ರಾಮನಗರ: ಜಿಲ್ಲೆಯಲ್ಲೀಗ ಸಾಂಸ್ಕೃತಿಕ ರಾಜಕಾರಣದ ಶಕೆ ಶುರುವಾಗಿದೆ. ವಿಧಾನಸಭಾ ಕ್ಷೇತ್ರವಾರು ಸ್ಥಳೀಯ ಅಸ್ಮಿತೆ ಎನಿಸಿಕೊಂಡಿರುವ ಹಾಗೂ ಸಾಂಸ್ಕೃತಿಕ–ಐತಿಹಾಸಿಕ ಬೆಸುಗೆ ಹೊಂದಿರುವ ವ್ಯಕ್ತಿ ಮತ್ತು ವಿಶೇಷಗಳತ್ತ ಚಿತ್ತ ಹರಿಸಿರುವ ಜಿಲ್ಲೆಯ ಶಾಸಕರು, ಇದೀಗ ಆ ಹೆಸರಿನಲ್ಲಿ ಉತ್ಸವ ಆಯೋಜಿಸುವ ಮೂಲಕ ಜನರನ್ನು ಸೆಳೆಯಲು ಮುಂದಾಗಿದ್ದಾರೆ.

ಜಿಲ್ಲೆಯಲ್ಲಿ ಇಂತಹ ಉತ್ಸವಕ್ಕೆ ಮೊದಲಿಗೆ ಮುನ್ನುಡಿ ಬರೆದಿದ್ದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಮಾಜಿ ಸಂಸದ ಡಿ.ಕೆ. ಸುರೇಶ್. ಹದಿನಾರು ವರ್ಷಗಳ ಹಿಂದೆ ಕನಕಪುರದಲ್ಲಿ ಡಿ.ಕೆ ಚಾರಿಟೇಬಲ್ ಟ್ರಸ್ಟ್ನಿಂದ ಸಹೋದರರು ಆರಂಭಿಸಿದ ಕನಕೋತ್ಸವವು ಸ್ಥಳೀಯ ಸಾಂಸ್ಕೃತಿಕ ಅಸ್ಮಿತೆಯವಾಗಿ ಬದಲಾಗಿದೆ.

ಜಿಲ್ಲೆಯ ನಾಲ್ಕೂ ಕ್ಷೇತ್ರಗಳ ಕಾಂಗ್ರೆಸ್ ಶಾಸಕರು ಸ್ಥಳೀಯವಾಗಿ ತಮ್ಮದೇ ಆದ ಸಾಂಸ್ಕೃತಿಕ ಅಸ್ತಿತ್ವ ಸ್ಥಾಪಿಸಲು ಶಾಸಕರು ಮುಂದಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಡಿ.ಕೆ ಸಹೋದರರ ಮಾರ್ಗದರ್ಶನದಲ್ಲಿ ರಾಮನಗರದಲ್ಲಿ ‘ರಾಮೋತ್ಸವ’, ಚನ್ನಪಟ್ಟಣದಲ್ಲಿ ‘ಬೊಂಬೆನಾಡ ಗಂಗೋತ್ಸವ’ ಹಾಗೂ ಮಾಗಡಿಯಲ್ಲಿ ‘ಕೆಂಪೇಗೌಡ ಉತ್ಸವ’ ಆಯೋಜಿಸಿದ್ದು, ಒಂದೆರಡು ತಿಂಗಳ ಅಂತರದಲ್ಲಿ ನಡೆಯಲಿವೆ.

ಸ್ಪರ್ಧೆ–ಸನ್ಮಾನ, ರಂಜನೆ: ಸಾಧಕರಿಗೆ ಪುರಸ್ಕಾರ, ಪ್ರತಿಭಾ ಪುರಸ್ಕಾರ, ಗ್ರಾಮದೇವತೆಗಳ ಉತ್ಸವ, ಜಾನಪದ ಸಾಂಸ್ಕೃತಿಕ ಸೌರಭ, ಕ್ರೀಡಾ ಸ್ಪರ್ಧೆ, ಯೋಗ, ನೌಕರರರ ಸಮಾವೇಶ, ರಸಮಂಜರಿ ಸೇರಿದಂತೆ ವಿದ್ಯಾರ್ಥಿಗಳಿಂದ ಸಾರ್ವಜನಿಕರನ್ನು ಒಳಗೊಂಡಂತೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಅದ್ಧೂರಿಯಾಗಿ ನಡೆಯುವ ಈ ಉತ್ಸವಗಳು ಜನರನ್ನು ಸೆಳೆಯುವುದರಲ್ಲಿ ಎರಡು ಮಾತಿಲ್ಲ.

