ಚನ್ನಪಟ್ಟಣ: ಮಹಿಳೆಯೊಬ್ಬರು ಸರ್ಕಾರಿ ಬಸ್ನಲ್ಲಿ ಕಳೆದುಕೊಂಡಿದ್ದ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಇದ್ದ ಬ್ಯಾಗ್ ಅನ್ನು ವಾಪಸ್ ತಲುಪಿಸುವಲ್ಲಿ ಸರ್ಕಾರಿ ಬಸ್ ನಿರ್ವಾಹಕರೊಬ್ಬರು ನೆರವಾಗಿದ್ದಾರೆ.

ತಾಲ್ಲೂಕಿನ ಬಿ.ವಿ.ಪಾಳ್ಯ ಗ್ರಾಮದ ಲಕ್ಷ್ಮಿ ಎಂಬುವರು ಶುಕ್ರವಾರ ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಸರ್ಕಾರಿ ಬಸ್ನಲ್ಲಿ ಪ್ರಯಾಣ ಮಾಡಿದ್ದರು. ಚನ್ನಪಟ್ಟಣಕ್ಕೆ ಬಂದಾಗ ಬಸ್ ಇಳಿಯುವ ಗಡಿಬಿಡಿಯಲ್ಲಿ ತಮ್ಮ ಬಳಿ ಇದ್ದ ಬ್ಯಾಗ್ ಅನ್ನು ಮರೆತಿದ್ದರು. ಬಸ್ ಇಳಿದು ಗ್ರಾಮಕ್ಕೆ ಹೋಗಲು ಮತ್ತೊಂದು ಬಸ್ಗಾಗಿ ಚನ್ನಪಟ್ಟಣ ಸರ್ಕಾರಿ ಬಸ್ ನಿಲ್ದಾಣದಲ್ಲಿ ಕಾಯುತ್ತಿದ್ದಾಗ ಬ್ಯಾಗ್ ನೆನಪಾಗಿದೆ. ತಕ್ಷಣ ತಾವು ಬಂದ ಬಸ್ಗಾಗಿ ಹುಡುಕಾಡಿದ್ದಾರೆ. ಅಷ್ಟರಲ್ಲಿ ಆ ಬಸ್ ಮತ್ತೆ ಪ್ರಯಾಣಿಕರನ್ನು ಕರೆದುಕೊಂಡು ಬೆಂಗಳೂರಿನ ಕಡೆಗೆ ಹೊರಟಿರುವ ವಿಷಯ ಗೊತ್ತಾಗಿದೆ.

ಆಗ ಸ್ಥಳದಲ್ಲಿ ಇದ್ದ ಮತ್ತೊಂದು ಬಸ್ ನಿರ್ವಾಹಕ ವಿನಯ್ ಕುಮಾರ್, ತಕ್ಷಣ ಕಾರ್ಯಪ್ರವೃತ್ತರಾಗಿ ಮಹಿಳೆ ಬಳಿ ಇದ್ದ ಟಿಕೆಟ್ ಪಡೆದು ಆಕೆ ಪ್ರಯಾಣ ಮಾಡಿದ ಬಸ್ ಯಾವುದು ಎನ್ನುವುದನ್ನು ಪತ್ತೆ ಹಚ್ಚಿ ಆ ಬಸ್ನ ನಿರ್ವಾಹಕರಿಗೆ ದೂರವಾಣಿ ಕರೆ ಮಾಡಿ ವಿಷಯ ತಿಳಿಸಿದ್ದಾರೆ. ಆಗ ಬಸ್ನಲ್ಲಿ ಹುಡುಕಾಡಿದಾಗ ಚಿನ್ನಾಭರಣ ಇದ್ದ ಬ್ಯಾಗ್ ಬಸ್ನಲ್ಲಿ ಪತ್ತೆಯಾಗಿದೆ.

ಬ್ಯಾಗ್ ಅನ್ನು ಚನ್ನಪಟ್ಟಣಕ್ಕೆ ವಾಪಸ್ ತರಿಸಿದ ನಿರ್ವಾಹಕ ವಿನಯ್ ಕುಮಾರ್, ಚನ್ನಪಟ್ಟಣ ಬಸ್ ಘಟಕದ ಸಂಚಾರ ನಿಯಂತ್ರಕ ಶಿವಣ್ಣ ಸಮ್ಮುಖದಲ್ಲಿ ಮಹಿಳೆಗೆ ಒಪ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.