ಕನಕಪುರ: ತಾಲ್ಲೂಕಿನ ಕೋಡಿಹಳ್ಳಿ ಹೋಬಳಿ ಮುಗ್ಗೂರು ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡಾನೆಗಳು ದಾಳಿ ನಡೆಸಿ ಗೊನೆ ಬಿಟ್ಟಿದ್ದ ಬಾಳೆ ಗಿಡ ಹಾಗೂ ಕೃಷಿ ಪಂಪ್ ಸೆಟ್ನ ಪೈಪ್ಗಳನ್ನು ನಾಶಗೊಳಿಸಿವೆ.

ಮುಗ್ಗೂರು ಗ್ರಾಮದಲ್ಲಿ ಸುಮಾರು 20 ರೈತರು ಬಾಳೆ ಬೇಸಾಯ ಮಾಡಿದ್ದಾರೆ. ಒಂದು ತಿಂಗಳಿಂದ ಆನೆಗಳು ಹಿಂಡು ಗ್ರಾಮಕ್ಕೆ ನುಗ್ಗಿ ಬಾಳೆಗಿಡಗಳನ್ನು ನಾಶಗೊಳಿಸುತ್ತಿವೆ. ಶುಕ್ರವಾರ ರಾತ್ರಿ ಆನೆಗಳು ಬಾಳೆ ತೋಟಕ್ಕೆ ನುಗ್ಗಿ ದಾಂದಲೆ ಮಾಡಿವೆ.

ಕಾಡಾನೆಗಳು ಅರಣ್ಯದಿಂದ ಆಚೆ ಬರದಂತೆ ಸೋಲಾರ್ ತಂತಿ ಬೇಲಿ, ಆನೆ ಕಂದಕ ಮತ್ತು ರೈಲ್ವೆ ಕಂಬಿ ಅಳವಡಿಸಲಾಗಿದೆ. ಗ್ರಾಮಕ್ಕೆ ವಾಹನ ಮತ್ತು ಜನ ಓಡಾಡಲು ಗೇಟ್ ಅಳವಡಿಸಲಾಗಿದೆ. ರಾತ್ರಿ ಈ ಗೇಟ್ ಮೂಲಕವೇ ಆನೆಗಳು ಗ್ರಾಮಕ್ಕೆ ನುಗ್ಗುತ್ತಿವೆ ಎಂದು ರೈತರು ಆರೋಪಿಸಿದ್ದಾರೆ.

ಅರಣ್ಯ ಸಿಬ್ಬಂದಿ ಶನಿವಾರ ಬೆಳಿಗ್ಗೆ ಬಾಳೆ ನಾಶವಾಗಿರುವ ತೋಟಗಳಿಗೆ ಭೇಟಿ ನೀಡಿದರು. ಗ್ರಾಮಸ್ಥರು, ‘ಹಿರಿಯ ಅಧಿಕಾರಿಗಳು ಬರಬೇಕು. ನೀವು ಜಿಪಿಎಸ್ ಮಾಡಬೇಡಿ’ ಎಂದು ತಡೆದರು.

ರೈತರ ವಿರೋಧದಿಂದ ಎಚ್ಚೆತ್ತ ಅರಣ್ಯ ಇಲಾಖೆ ಆರ್ಎಫ್ಒ, ಡಿಆರ್ಎಫ್ಒ ಗ್ರಾಮಕ್ಕೆ ಭೇಟಿ ನೀಡಿ ರೈತರನ್ನು ಸಮಾಧಾನಪಡಿಸಿ ಆನೆಗಳು ಬರದಂತೆ ತಡೆಗಟ್ಟಲು ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-14-1734531832

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.