ಕನಕಪುರದ ಕನಕೋತ್ಸವದ ಕಾರ್ಯಕ್ರಮಗಳ ಪಡಿಯಚ್ಚನ್ನೇ ಉಳಿದ ಮೂರು ಕ್ಷೇತ್ರಗಳಲ್ಲೂ ಮಾಡಲಾಗುತ್ತಿದೆ. ಅದಕ್ಕಾಗಿ ಶಾಸಕರಾದ ಎಚ್.ಎ. ಇಕ್ಬಾಲ್ ಹುಸೇನ್, ಸಿ.ಪಿ. ಯೋಗೇಶ್ವರ್ ಹಾಗೂ ಎಚ್.ಸಿ. ಬಾಲಕೃಷ್ಣ ಕ್ಷೇತ್ರದಾದ್ಯಂತ ಪಕ್ಷದ ಕಾರ್ಯಕರ್ತರು ಹಾಗೂ ಅಧಿಕಾರಿಗಳ ಜೊತೆ ಸಭೆ ನಡೆಸಿ ಭರ್ಜರಿ ಸಿದ್ಧತೆ ಆರಂಭಿಸಿದ್ದಾರೆ.

ಗ್ರಾಮ ಪಂಚಾಯಿತಿ, ಹೋಬಳಿ ಹಾಗೂ ತಾಲ್ಲೂಕು ಮಟ್ಟಗಳಲ್ಲಿ ಕ್ರಿಕೆಟ್, ಕಬಡ್ಡಿ ಸೇರಿದಂತೆ ವಿವಿಧ ಕ್ರೀಡೆಗಳಿಗೆ ಈಗಾಗಲೇ ಚಾಲನೆ ನೀಡಲಾಗಿದೆ. ಮಾಗಡಿ ಮತ್ತು ಚನ್ನಪಟ್ಟಣದಲ್ಲಿ ಕ್ರೀಡಾ ಸ್ಪರ್ಧೆಗಳ ಚಾಲನೆಯಲ್ಲಿ ಡಿ.ಕೆ. ಸುರೇಶ್ ಸಹ ಪಾಲ್ಗೊಂಡಿದ್ದಾರೆ. ಉತ್ಸವ ನಿಮಿತ್ತ ರಸಮಂಜರಿ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕಲಾವಿದರನ್ನು ಈಗಾಗಲೇ ಬುಕ್ ಮಾಡಲಾಗಿದೆ.

ಸಾಂಸ್ಕೃತಿಕ ಪ್ರಭಾವಿಸುವಿಕೆ: ಕ್ಷೇತ್ರ ಮಟ್ಟದಲ್ಲಿ ನಡೆಯುವ ಸಾಂಸ್ಕೃತಿಕ ಉತ್ಸವಗಳು ಸ್ಥಳೀಯ ಅಸ್ಮಿತೆಯ ರಾಜಕಾರಣಕ್ಕೂ ಎಡೆಮಾಡಿ ಕೊಡುತ್ತವೆ. ಜನರನ್ನು ಸಾಂಸ್ಕೃತಿಕ ನೆಲೆಗಟ್ಟಿನಲ್ಲಿ ರಾಜಕೀಯವಾಗಿ ಪ್ರಭಾವಿಸುವುದು ಇಂದಿನ ರಾಜಕಾರಣದ ಟ್ರೆಂಡ್. ಮತ ಗಳಿಕೆ ಅಸ್ತ್ರದ ಭಾಗವಾಗಿ ಒಬ್ಬೊಬ್ಬರು ಒಂದೊಂದು ರೀತಿ ಇಂತಹ ಉತ್ಸವ ಮಾಡಿಕೊಂಡು ಬರುತ್ತಿದ್ದಾರೆ ಎಂದು ಕಾಂಗ್ರೆಸ್ನ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

