ, ಸಾತನೂರು, ದೊಡ್ಡಾಲಹಳ್ಳಿ, ಕೋಡಿಹಳ್ಳಿ ಜನದಟ್ಟಣೆ ಪ್ರದೇಶಗಳಲ್ಲಿ ಎಲ್.ಇಡಿ ಪರದೆ ಅಳವಡಿಸಲಾಗಿತ್ತು. ನೂರಾರು ಸಂಖ್ಯೆಯಲ್ಲಿ ಜನರು ಜಮಾವಣಿಗೊಂಡು ನೇರ ಪ್ರಸಾರ ವೀಕ್ಷಿಸಿದರು.

ಸಂಭ್ರಮಾಚರಣೆ: ಶಿವಕುಮಾರ್ ಅವರು ನಾಲ್ಕು ಗಂಟೆ 15 ನಿಮಿಷಕ್ಕೆ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ನಗರದ ಬಸವೇಶ್ವರನಗರ ಮತ್ತು ಎಂಜಿ ರಸ್ತೆಯಲ್ಲಿ ಅಭಿಮಾನಿಗಳು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಶಿವಕುಮಾರ್ ಅಭಿಮಾನಿಗಳು ನಗರದ ಎಂಜಿ ರಸ್ತೆಯಲ್ಲಿ ಸಾರ್ವಜನಿಕವಾಗಿ ನಾಗರಿಕರು ಮತ್ತು ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಸಿಹಿ ವಿತರಣೆ ಮಾಡಿದರು.

ನಗರದ ಕೆಎನ್ಎಸ್ ವೃತ್ತದಲ್ಲಿ ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮೊದಲಾದವರ ಭಾವಚಿತ್ರ ಇರುವ ಬೃಹತ್ ಗಾತ್ರದ ಚೆಂಡು ಆಕಾಶದಲ್ಲಿ ಹಾರಾಡಿತು.

ಬೆಂಗಳೂರಲ್ಲಿ ಶಿವಕುಮಾರ್ ಅವರನ್ನು ಭೇಟಿಯಾಗಿ ಶುಭ ಕೋರಲು ತಾಲ್ಲೂಕಿನಿಂದ ಸುಮಾರು 70 ಬಸ್ಗಳಲ್ಲಿ ಜನರು ತೆರಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-14-1231911077

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.