ಕುದೂರು (ಮಾಗಡಿ): ಪಟ್ಟಣದಲ್ಲಿ ಆದ್ಯ ವಚನಕಾರ ದೇವರ ದಾಸಿಮಯ್ಯ ಜಯಂತಿಯನ್ನು ಸಡಗರ-ಸಂಭ್ರಮದಿಂದ ಆಚರಿಸಲಾಯಿತು.

ಶ್ರೀರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘ ಹಾಗೂ ಕುದೂರು ದೇವಾಂಗ ಸಂಘದಿಂದ ಧಾರ್ಮಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು.

ದೇವರ ದಾಸಿಮಯ್ಯ ವೃತ್ತಿಯಲ್ಲಿ ನೇಕಾರರಾಗಿದ್ದರೂ ಶಿವನ ಅಪಾರ ಭಕ್ತರಾಗಿ ‘ರಾಮನಾಥ’ ಎಂಬ ಅಂಕಿತನಾಮದಲ್ಲಿ ಅಮೂಲ್ಯ ವಚನಗಳನ್ನು ನೀಡಿದ್ದಾರೆ. ‘ಇಳೆ ನಿಮ್ಮ ದಾನ, ಬೆಳೆ ನಿಮ್ಮ ದಾನ‘ ಎಂಬ ಅವರ ವಚನ ಇಂದಿಗೂ ಪ್ರಸ್ತುತವಾಗಿದೆ ಎಂದು ದೇವಾಂಗ ಸಂಘದ ಅಧ್ಯಕ್ಷ ಕೆ.ಆರ್.ಜಯರಾಮ್ ತಿಳಿಸಿದರು. ಹಿರಿಯ ಕ್ರೀಡಾಪಟು ಬಿ.ಆರ್.ಮುರಳಿಧರ್ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಕರ್ತವ್ಯವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವುದರ ಮೂಲಕ ದೇವರನ್ನು ಕಾಣಬಹುದು ಎಂದರು.

ಮುಖಂಡರಾದ ಜಯಚಂದ್ರಬಾಬು ಮಾತನಾಡಿ, ದಾಸಿಮಯ್ಯ ಅವರು ಸಾರಿದ ಸರಳ ಮತ್ತು ಪಾರದರ್ಶಕ ಜೀವನದ ಹಾದಿಯಲ್ಲಿ ನಾವು ಸಾಗಬೇಕು. ಅವರು ಗುರುಗಳಿಗೆ ನೀಡುತ್ತಿದ್ದ ಗೌರವ ಮತ್ತು ಶ್ರದ್ಧೆ ನಮಗೆ ಮಾದರಿ ಎಂದರು.

ಮುಖಂಡರಾದ ಚಂದ್ರಶೇಖರ್, ಪ್ರಕಾಶ್, ಸೋಮೇಶ್, ವೆಂಕಟೇಶ್, ಗೋಪಾಲಕೃಷ್ಣ, ಕುಮಾರಸ್ವಾಮಿ ಹಾಗೂ ಶ್ರೀರಾಮಲಿಂಗ ಚೌಡೇಶ್ವರಿ ದೇವಾಂಗ ಸಂಘ ಮತ್ತು ಕುದೂರು ದೇವಾಂಗ ಸಂಘದ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-14-530182796

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.