ಕನಕಪುರ: ತಾಲ್ಲೂಕಿನ ಗೊಟ್ಟಿಗೆಹಳ್ಳಿ ಪರಂಜ್ಯೋತಿ ಮಠದಲ್ಲಿ 20ವರ್ಷಗಳಿಂದ ಪ್ರತಿಷ್ಠಾಪನೆಗೊಳ್ಳದೆ ಬಯಲಿನಲ್ಲೇ ಇದ್ದ ಗಾಯತ್ರಿ ದೇವಿ ವಿಗ್ರಹ ಗುರುವಾರ ಪ್ರತಿಷ್ಠಾಪನೆಗೊಂಡು ಶುಕ್ರವಾರ ದೇವಾಲಯ ಉದ್ಘಾಟನೆ ಕಾರ್ಯಕ್ರಮ ನೆರವೇರಿತು.

ಪರಂ ಜ್ಯೋತಿ ಮಠವನ್ನು ಪರಮೇಶ್ವರಾನಂದ ಸ್ವಾಮೀಜಿ ಸುಮಾರು 50 ವರ್ಷಗಳ ಹಿಂದೆ ಸಣ್ಣ ಗುಡಿಸಿಲಿನಲ್ಲಿ ಪ್ರಾರಂಭ ಮಾಡಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದಾರೆ.

ಪರಂ ಜ್ಯೋತಿ ಮಠವು ಪರಮ ಜ್ಯೋತಿ ಲಿಂಗೇಶ್ವರ ದೇವಸ್ಥಾನ ಮತ್ತು ಗಾಯತ್ರಿ ದೇವಿಯ ದೇವಸ್ಥಾನದೊಂದಿಗೆ ಪುಣ್ಯಕ್ಷೇತ್ರ ಹಾಗೂ ಧಾರ್ಮಿಕ ಕೇಂದ್ರವಾಗಿ ರೂಪುಗೊಂಡಿದೆ. ಪರಮೇಶ್ವರಾನಂದ ಸ್ವಾಮೀಜಿ ಇದಕ್ಕೆ ಶ್ರಮಿಸಿದ್ದಾರೆ.

ಚಂದ್ರು, ಪ್ರಭಾಕರ್, ಗೋವಿಂದರಾಜು, ಗೊಟ್ಟಿಗೆಹಳ್ಳಿ ಹಾಗೂ ಸುತ್ತಮುತ್ತಲ ಗ್ರಾಮದ ಗ್ರಾಮಸ್ಥರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260502-14-1783120977

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.