ಕನಕಪುರ: ಸೂಕ್ಷ್ಮ ನೀರಾವರಿ ಯೋಜನೆ ಅಡಿ ಹನಿ ನೀರಾವರಿ ಕಾಮಗಾರಿ ಮಾಡದೆ ಹಣ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ರೈತರ ದೂರಿನ ಹಿನ್ನೆಲೆಯಲ್ಲಿ ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜು ಮತ್ತು ಅಧಿಕಾರಿಗಳ ತಂಡ ಬುಧವಾರ ಚೌಕಸಂದ್ರ ಗ್ರಾಮದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ಕಸಬಾ ಹೋಬಳಿ ಚೌಕಸಂದ್ರ ಗ್ರಾಮದ ಶುಕ್ರು ನಾಯ್ಕ್ 12 ಎಕರೆ ಜಮೀನಿನಲ್ಲಿ ಹನಿ ನೀರಾವರಿ ಪೈಪು ಅಳವಡಿಸದೆ ಇಲಾಖೆಯಲ್ಲಿ ಹಣ ಪಡೆದು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ಶುಕ್ರು ನಾಯ್ಕ ಅವರ ಮಕ್ಕಳಾದ ಗೋವಿಂದ ನಾಯ್ಕ್ ಮತ್ತು ವೆಂಕಟಸ್ವಾಮಿ ನಾಯ್ಕ್ ಈಚೆಗೆ ಲೋಕಾಯುಕ್ತ ಮತ್ತು ತೋಟಗಾರಿಕೆ ಜಂಟಿ ನಿರ್ದೇಶಕರಿಗೆ ದೂರು ನೀಡಿದ್ದರು.

ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ನಾಗರಾಜು ಮತ್ತು ಅಧಿಕಾರಿಗಳ ತಂಡ ಬುಧವಾರ ಕನಕಪುರ ತೋಟಗಾರಿಕೆ ಇಲಾಖೆ ಕಚೇರಿಗೆ ಭೇಟಿ ನೀಡಿ ಶುಕ್ರು ನಾಯ್ಕ್ ಜಮೀನಿನ ಕಡತ ಪರಿಶೀಲಿಸಿದರು.

ನಂತರ ಕನಕಪುರ ಹಿರಿಯ ತೋಟಗಾರಿಕೆ ಸಹಾಯಕ ನಿರ್ದೇಶಕ ಶ್ರೀನಿವಾಸ್, ತೋಟಗಾರಿಕೆ ಸಹಾಯಕ ಅಧಿಕಾರಿಗಳಾದ ಮೈತ್ರಿ ಮತ್ತು ಶಿವಣ್ಣ ನಾಯ್ಕ್ ಜೊತೆಯಲ್ಲಿ ಚೌಕಸಂದ್ರದ ಶುಕ್ರು ನಾಯ್ಕ್ ಜಮೀನಿಗೆ ಭೇಟಿ ನೀಡಿದರು. ದೂರುದಾರರಾದ ವೆಂಕಟಸ್ವಾಮಿ ನಾಯ್ಕ್ ಮತ್ತು ಗೋವಿಂದ ನಾಯ್ಕ್ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಸ್ಥಳ ಪರಿಶೀಲನೆ ನಡೆಸಿದರು.

ರಾಗಿ ಜಮೀನಿನಲ್ಲಿ ಹೊಸದಾಗಿ ಹನಿ ನೀರಾವರಿ ಪೈಪ್ ಅಳವಡಿಸಲಾಗಿತ್ತು. ಜಮೀನಿಗೆ ಯಾವುದೇ ನೀರಿನ ವ್ಯವಸ್ಥೆ ಇಲ್ಲದಿರುವುದು ಕಂಡುಬಂದಿತು. ಜಂಟಿ ನಿರ್ದೇಶಕರು ದೂರುದಾರರಿಂದ ಹಾಗೂ ಸ್ಥಳೀಯರಿಂದ ಮಾಹಿತಿ ಪಡೆದುಕೊಂಡರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-15-1347273453

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.