ರಾಮನಗರ: ನಗರದೊಳಗೆ ಹರಿಯುವ ಅರ್ಕಾವತಿ ನದಿ ದಂಡೆಗೆ ಹೊಸ ಸ್ಪರ್ಶ ನೀಡುವ ಮಹತ್ವಕಾಂಕ್ಷಿ ಅರ್ಕಾವತಿ ನದಿ ದಂಡೆ ಅಭಿವೃದ್ದಿ ಯೋಜನೆಗೆ (ಅರ್ಕಾವತಿ ರಿವರ್ ಫ್ರಂಟ್ ಡೆವಲಪ್ಮೆಂಟ್) ನದಿಗೆ ಹೊಂದಿಕೊಂಡಂತಿರುವ ಪುರಾತನ ಅರ್ಕೇಶ್ವರ ದೇವಾಲಯ, ಐತಿಹಾಸಿಕ ಪಿರಾನ್ ಷಾ ವಲಿ ದರ್ಗಾ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳು ಹಾಗೂ ವಸತಿ ಪ್ರದೇಶ ಭೂ ಸ್ವಾಧೀನವಾಗಲಿದೆ.

ನದಿಯ ಎರಡೂ ದಂಡೆಯಲ್ಲಿ ಪ್ರವಾಸೋದ್ಯಮ ಅಭಿವೃದ್ಧಿ ಮತ್ತು ಸೌಂದರ್ಯೀಕರಣ ಮಾಡುವ ಉದ್ದೇಶದ ಯೋಜನೆಗೆ ಅಗತ್ಯವಿರುವ ಭೂಮಿ ಸ್ವಾಧೀನಪಡಿಸಿಕೊಳ್ಳಲು ಜಿಲ್ಲಾಧಿಕಾರಿ ಜ. 20ರಂದೇ ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆಗೆ ಭೂಮಿ ಕಳೆದುಕೊಳ್ಳುವವರು 60 ದಿನದೊಳಗೆ ತಮ್ಮ ಆಕ್ಷೇಪಣೆ ಸಲ್ಲಿಸಬೇಕಿದೆ. ಭೂ ಸ್ವಾಧೀನಕ್ಕೆ ಹಲವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

28 ಎಕರೆ ಸ್ವಾಧೀನ: ಯೋಜನೆಗಾಗಿ ಒಟ್ಟು 28 ಎಕರೆ 18 ಗುಂಟೆ ಜಮೀನು ಭೂ ಸ್ವಾಧೀನವಾಗಲಿದೆ. ಈ ಪೈಕಿ ರಾಮನಗರ ಗ್ರಾಮದ ವ್ಯಾಪ್ತಿಯಲ್ಲಿ 14 ಎಕರೆ 14 ಗುಂಟೆ, ಜಿಗೇನಹಳ್ಳಿಯಲ್ಲಿ 3 ಎಕರೆ 9 ಗುಂಟೆ, ಬೋಳಪ್ಪನಹಳ್ಳಿ ಅಮಾನಿಕೆರೆಯಲ್ಲಿ 3 ಎಕರೆ 7 ಗುಂಟೆ ಹಾಗೂ ಐಜೂರಿನಲ್ಲಿ 7 ಎಕರೆ 30 ಗುಂಟೆ ಜಮೀನು ಭೂ ಸ್ವಾಧೀನವಾಗಲಿದೆ.

ರಾಮನಗರ ವ್ಯಾಪ್ತಿಯಲ್ಲಿ ನದಿಗೆ ಹೊಂದಿಕೊಂಡಿರುವ ಸರ್ವೆ ನಂ. 11ರಲ್ಲಿರುವ ಅರ್ಕೇಶ್ವರ ದೇವಸ್ಥಾನ ಹಾಗೂ ಸರ್ವೆ ನಂ. 113ರಲ್ಲಿರುವ ಮಹಮದ್ ಪೀರ್ ಬಾಬಾ ಸಾಬ್ ದರ್ಗಾ ಹಾಗೂ ನದಿ ಪಕ್ಕದಲ್ಲಿರುವ ರಾಘವೇಂದ್ರ ಕಾಲೊನಿಯ 40ಕ್ಕೂ ಹೆಚ್ಚು ಮನೆಗಳು ಸಹ ಭೂ ಸ್ವಾಧೀನಕ್ಕೆ ಒಳಗಾಗಿವೆ.

