ಕನಕಪುರ: ನಗರದಲ್ಲಿ ಗುರುವಾರ ರೇಷ್ಮೆ ಗೂಡಿನ ವ್ಯಾಪಾರಿಯೊಬ್ಬರು ಬ್ಯಾಂಕ್ನಿಂದ ಹಣ ಡ್ರಾ ಮಾಡಿ ಸ್ಕೂಟರಿನಲ್ಲಿ ಇಟ್ಟಿದ್ದ ₹3.50 ಲಕ್ಷ ಹಣವನ್ನು ಕಳ್ಳತನ ಮಾಡಲಾಗಿದೆ.

ಹಾರೋಹಳ್ಳಿ ತಾಲ್ಲೂಕು ಮರಳವಾಡಿ ಹೋಬಳಿ ತೋಕಸಂದ್ರ ಗ್ರಾಮದ ರೇಷ್ಮೆ ಗೂಡಿನ ವ್ಯಾಪಾರಿ ಸೈಯದ್ ಮುಸ್ತಾಕ್, ಗುರುವಾರ ಕೋಡಿಹಳ್ಳಿ ರಸ್ತೆಯ ಟಿಎಂಬಿ ಬ್ಯಾಂಕಿನಲ್ಲಿ 4 ಲಕ್ಷ ಡ್ರಾ ಮಾಡಿದ್ದರು. ಅದರಲ್ಲಿ ₹50 ಸಾವಿರ ತಮ್ಮಲ್ಲಿ ಇಟ್ಟುಕೊಂಡು ಉಳಿದ ₹3.50 ಲಕ್ಷ ಹಣವನ್ನು ಸ್ಕೂಟರ್ ಡಿಕ್ಕಿಯಲ್ಲಿ ಇಟ್ಟಿದ್ದರು.

ನಂತರ ಕುರುಬರ ದೊಡ್ಡಿಯಲ್ಲಿ ರೈತರನ್ನು ಭೇಟಿಯಾಗಲು ಹೋಗಿ ಅಲ್ಲಿಂದ ನಗರದ ಎಂಎಚ್ಎಸ್ ಗ್ರೌಂಡ್ಗೆ ಬಂದು ವಿಶ್ರಾಂತಿ ಮಾಡಿದ್ದಾರೆ.ಅಲ್ಲಿಂದ ವಾಣಿ ಟಾಕೀಸ್ ರಸ್ತೆಯ ಸಲೂನ್ಗೆ ಹೋಗಿ ಕ್ಷೌರ ಮಾಡಿಸಿಕೊಂಡು ಸ್ವಗ್ರಾಮ ತೋಕಸಂದ್ರಕ್ಕೆ ಹೊರಟಿದ್ದಾರೆ.

ರೈಸ್ ಮಿಲ್ ಬಳಿ ಮನೆಗೆ ಹಾಲಿನ ಪ್ಯಾಕೆಟ್ ಖರೀದಿಸಿ ಡಿಕ್ಕಿಗೆ ಹಾಕಲು ಹೋದಾಗ ಅದರಲ್ಲಿ ತಾವು ಇಟ್ಟಿದ್ದ ಹಣ ಇಲ್ಲದಿರುವುದನ್ನು ನೋಡಿ ಗಾಬರಿಯಾಗಿ ತಾವು ಓಡಾಡಿದ ಜಾಗವನ್ನೆಲ್ಲಾ ಹುಡುಕಾಡಿದ್ದಾರೆ. ಎಲ್ಲೂ ಹಣ ಸಿಗದಿದ್ದಾಗ ಶುಕ್ರವಾರ ಬೆಳಗ್ಗೆ ಪುರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.ಸೈಯದ್ ಮುಸ್ತಾಕ್ ಓಡಾಡಿದ ಜಾಗದ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಅದೇ ದಿನ ನಡೆದ ಮತ್ತೊಂದು ಪ್ರಕರಣದಲ್ಲಿ ಕರ್ನಾಟಕ ಬ್ಯಾಂಕ್ನಿಂದ ಡ್ರಾ ಮಾಡಿ ಸ್ಕೂಟರ್ ಡಿಕ್ಕಿಯಲ್ಲಿಟ್ಟಿದ್ದ ಒಂದು ಲಕ್ಷವನ್ನು ಕದಿಯಲಾಗಿದೆ. ಈ ಪ್ರಕರಣ ಕೂಡ ಟಿಎಂಬಿ ಬ್ಯಾಂಕ್ ಪಕ್ಕದಲ್ಲಿಯೇ ನಡೆದಿದೆ. ಬ್ಯಾಂಕಿನಲ್ಲಿ ಹಣ ಡ್ರಾ ಮಾಡುವವರನ್ನು ಗುರಿಯಾಗಿಸಿಕೊಂಡು ಕಳ್ಳರ ತಂಡ ಈ ಕೃತ್ಯ ಎಸಗುತ್ತಿದೆ ಎಂದು ಶಂಕಿಸಲಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260509-14-798149785

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.