ಕನಕಪುರ: ತಾಲ್ಲೂಕಿನ ಉಯಂಬಳ್ಳಿ ಹೋಬಳಿ ಅರಕೊಪ್ಪ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕಾಡಾನೆಗಳ ಹಿಂಡೊಂದು ದಾಳಿ ನಡೆಸಿ ಹೊಸದಾಗಿ ಬೆಳೆಸಿದ್ದ ತೆಂಗಿನ ಗಿಡಗಳನ್ನು ನಾಶಪಡಿಸಿವೆ. ಗ್ರಾಮದ ರೈತ ಸಿದ್ದರಾಮೇಗೌಡ ಎಂಬವರಿಗೆ ಸೇರಿದ ಸರ್ವೆ ನಂಬರ್ 89ರಲ್ಲಿ 30 ಗುಂಟೆ ಜಮೀನಿನಲ್ಲಿ ಹೊಸದಾಗಿ ನೆಡಲಾದ ತೆಂಗಿನ ಸಸಿ ಮತ್ತು ಈಗಾಗಲೇ ಫಸಲು ಕೊಡಲು ಆರಂಭಿಸಿದ್ದ ಕೆಲವು ಗಿಡಗಳು ದಾಳಿಗೆ ತುತ್ತಾಗಿವೆ.

ಕಾಡಾನೆಗಳು ತೆಂಗಿನ ಗಿಡಗಳ ಸುಳಿಗಳನ್ನು ಕಿತ್ತು ತಿಂದು ನಾಶಪಡಿಸಿವೆ. ಜತೆಗೆ ಕೆಲವು ಗಿಡಗಳನ್ನು ಬುಡಸಮೇತ ಉರುಳಿಸಿವೆ. ಈ ದಾಳಿಯಿಂದ ರೈತನಿಗೆ ಅಪಾರ ನಷ್ಟ ಸಂಭವಿಸಿದೆ.

ಈಚೆಗೆ ಅರಕೊಪ್ಪ ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಕಾಡಾನೆಗಳ ಉಪಟಳ ಹೆಚ್ಚಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಕಾಡಾನೆಗಳನ್ನು ಅರಣ್ಯದ ಕಡೆಗೆ ಹಿಮ್ಮೆಟ್ಟಿಸುವಂತೆ ಮತ್ತು ಸರ್ಕಾರದಿಂದ ಸೂಕ್ತ ಪರಿಹಾರ ಒದಗಿಸುವಂತೆ ಅರಕೊಪ್ಪ ಗ್ರಾಮದ ರೈತರು ಅರಣ್ಯ ಇಲಾಖೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260419-14-1599138316

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.