ನದಿಯ ಮತ್ತೊಂದು ಭಾಗದಲ್ಲಿರುವ ಕನ್ನಿಕಾ ಪರಮೇಶ್ವರಿ ದೇವಸ್ಥಾನ, ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಮೀಸಲಿಟ್ಟಿರುವ ಜಾಗ, ಬಾಲಾಜಿ ಆಸ್ಪತ್ರೆ, ಷರೀಫ್ ಕಾಂಪ್ಲೆಕ್ಸ್, ಸಾಯಿಬಾಬಾ ದೇವಸ್ಥಾನದ ಜಾಗವನ್ನು ಸಹ ಭೂ ಸ್ವಾಧೀನಪಡಿಸಿಕೊಳ್ಳಲು ಗುರುತಿಸಲಾಗಿದೆ. ಐಜೂರು ಗ್ರಾಮದಲ್ಲಿ 25 ಮಂದಿಯ ಜಮೀನು ಸರ್ವೆ 21ರಲ್ಲಿ 8 ಎಕರೆ 35 ಗುಂಟೆ ಇರುವ ಕ್ರೈಸ್ತರ ಸ್ಮಶಾನ ಸಹ ಭೂ ಸ್ವಾಧೀನವಾಗಲಿದೆ.

ತಡೆಗೋಡೆ ನಿರ್ಮಾಣ: ಯೋಜನೆಯು ₹124 ಕೋಟಿ ಮೊತ್ತದ್ದಾಗಿದೆ. ಈಗಾಗಲೇ ನದಿಯ ಎರಡೂ ದಂಡೆಯಲ್ಲಿ 1.95 ಕಿ.ಮೀ. ಉದ್ದ ತಡೆಗೋಡೆ ನಿರ್ಮಾಣ ಕಾರ್ಯ ಭರದಿಂದ ನಡೆಯುತ್ತಿದೆ. ಅರ್ಕಾವತಿ ನದಿ ದಂಡೆಯನ್ನು ಲಂಡ್ನ ಥೇಮ್ಸ್ ನದಿ ದಂಡೆ ಮಾದರಿಯಲ್ಲಿ ಅಭಿವೃದ್ದಿಪಡಿಸಬೇಕೆಂಬ ಕೂಗು ಹಲವು ವರ್ಷಗಳಿಂದ ಕೇಳಿ ಬರುತ್ತಲೇ ಇತ್ತು. 2024ರ ಬಜೆಟ್ನಲ್ಲಿ ಮಹತ್ವಕಾಂಕ್ಷಿಯ ಈ ಯೋಜನೆ ಘೋಷಣೆಯಾಯಿತು.

ಯೋಜನೆ ಕುರಿತು ಪ್ರತಿಕ್ರಿಯೆ ಪಡೆಯಲು ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ಕರೆ ಮಾಡಿದಾಗ ಕನೆಕ್ಟ್ ಆಗಲಿಲ್ಲ. ಯೋಜನೆ ಅನುಷ್ಠಾನದ ಹೊಣೆ ಹೊತ್ತಿರುವ ಕಾವೇರಿ ನೀರಾವರಿ ನಿಗಮದ ಕಾರ್ಯನಿರ್ವಾಹಕ ಎಂಜಿನಿಯರ್ಗೆ ಕರೆ ಮಾಡಿದಾಗ ಸ್ವೀಕರಿಸಲಿಲ್ಲ. ಸಂದೇಶಕ್ಕೂ ಪ್ರತಿಕ್ರಿಯಿಸಲಿಲ್ಲ.

ಸ್ವಾಧೀನ ವಿರೋಧಿಸಿ ಆಕ್ಷೇಪಣೆ ಭೂ ಸ್ವಾಧೀನ ಅಧಿಸೂಚನೆಯನ್ನು ಜ. 20ರಂದೇ ಹೊರಡಿಸಲಾಗಿದ್ದು 60 ದಿನಗಳೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಲಾಗಿದೆ. ದರ್ಗಾ ಅರ್ಕೇಶ್ವರ ದೇವಾಲಯ ರಾಘವೇಂದ್ರ ಕಾಲೊನಿಯಲ್ಲಿ ಭೂ ಸ್ವಾಧೀನಕ್ಕೆ ವಿರೋಧ ವ್ಯಕ್ತವಾಗಿದೆ. ರಾಘವೇಂದ್ರ ಕಾಲೊನಿ ನಿವಾಸಿಗಳು ಸೇರಿದಂತೆ ಹಲವರು ಭೂ ಸ್ವಾಧೀನ ಕೈ ಬಿಡುವಂತೆ ಈಗಾಗಲೇ ಜಿಲ್ಲಾಧಿಕಾರಿಗೆ ಆಕ್ಷೇಪಣೆ ಸಲ್ಲಿಸಿದ್ದಾರೆ. ಶಾಸಕರ ಜಾಗವೂ ಸ್ವಾಧೀನ ಐಜೂರಿನ ಸರ್ವೆ ನಂ. 14ರಲ್ಲಿ ನದಿಗೆ ಹೊಂದಿಕೊಂಡಂತಿರುವ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಅವರಿಗೆ ಸೇರಿದ ತಲಾ 26 ಗುಂಟೆ ಮತ್ತು 22 ಗುಂಟೆ ಹಾಗೂ ಸರ್ವೆ ನಂ. 15ರಲ್ಲಿ 17 ಗುಂಟೆ ಜಮೀನನ್ನು ಸಹ ಭೂ ಸ್ವಾಧೀನಕ್ಕೆ ಗುರುತಿಸಲಾಗಿದೆ. ಯೋಜನೆಗೆ ಹುಸೇನ್ ಅವರು ಹೆಚ್ಚಿನ ಆಸ್ಥೆ ವಹಿಸಿದ್ದಾರೆ. ತಮ್ಮ ಪ್ರತಿ ಭಾಷಣದಲ್ಲೂ ಯೋಜನೆ ಕುರಿತು ಅವರು ಪ್ರಸ್ತಾಪಿಸುವುದು ಸಾಮಾನ್ಯವಾಗಿದೆ.

ಸಾಮಾಜಿಕ ಪರಿಣಾಮ ಅಧ್ಯಯನವಿಲ್ಲ ಭೂ ಸ್ವಾಧೀನ ಪಾರದರ್ಶಕತೆ ಸೂಕ್ತ ಪರಿಹಾರ ಹಕ್ಕು ಪುನರ್ವವಸತಿ ಮತ್ತು ಪುರ್ನವ್ಯವಸ್ಥೆ ಹಕ್ಕು ನಿರ್ಮಾಣ ಕಾಯ್ದೆ– 2013ರಡಿ ಭೂ ಸ್ವಾಧೀನಕ್ಕೆ ಅಧಿಸೂಚನೆ ಹೊರಡಿಸಲಾಗಿದೆ. ಭೂಸ್ವಾಧೀನ ಮಾಡುವಾಗ ಸಾಮಾಜಿಕ ಪರಿಣಾಮ ಅಧ್ಯಯನ ಮಾಡಬೇಕು. ಆದರೆ ಕಾಯ್ದೆಯ ಕಲಂ 10 (ಎ) ಅಡಿ ಸ್ವಾಧೀನವಾಗಲಿರುವ ನಾಲ್ಕು ಗ್ರಾಮಗಳ ಒಟ್ಟು 28 ಎಕರೆ 18 ಗುಂಟೆ ಪ್ರದೇಶದಲ್ಲಿ ಅಧ್ಯಯನ ನಡೆಸುವುದರಿಂದ ವಿನಾಯಿತಿ ನೀಡಲಾಗಿದೆ. ಹಾಗಾಗಿ ಯೋಜನೆಗೆ ಸಂಬಂಧಿಸಿದಂತೆ ಸಾಮಾಜಿಕ ಪರಿಣಾಮದ ಅಧ್ಯಯನ ನಡೆಯುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.