ಕೋಡಿಹಳ್ಳಿ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಕಸದ ರಾಶಿಯಿಂದ ತಿಪ್ಪೆಗುಂಡಿಯಂತಾಗಿತ್ತು. ಕಸ ಹಾಕುವುದನ್ನು ತಡೆಗಟ್ಟಲು ನೀಡಿದ ಎಚ್ಚರಿಕೆಯನ್ನು ಕಡೆಗಣಿಸಿದ್ದ ವ್ಯಕ್ತಿಗಳಿಗೆ ದಂಡ ಹಾಕಿ ಕಾನೂನಿನ ಶಿಕ್ಷೆಯ ಎಚ್ಚರಿಕೆ ನೀಡಿದ್ದೇವೆ.ಎಲ್ಲ ಗ್ರಾಮಗಳಲ್ಲೂ ಸ್ವಚ್ಛತೆ ಆರಂಭವಾಗಲಿದೆ. ಸಾರ್ವಜನಿಕರು ನಮ್ಮ ಈ ಪ್ರಯತ್ನಕ್ಕೆ ಕೈಜೋಡಿಸಬೇಕು.
ಶ್ರೀಧರ್, ಪಿಡಿಓ, ಕೋಡಿಹಳ್ಳಿ ಗ್ರಾಮ ಪಂಚಾಯತಿ.
ಪಂಚಾಯಿತಿ ಸಿಬ್ಬಂದಿಗಳು ಕಸ ಹಾಕುತ್ತಿದ್ದ ಜಾಗವನ್ನು ಸ್ವಚ್ಛಗೊಳಿಸಿ ಅಲ್ಲಿ ಗಿಡ ನೆಟ್ಟು ನೀರು ಹಾಕುತ್ತಿರುವುದು