ರಾಮನಗರ: ‘ಇತ್ತೀಚಿನ ದಿನಗಳಲ್ಲಿ ಜನರಿಗೆ ಅನುಕೂಲವಾಗುವಂತೆ ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುವುದರಿಂದ ಜನಗಳಿಗೆ ಸಮಯದ ಉಳಿತಾಯವಾಗುತ್ತದೆ. ಆ ನಿಟ್ಟಿನಲ್ಲಿ ಡಿಜಿಟಲ್ ಪಾವತಿಗಳನ್ನು ಮಾಡುವಾಗ ಎಚ್ಚರಿಕೆ ವಹಿಸಿ ಸರಿಯಾದ ಕ್ರಮವನ್ನು ಅನುಸರಿಸಬೇಕು’ ಎಂದು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಮೋಹನ್ ಕುಮಾರ್ ವೈ.ಎನ್. ಹೇಳಿದರು.

ನಗರದ ಸಾಯಿ ಪಾರ್ಟಿ ಹಾಲ್ನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್ ವತಿಯಿಂದ ಮಹಿಳೆಯರಿಗಾಗಿ ಡಿಜಿಟಲ್ ಪಾವತಿಗಳ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಸಪ್ತಾಹ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಡಿಜಿಟಲ್ ಪಾವತಿ ಮಾಡುವಾಗ ಇತ್ತೀಚೆಗೆ ಹೆಚ್ಚಿನ ವಂಚನೆಗಳು ನಡೆಯುತ್ತಿವೆ. ಹಾಗಾಗಿ ಅಪರಿಚಿತ ಕರೆಗಳಿಗೆ ಯಾರೂ ಉತ್ತರಿಸಬಾರದು. ಪಾವತಿ ಸಂದರ್ಭದಲ್ಲಿ ಬರುವ ನಿಮ್ಮ ಒಟಿಪಿಯನ್ನು ಯಾರಿಗೂ ಹೇಳಬಾರದು’ ಎಂದು ಸಲಹೆ ನೀಡಿದರು.

ಭಾರತೀಯ ರಿಸರ್ವ್ ಬ್ಯಾಂಕ್ ಸಹಾಯಕ ಮುಖ್ಯ ಪ್ರಬಂಧಕ ಸುಧೀರ್ ಕೇಸರವಾಣಿ ಮಾತನಾಡಿ, ‘ಭಾರತವು ಡಿಜಿಟಲ್ ಪಾವತಿಗಳಲ್ಲಿ ಮುಂಚೂಣಿ ರಾಷ್ಟ್ರವಾಗಿದೆ. ಅದರಲ್ಲಿ ಕರ್ನಾಟಕದ ಪಾತ್ರ ಮಹತ್ವದಾಗಿರುತ್ತದೆ. ಡಿಜಿಟಲ್ ಪಾವತಿಗಳನ್ನು ಬಳಕೆ ಮಾಡುವಾಗ ಆಯಾ ಬ್ಯಾಂಕಗಳ ಆ್ಯಪ್ಗಳನ್ನು ಉಪಯೋಗಿಸಬೇಕು’ ಎಂದು ಹೇಳಿದರು.

‘ಭಾರತೀಯ ರಿಸರ್ವ್ ಬ್ಯಾಂಕ್ ಈ ವರ್ಷ ಡಿಜಿಟಲ್ ಪಾವತಿಗಳ ಜಾಗೃತಿ ಸಪ್ತಾಹ ಕಾರ್ಯಕ್ರಮದ ಅಂಗವಾಗಿ ಸ್ವಲ್ಪ ಗಮನವಿಟ್ಟು ಎಂಬ ಧ್ಯೇಯ ವಾಕ್ಯದಡಿ ಇಡೀ ಭಾರತದಾದ್ಯಂತ ಈ ಸಪ್ತಾಹ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯ್ತಿಯ ಲೆಕ್ಕಾಧಿಕಾರಿ ಡಾ. ನಂದೀಶ್ ಎಚ್.ಡಿ. ಮಾತನಾಡಿ, ‘ಸ್ವಸಹಾಯ ಸಂಘದ ಮಹಿಳೆಯರು ಹೆಚ್ಚಿನವರು ಡಿಜಿಟಲ್ ಯುಗದಲ್ಲಿ ಡಿಜಿಟಲ್ ಪಾವತಿಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಇದರಿಂದ ಜನರಿಗೆ ತುಂಬಾ ಸಹಾಯವಾಗುತ್ತದೆ. ಅದರ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ತಿಳಿದುಕೊಳ್ಳುವುದು ಬಹಳ ಮುಖ್ಯ. ಅದಕ್ಕೆ ಇವತ್ತಿನ ಕಾರ್ಯಕ್ರಮ ನಿಮ್ಮೆಲ್ಲರಿಗೂ ತುಂಬಾ ಉಪಯುಕ್ತವಾಗಿದೆ’ ಎಂದರು.

ಕಾರ್ಯಕ್ರಮದ ಅಂಗವಾಗಿ ಭಿತ್ತಿಪತ್ರಗಳನ್ನು ಅನಾವರಣ ಮಾಡಲಾಯಿತು. ಈ ಸಂದರ್ಭದಲ್ಲಿ ಲೀಡ್ ಬ್ಯಾಂಕ್ ಎಫ್.ಎಲ್.ಸಿಗಳಾದ ಸುಮಲತಾ.ಕೆ, ರೂಪಲಕ್ಷ್ಮಿ, ಮಹಾಂತೇಶ್ ಹಾಗೂ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.