ಕನಕಪುರ: ಸತ್ತ ವ್ಯಕ್ತಿಯ ಬದಲಿಗೆ ಬೇರೊಬ್ಬ ವ್ಯಕ್ತಿಯನ್ನು ಕೂರಿಸಿ ಅಕ್ರಮವಾಗಿ ಆಸ್ತಿ ಪರಭಾರೆ ಮಾಡಿರುವ ಆರೋಪದ ಮೇಲೆ ನಾಲ್ವರ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಕನಕಪುರ ತಾಲ್ಲೂಕಿನ ಸಂಜೀವನಾಯಕನ ದೊಡ್ಡಿ ರಾಮಕ್ಕ ಎಂಬುವರಿಗೆ ಸೇರಿದ ಜಮೀನನ್ನು ನಾಗಮ್ಮ ಎಂಬುವರು ತಾವೇ ರಾಮಕ್ಕ ಎಂದು ನಕಲಿ ದಾಖಲೆ ಸೃಷ್ಟಿಸಿ ಪರಭಾರೆ ಮಾಡಿದ್ದಾರೆ. ಆಸ್ತಿ ಮಾಲೀಕರಾದ ರಾಮಕ್ಕ 2004 ಮೇ 19ರಂದು ಮೃತಪಟ್ಟಿದ್ದಾರೆ. ಇವರ ಹೆಸರಿನಲ್ಲಿದ್ದ ಆಸ್ತಿಯನ್ನು ನಾಗಮ್ಮ ಎಂಬುವರು ತಾನೆ ರಾಮಕ್ಕ ಎಂದು 2007 ಅಕ್ಟೋಬರ್ 12 ರಂದು ಕನಕಪುರ ಉಪನೊಂದಣಾಧಿಕಾರಿ ಕಚೇರಿಯಲ್ಲಿ ಒಂದು ಎಕರೆ ಜಮೀನನ್ನು ಸಂಜೀವಯ್ಯ ಅವರಿಗೆ ಕ್ರಯ ಮಾಡಿಕೊಟ್ಟಿದ್ದಾರೆ. ಜೊತೆಗೆ 12 ಗುಂಟೆ ಜಮೀನನ್ನು ನಾಗಮ್ಮ ತನ್ನ ಮೊಮ್ಮಗ ವಿನಯ್ಕುಮಾರ್ಗೆ 2023 ಡಿಸೆಂಬರ್ 14ರಂದು ದಾನಪತ್ರ ಮಾಡಿಕೊಟ್ಟು ವಂಚನೆ ಮಾಡಿದ್ದಾರೆ ಎಂದು ರಾಮಕ್ಕನ ಮೊಮ್ಮಗಳು ಮಂಗಳ ಕನಕಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಮಂಗಳ ಅವರು ನೀಡಿರುವ ದೂರಿನ ಮೇರೆಗೆ ನಾಗಮ್ಮ, ಅಕ್ಕಯಮ್ಮ, ವೆಂಕಟಸ್ವಾಮಿ, ವಿನಯ್ಕುಮಾರ್ ವಿರುದ್ಧ ಪೊಲೀಸರು ಎಫ್ಐಆರ್ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.