ಗುರುವಾರ , ಸೆಪ್ಟೆಂಬರ್ 19, 2019
29 °C

ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವ

Published:
Updated:

ಸಾವನದುರ್ಗ(ಮಾಗಡಿ): ಇಲ್ಲಿನ ಲಕ್ಷ್ಮೀನರಸಿಂಹಸ್ವಾಮಿ ಜಾತ್ರಾ ಮಹೋತ್ಸವ ಗುರುವಾರ ಕೋಯಿಲಾಳ್ವಾರ ತಿರುಮಂಜನ ಉತ್ಸವದೊಂದಿಗೆ ಆರಂಭವಾಯಿತು. ಅಂಕುರಾರ್ಪಣ ಯಾಗಶಾಲೆ ಪ್ರವೇಶ ಹಾಗೂ ಧ್ವಜಾರೋಹಣಕ್ಕೆ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್‌.ನಾಗರಾಜು ಚಾಲನೆ ನೀಡಿದರು.

ಭೇರಿತಾಡನ, ಹಂಸವಾಹನೋತ್ಸವ, ಮತ್ಸ್ಯಾವತಾರ, ಕೂರ್ಮಾವತಾರ, ವರಹಾವತಾರ, ನೂರೊಂದೆಡೆ ಸೇವೆ, ಸಿಂಹವಾಹನೋತ್ಸವ, ಕೃಷ್ಣೋತ್ಸವ, ಛಾಯಾದಿ ಉತ್ಸವ, ಬೆಳ್ಳಿ ಅಲಂಕಾರ, ಚಿಕ್ಕಗರುಡೋತ್ಸವ ನಡೆದವು.

ಸೇವಾಕರ್ತರಾದ ಹೊಸಪೇಟೆ ರೇವಮ್ಮ ನರಸಿಂಹಯ್ಯ ಹಾಗೂ ಭಕ್ತರು ಇದ್ದರು.

Post Comments (+)