ಉತ್ಸವಕ್ಕೆ ಮುಂದಾಗಿರುವ ಶಾಸಕರು, ಮುಂದಿನ ಚುನಾವಣೆಯಲ್ಲಿ ಸೋತರೂ ಉತ್ಸವ ಮುಂದುವರಿಸುತ್ತಾರೆಯೇ? ಅವರ ಬಳಿಕ ಬೇರೆಯವರು ಅಥವಾ ಅನ್ಯ ಪಕ್ಷದವರು ಶಾಸಕರಾದರೂ ಉತ್ಸವ ಪ್ರತಿ ವರ್ಷ ಜರುಗುತ್ತದೆಯೇ? ಯಾಕೆಂದರೆ, ಒಂದು ಪಕ್ಷದ ಸರ್ಕಾರ ಜಾರಿಗೆ ತಂದ ಕಾರ್ಯಕ್ರಮವನ್ನು ಮತ್ತೊಂದು ಪಕ್ಷದ ಸರ್ಕಾರ ಮುಂದುವರಿಸಲು ಮೀನಮೇಷ ಎಣಿಸುವುದು ಸಾಮಾನ್ಯ. ಅಂತಹದ್ದರಲ್ಲಿ ಜಿಲ್ಲೆಯ ಕಾಂಗ್ರೆಸ್ ಶಾಸಕರ ನೇತೃತ್ವದಲ್ಲಿ ನಡೆಯಲಿರುವ ರಾಮೋತ್ಸವ, ಗಂಗೋತ್ಸವ ಹಾಗೂ ಕೆಂಪೇಗೌಡ ಉತ್ಸವದ ಭವಿಷ್ಯ ಮುಂದೆ ಏನಾಗಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಬೇಕಿದೆ ಎಂದು ಅವರು ಹೇಳಿದರು.

ಕನಕಪುರದ ಕನಕೋತ್ಸವ

ತಮ್ಮ ರಾಜಕೀಯ ಹಿಡಿತ ಮತ್ತು ವಿಸ್ತಾರ ಹೆಚ್ಚಿದ ಬೆನ್ನಲ್ಲೇ ಡಿ.ಕೆ ಸಹೋದರರು 2009ರಲ್ಲಿ ಕನಕಪುರದಲ್ಲಿ ಸ್ಥಳೀಯ ಸಾಂಸ್ಕೃತಿಕ ಅಸ್ಮಿತೆಯಾಗಿ ಕನಕೋತ್ಸವ ಶುರು ಮಾಡಿದರು. ಕ್ರೀಡಾ ಸ್ಪರ್ಧೆ ಸನ್ಮಾನ ಹಾಗೂ ರಂಜನೆಯ ಸಂಗಮವಾಗಿರುವ ಅದ್ದೂರಿ ಕನಕೋತ್ಸವ ಸದ್ಯ ತಾಲ್ಲೂಕಿನ ಅತಿದೊಡ್ಡ ಉತ್ಸವ. ಅದರ ಬಾಹುಗಳು ಜಿಲ್ಲೆಯಾದ್ಯಂತ ಚಾಚಿವೆ. ಹದಿನಾರು ವರ್ಷಗಳ ಹಿಂದೆ ಆರಂಭವಾದ ಉತ್ಸವವು ವಿವಿಧ ಕಾರಣಗಳಿಗಾಗಿ ಕೆಲ ವರ್ಷ ನಡೆದಿಲ್ಲ. ಡಿ.ಕೆ. ಸುರೇಶ್ ಲೋಕಸಭಾ ಚುನಾವಣೆಯಲ್ಲಿ ಪರಾಭವಗೊಂಡ 2024ನೇ ವರ್ಷದಲ್ಲೂ ಉತ್ಸವ ಜರುಗಲಿಲ್ಲ. ಒಟ್ಟಿನಲ್ಲಿ ಕನಕಪುರದಲ್ಲಿ ಶುರುವಾದ ಕನಕೋತ್ಸವ ರಾಮನಗರ ಚನ್ನಪಟ್ಟಣ ಹಾಗೂ ಮಾಗಡಿ ಕ್ಷೇತ್ರಗಳಲ್ಲೂ ಸ್ಥಳೀಯ ಸಾಂಸ್ಕೃತಿಕ ಅಸ್ಮಿತೆಗಳ ಹೆಸರಿನ ಉತ್ಸವಕ್ಕೆ ಕಾರಣವಾಗಿದೆ.

ರಾಮನಗರದ ರಾಮೋತ್ಸವ

ರಾಮ ವನವಾಸ ಕೈಗೊಂಡಿದ್ದ ಸ್ಥಳಗಳ ಪೈಕಿ ರಾಮನಗರದ ಹೊರವಲಯದಲ್ಲಿರುವ ಬೆಟ್ಟವೂ ಒಂದು. ಅದೇ ಕಾರಣಕ್ಕೆ ಆ ಬೆಟ್ಟವನ್ನು ರಾಮದೇವರ ಬೆಟ್ಟ ಎಂದು ಕರೆಯಲಾಗುತ್ತದೆ ಎಂಬ ನಂಬಿಕೆ ಹಿಂದಿನಿಂದಲೂ ಇದೆ. ಬೆಟ್ಟದದಲ್ಲಿ ಪಟ್ಟಾಭಿರಾಮ ದೇವಸ್ಥಾನವೂ ಇದೆ. ಇದೇ ಕಾರಣಕ್ಕೆ ಬ್ರಿಟಿಷರ ಕಾಲದಲ್ಲಿದ್ದ ಕ್ಲೋಸ್ಪೇಟೆ ಹೆಸರು ಮುಂದೆ ರಾಮನಗರವಾಯಿತು. ಹಿಂದಿನ ಬಿಜೆಪಿ ಸರ್ಕಾರ ರಾಮದೇವರ ಬೆಟ್ಟವನ್ನು ದಕ್ಷಿಣದ ಅಯೋಧ್ಯೆಯನ್ನಾಗಿ ಅಭಿವೃದ್ಧಿ ಮಾಡುವುದಾಗಿ ಘೋಷಿಸಿತ್ತು. ನಂತರದ ಚುನಾವಣೆಯಲ್ಲಿ ಕಾಂಗ್ರೆಸ್ನಿಂದ ಗೆದ್ದ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಆರಂಭದಿಂದಲೂ ‘ನಾನು ರಾಮಭಕ್ತ’ ಎನ್ನುತ್ತಲೇ ರಾಮೋತ್ಸವಕ್ಕೆ ಚಾಲನೆ ಕೊಟ್ಟಿದ್ದಾರೆ. ಈಗಾಗಲೇ ರಾಮನಗರ ಹೆಸರಿನೊಂದಿಗೆ ಪ್ರತಿ ವರ್ಷ ನಡೆಯುವ ಚಾಮುಂಡೇಶ್ವರಿ ಕರಗ ತಳುಕು ಹಾಕಿಕೊಂಡಿದೆ. ರಾಮೋತ್ಸವವೂ ಅದೇ ರೀತಿ ಆಗಲಿದೆಯೇ ಎಂದು ಕಾದು ನೋಡಬೇಕಿದೆ.

