ಗುರುವಾರ , ಡಿಸೆಂಬರ್ 5, 2019
21 °C

ಕನಕಪುರ ನಗರಸಭೆ ಚುನಾವಣೆ: ಕಾಂಗ್ರೆಸ್ ಜಯಭೇರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಮನಗರ: ಕನಕಪುರ ನಗರಸಭೆ ಮತ ಎಣಿಕೆ  ಮುಕ್ತಾಯಗೊಂಡಿದ್ದು, ಕಾಂಗ್ರೆಸ್ ಜಯಭೇರಿ ಬಾರಿಸಿದೆ. ಇದೇ ಮೊದಲ ಬಾರಿಗೆ ಬಿಜೆಪಿ ಖಾತೆ ತೆರೆದಿದೆ. ಕೇವಲ 1 ಗಂಟೆ ಅವಧಿಯಲ್ಲಿಯೇ ಮತ ಎಣಿಕೆ ಮುಕ್ತಾಯಗೊಂಡಿತು. 19 ವಾರ್ಡ್‌ಗಳಲ್ಲಿ ಕಾಂಗ್ರೆಸ್, 4 ವಾರ್ಡ್‌ಗಳಲ್ಲಿ ಜೆಡಿಎಸ್, 1 ವಾರ್ಡ್ನಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಚುನಾವಣೆಗೂ ಮುನ್ನವೇ 7 ವಾರ್ಡ್‌ಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದರು.

ಮಾಗಡಿ ಪುರಸಭೆ ಚುನಾವಣೆಯಲ್ಲಿ ಜೆಡಿಎಸ್ ಗೆ ಮುನ್ನಡೆ, ಖಾತೆ ತೆರೆದ ಬಿಜೆಪಿ
ರಾಮನಗರ: ಮಾಗಡಿ ಪುರಸಭೆಯ 15 ವಾರ್ಡುಗಳ ಮತ ಎಣಿಕೆ ಮುಕ್ತಾಯಗೊಂಡಿದೆ‌. 8 ವಾರ್ಡುಗಳಲ್ಲಿ ಜೆಡಿಎಸ್ ಹಾಗೂ 6ರಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ದಾಖಲಿಸಿದ್ದಾರೆ. 9ನೇ ವಾರ್ಡಿನಲ್ಲಿ ಬಿಜೆಪಿ ಅಭ್ಯರ್ಥಿ ಗೆಲ್ಲುವ ಮೂಲಕ ಖಾತೆ ತೆರೆದಿದೆ. ಇನ್ನೂ 8 ವಾರ್ಡುಗಳ ಎಣಿಕೆ ಕಾರ್ಯ ಪ್ರಗತಿಯಲ್ಲಿ ಇದೆ.

ಇದನ್ನೂ ಓದಿ: ದಾವಣಗೆರೆ ಪಾಲಿಕೆ ಚುನಾವಣೆ: ‘ಕೈ’ ‘ಕಮಲ’ ಬಂಡಾಯ ಜೆಡಿಎಸ್‌ಗೆ ಲಾಭ

ಇದನ್ನೂ ಓದಿ: 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು