ಕನಕಪುರ: ರಾಗಿ ಖರೀದಿ ಕೇಂದ್ರದಲ್ಲಿ ನಡೆದಿರುವ ಅಕ್ರಮ ಕುರಿತು ದೂರು ಹಿನ್ನೆಲೆಯಲ್ಲಿ ಲೋಕಾಯುಕ್ತ ಅಧಿಕಾರಿಗಳು ಗುರುವಾರ ಎಪಿಎಂಸಿ ಮಾರುಕಟ್ಟೆ ಖರೀದಿ ಕೇಂದ್ರದ ಮೇಲೆ ದಾಳಿ ನಡೆಸಿದರು.

ಲೋಕಾಯುಕ್ತ ಎಸ್ಪಿ ಸ್ನೇಹ, ಪೊಲೀಸ್ ಇನ್ಪೆಕ್ಟರ್ ಸಂದೀಪ್ ಕುಮಾರ್ ನೇತೃತ್ವದ ತಂಡ ದಾಖಲೆ ಪರಿಶೀಲನೆ ನಡೆಸಿತು. ಈ ವೇಳೆ ರೈತರು ತೂಕದಲ್ಲಿ ಕಳೆಯುವುದು, ರಸೀದಿಗೆ ಲಂಚ ಪಡೆಯುವುದು, ನ್ಯಾಯಬೆಲೆ ಅಂಗಡಿ ರಾಗಿ ಮಾರಾಟಕ್ಕೆ ಪ್ರಯತ್ನಿಸಿದರೂ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಸೇರಿದಂತೆ ಹಲವು ಆರೋಪಗಳನ್ನು ಮಾಡಿದರು.

ಅಧಿಕಾರಿಗಳು ಆಹಾರ ಇಲಾಖೆ ಶಿರಸ್ತೇದಾರ್ ಜಯಸಿಂಹ ಹಾಗೂ ಕೆಎಸ್ಎಫ್ಸಿ ಡಿ.ಎಂ ರೂಪ ಅವರನ್ನು ತರಾಟೆಗೆ ತೆಗೆದುಕೊಂಡರು. ಮೂರು ದಿನಗಳಿಂದ ವೇ ಬ್ರಿಡ್ಜ್ ಕೆಟ್ಟು ಕಾಯುತ್ತಿದ್ದ 40ಕ್ಕೂ ಹೆಚ್ಚು ರೈತರ ರಾಗಿ ಖರೀದಿಗೆ ತ್ವರಿತ ಕ್ರಮ ಕೈಗೊಂಡರು. ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಳ್ಳಲಾಯಿತು.

ಲೋಕಾಯುಕ್ತ ಪೊಲೀಸರಾದ ರಘು, ಸೌಮ್ಯ, ಕೃಷ್ಣಮೂರ್ತಿ, ಶಿವಕುಮಾರ್, ರೋಹಿತ್ ಪಾಲ್ಗೊಂಡಿದ್ದರು.

ಪ್ರಭಾರ ಗ್ರೇಡ್-2 ತಹಶೀಲ್ದಾರ್ ವಸಂತ ಕುಮಾರಿ, ಸಹಾಯಕ ಕೃಷಿ ನಿರ್ದೇಶಕ ರಾಧಾಕೃಷ್ಣ, ಬೆಸ್ಕಾಂ ಎಇ ಶಿವರಾಜು, ದೂರುದಾರ ಕುಮಾರಸ್ವಾಮಿ ಹಾಗೂ ರೈತರು ಉಪಸ್ಥಿತರಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260327-14-483238892

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.