ಕನಕಪುರ: ತಾಲ್ಲೂಕು ಕಚೇರಿ ತಹಶೀಲ್ದಾರ್ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿ ವತಿಯಿಂದ ಡಾ.ಬಾಬು ಜಗಜೀವನ್ ರಾಂ ಜಯಂತಿ ಭಾನುವಾರ ಆಚರಿಸಲಾಯಿತು.

ಶಿಕ್ಷಕ ಪರಮೇಶ್ ವಿಶೇಷ ಉಪನ್ಯಾಸಕರಾಗಿ ಬಾಬು ಜಗಜೀವನ್ ರಾಂ ಕುರಿತು ಮಾತನಾಡಿದರು. ಅಸ್ಪೃಶ್ಯ ಆಚರಣೆ ವಿರುದ್ಧ ಹೋರಾಡಿದ ಅವರಿಗೆ ಅಸ್ಪೃಶ್ಯತೆ ಕಾರಣದಿಂದಲೇ ಮೂರು ಬಾರಿ ಪ್ರಧಾನಿಯಾಗುವ ಅವಕಾಶ ತಪ್ಪಿತು ಎಂದರು.

ವಕೀಲ ರಾಮಚಂದ್ರಪ್ಪ ಮಾತನಾಡಿ, ಸಮಾಜದಲ್ಲಿನ ಅಸ್ಪೃಶ್ಯತೆ ನಿರ್ಮೂಲನೆಗಾಗಿ ಹೋರಾಟ ಮಾಡಿದ್ದಾರೆ. ಅವರ ಆಶಯದಂತೆ ಕೆಟ್ಟ ಅನಿಷ್ಟ ಆಚರಣೆ ನಿವಾರಣೆಯಾಗಬೇಕು ಮತ್ತು ಸಮಾಜದಲ್ಲಿ ಸಮಾನತೆ ನೆಲೆಸಬೇಕು ಎಂದರು. ಮುಖಂಡ ನೀಲಿ ರಮೇಶ್ ಮಾತನಾಡಿ, 35ವರ್ಷಗಳಿಂದ ಒಳ ಮೀಸಲಾತಿಗಾಗಿ ಹೋರಾಟ ನಡೆಸುತ್ತಿದ್ದೇವೆ. ಮೀಸಲಾತಿಯಡಿ ಸೌಲಭ್ಯ ಪಡೆಯುತ್ತಿರುವ ನಮ್ಮಲ್ಲಿನ ಕೆಲವರು ಅಸ್ಪೃಶ್ಯ ಮನುವಾದಿಗಳಂತೆ ನಮ್ಮ ವಿರುದ್ಧವೇ ಹೋರಾಡುತ್ತಿದ್ದಾರೆ ಮತ್ತು ಇತಿಹಾಸವನ್ನೇ ತಿರುಚುವ ಕೆಲಸ ಮಾಡುತ್ತಿದ್ದಾರೆ ಎಂದರು.

ತಾಲ್ಲೂಕು ಪಂಚಾಯಿತಿ ಸಹಾಯಕ ನಿರ್ದೇಶಕ ಮೋಹನ್ ಬಾಬು ಮಾತನಾಡಿ, ಬಾಬೂಜಿ ಒಂದು ಜಾತಿಗೆ ಸೀಮಿತರಾದವರಲ್ಲ ಎಂದರು.

ಕಾರ್ಯಕ್ರಮದಲ್ಲಿ ಸಮಾಜ ಕಲ್ಯಾಣ ಇಲಾಖೆ ಜಯಪ್ರಕಾಶ್, ಆರ್.ಎಫ್ ರವಿ, ಕೃಷಿ ಇಲಾಖೆ ರಾಧಾಕೃಷ್ಣ, ದೈಹಿಕ ಶಿಕ್ಷಣ ಪರೀಕ್ಷಕ ಸತೀಶ್, ಸಾಹಿತಿ ಕೂ.ಗಿ ಗಿರಿಯಪ್ಪ, ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷ ಹರೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಧು, 'ಜೈ ಕರ್ನಾಟಕ ಜನಪರ ವೇದಿಕೆ'ಯ ಕುಮಾರಸ್ವಾಮಿ, ಕೆ.ಡಿ.ಪಿ ಸದಸ್ಯ ಗುರುಮೂರ್ತಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಎಸ್ಎಸ್ಎಲ್ಸಿ ಮತ್ತು ಪಿಯು ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260406-14-1814645689

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.