ಬೊಂಬೆನಾಡ ಗಂಗೋತ್ಸವ

ವೈವಿಧ್ಯಮಯ ಆಟಿಕೆಗಳ ತಯಾರಿಕೆಯ ಹಿರಿಮೆ ಹೊಂದಿರುವ ಚನ್ನಪಟ್ಟಣ ಆಟಿಕೆಗಳ ಪಟ್ಟಣ ಅಥವಾ ಟಾಯ್ಸ್ ಸಿಟಿ ಎಂದೇ ಜನಪ್ರಿಯ. ಕ್ರಿ.ಶ 350ರಿಂದ 900ರವರೆಗೆ ರಾಜ್ಯವನ್ನಾಳಿದ ಗಂಗರ 4 ರಾಜಧಾನಿಗಳ ಪೈಕಿ ಚನ್ನಪಟ್ಟಣ ತಾಲ್ಲೂಕಿನ ಮಂಕುಂದ ಅಥವಾ ಮಾಕುಂದ ಮೂರನೇ ರಾಜಧಾನಿ. ಅದೇ ಕಾರಣಕ್ಕೆ ಚನ್ನಪಟ್ಟಣದಲ್ಲಿ ‘ಬೊಂಬೆನಾಡ ಗಂಗೋತ್ಸವ’ದ ಹೆಸರಿನಲ್ಲಿ ಉತ್ಸವ ಆಯೋಜಿಸಲಾಗುತ್ತಿದೆ. ಚನ್ನಪಟ್ಟಣದ ಈ ಐತಿಹಾಸಿಕ ಹಿನ್ನೆಲೆ ಬೆಸುಗೆಯೊಂದಿಗೆ ಹಿಂದೆಯೇ ಗಂಗೋತ್ಸವ ಮಾಡಬೇಕು ಎಂಬ ಆಲೋಚನೆಯನ್ನು ನಮ್ಮ ಶಾಸಕ ಸಿ.ಪಿ. ಯೋಗೇಶ್ವರ್ ಹೊಂದಿದ್ದರು. ಆದರೆ ಕಾರಣಾಂತರಗಳಿಂದ ಅದು ಕೈಗೂಡಿರಲಿಲ್ಲ. ಉಪ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿರುವ ಅವರು ಡಿ.ಕೆ ಸಹೋದರರ ಸಾಥ್ನೊಂದಿಗೆ ಇದೀಗ ಗಂಗೋತ್ಸವ ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದರು.

ಮಾಗಡಿ ಕೆಂಪೇಗೌಡ ಉತ್ಸವ

ಬೆಂಗಳೂರು ನಿರ್ಮಾತೃ ಕೆಂಪೇಗೌಡರ ಊರು ಮಾಗಡಿ. ವಿಜಯನಗರದ ಸಾಮಂತರಾಗಿದ್ದ ಅವರು ತನ್ನ ಪರಾಕ್ರಮಗಳಿಂದಲೇ ಹೆಸರುವಾಸಿ. ಬೆಂಗಳೂರು ಕಟ್ಟಿದ ಕಾಲಕ್ಕೆ ಕೆಂಪೇಗೌಡರ ಆಳ್ವಿಕೆಯ ಭಾಗಗಳಿಗೆ ಮಾಗಡಿ ಪಟ್ಟಣವೇ ರಾಜಧಾನಿಯಾಗಿತ್ತು ಎನ್ನುತ್ತದೆ ಇತಿಹಾಸ. ಪೂರಕವಾಗಿ ಮಾಗಡಿಯಲ್ಲಿ ಅವರು ಕಟ್ಟಿದ ಕೋಟೆಯ ಕುರುಹು ಇಂದಿಗೂ ಇದೆ. ತಾಲ್ಲೂಕಿನ ಕೆಂಪಾಪುರದಲ್ಲಿ ಅವರ ಸಮಾಧಿ ಇದೆ. ಸರ್ಕಾರದಿಂದ ನಡೆಯುವ ಕೆಂಪೇಗೌಡ ಜಯಂತಿಯಂದು ಕೆಂಪಾಪುರದಿಂದ ಬೆಂಗಳೂರಿಗೆ ಕೆಂಪೇಗೌಡರ ಜ್ಯೋತಿ ಕೊಂಡೊಯ್ಯಲಾಗುತ್ತದೆ. ಕೆಂಪಾಪುರ ಅಭಿವೃದ್ಧಿಗೂ ಸರ್ಕಾರ ಒತ್ತು ನೀಡಿದೆ. ಈ ಎಲ್ಲಾ ಕಾರಣಗಳಿಂದಾಗಿ ತಮ್ಮ ಕ್ಷೇತ್ರವನ್ನು ಸಾಂಸ್ಕೃತಿಕವಾಗಿ ಬೆಸೆಯಲು ಕೆಂಪೇಗೌಡ ಉತ್ಸವವನ್ನು ಶಾಸಕ ಎಚ್.ಸಿ. ಬಾಲಕೃಷ್ಣ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.