ಕನಕಪುರ: ಆನ್ಲೈನ್ ಔಷಧ ಮಾರಾಟ ಮತ್ತು ಅಸಹಜ ರಿಯಾಯಿತಿಯನ್ನು ಸರ್ಕಾರ ತಕ್ಷಣ ತಡೆಗಟ್ಟಬೇಕು ಎಂದು ಔಷಧ ಮಾರಾಟ ವ್ಯಾಪಾರಿಗಳು ಮತ್ತು ವಿತರಕರು ಒತ್ತಾಯಿಸಿದ್ದಾರೆ.

ನಗರದ ಎಂ.ಜಿ ರಸ್ತೆಯಲ್ಲಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಔಷಧ ವ್ಯಾಪಾರಿಗಳ ಮತ್ತು ವಿತರಕರ ಸಂಘ, ಕನಕಪುರ, ಹಾರೋಹಳ್ಳಿ ತಾಲ್ಲೂಕು ಔಷಧ ವ್ಯಾಪಾರಿಗಳ ಸಂಘದ ಕಚೇರಿಯಲ್ಲಿ ಸೋಮವಾರ ಸುದ್ದಿಗೋಷ್ಠಿ ನಡೆಸಿದರು.

ಮೆಡಿಕಲ್ ಸ್ಟೋರ್ ವ್ಯಾಪಾರ ಪಾರಂಪರಿಕವಾಗಿ ಬಂದಿದೆ. ಕೇವಲ ಔಷಧಿ ಮಾರಾಟವಲ್ಲದೆ ಭಾವನಾತ್ಮಕ ಸಂಬಂಧವನ್ನೂ ಹೊಂದಿದೆ. ಕೋವಿಡ್ನಂತಹ ಕಠಿಣ ಸಂದರ್ಭದಲ್ಲೂ ನಿರ್ಭಯವಾಗಿ ಮೆಡಿಕಲ್ ಸ್ಟೋರ್ಗಳನ್ನು ತೆರೆದು ಸಾಮಾಜಿಕ ಹಿತದೃಷ್ಟಿಯಿಂದ ವ್ಯಾಪಾರ ಮಾಡಲಾಗಿದೆ. ಆದರೆ, ಆನ್ಲೈನ್ ಔಷಧ ಮಾರಾಟ ಮತ್ತು ಅಸಹಜ ರಿಯಾಯಿತಿ ಈ ವೃತ್ತಿಗೆ ಮಾರಕವಾಗುತ್ತಿವೆ ಎಂದು ವ್ಯಾಪಾರಿಗಳು ಆಕ್ರೋಶ ವ್ಯಕ್ತಪಡಿಸಿದರು.

ಸಂಘದ ಜಿಲ್ಲಾಧ್ಯಕ್ಷ ಜಿ.ಪಿ.ವೀರೇಶ್ ಮತ್ತು ತಾಲ್ಲೂಕು ಅಧ್ಯಕ್ಷ ಮೊಹಮ್ಮದ್ ಏಜಾಜ್ ಮಾತನಾಡಿ, ಕೆಲವು ನಿರ್ಬಂಧಿತ ಔಷಧ ವೈದ್ಯರ ಸಲಹೆ ಮೇರೆಗೆ ಮಾತ್ರ ನೀಡಬೇಕು. ಸುರಕ್ಷತೆಯಿಂದ ಕಾಪಾಡಬೇಕು. ಆದರೆ, ಆನ್ಲೈನ್ ಎಲ್ಲವೂ ಮುಕ್ತವಾಗಿ ಲಭ್ಯವಾಗುತ್ತಿದೆ. ಇದರಿಂದ ಅನಾಹುತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಿದರು.

ಜಿಲ್ಲಾ ಸಂಘದ ಖಜಾಂಚಿ ಕೆ.ಎಸ್.ಮಹೇಶ್, ಸೌಗಂಧ ಗಣೇಶ್, ಹನುಮಂತೇಗೌಡ, ರಾಜಕುಮಾರ್, ಯಶವಂತ್, ಸೈಯದ್ ತೌಸೀಫ್, ಚಂದ್ರು, ದೀಪು, ಲೋಕೇಶ್, ಸುನಿಲ್ ರಾವ್ ಸೇರಿದಂತೆ ಸದಸ್ಯರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260520-14-2110115400

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.