ಮುಂಚೆ ಅಕಾಡೆಮಿಗೆ ಒಂದೂವರೆ ಕೋಟಿ ಅನುದಾನ ಕೊಡುತ್ತಿದ್ದರು. ಅದಕ್ಕೆ ಕೆಲವರು ಈ ಸಾಹಿತಿಗಳು ನಮ್ಮಿಂದ ಅನುದಾನ ಪಡೆದು ನಮಗೇ ಬೈದುಕೊಂಡು ತಿರುಗುತ್ತಾರೆ ಎಂದು ಅನುದಾನವನ್ನು ₹80 ಲಕ್ಷಕ್ಕೆ ಇಳಿಸಿದರು. ಸಿದ್ದರಾಮಯ್ಯ ಕಾಲದಲ್ಲೂ ಅದು ಬದಲಾಗಿಲ್ಲ.
ಎಲ್.ಎನ್. ಮುಕುಂದರಾಜ್ ಅಧ್ಯಕ್ಷ ಕರ್ನಾಟಕ ಸಾಹಿತ್ಯ ಅಕಾಡೆಮಿ
ಉದಾರೀಕರಣ ಜಾಗತೀಕರಣ ಹಾಗೂ ಖಾಸಗೀಕರಣವು ದೇಶದ ಕೃಷಿ ಮತ್ತು ಕೃಷಿಕರ ಬದುಕಿನ ಚಿತ್ರಣವನ್ನೇ ಬದಲಿಸಿವೆ. ಅಭಿವೃದ್ಧಿ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಪ್ರಭುತ್ವವೇ ಕಸಿದುಕೊಂಡು ರೈತರನ್ನು ಬೀದಿಗೆ ತಳ್ಳುತ್ತಿದೆ.
ಅನಸೂಯಮ್ಮ ರೈತ ಹೋರಾಟಗಾರ್ತಿ
ಕೃಷಿಯಲ್ಲಿ ಖುಷಿಪಡಬೇಕು. ದೇಶ ಕಟ್ಟುವ ಪ್ರಕ್ರಿಯೆಯ ಮುಖ್ಯ ಭಾಗವಾಗಿ ಕೃಷಿಯನ್ನು ನೋಡಬೇಕು. ಈ ಕ್ಷೇತ್ರ ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಸವಾಲುಗಳನ್ನು ಬಗೆಹರಿಸಿ ರೈತರನ್ನು ಸ್ವಾಬಲಂಬಿಗಳನ್ನಾಗಿ ಮಾಡಬೇಕು.